ಒಂದೇ ಶ್ವಾನಕ್ಕೆ ಎರಡೆರಡು ಶಸ್ತ್ರಚಿಕಿತ್ಸೆ!
Team Udayavani, May 7, 2018, 7:10 AM IST
ಉಡುಪಿ: ಇಲ್ಲಿನ ಮಾರುತಿ ವೀಥಿಕಾದಲ್ಲಿ ಹಲವು ಸಮಯ ದಿಂದ ಹೊಟ್ಟೆಯಡಿ ಗಡ್ಡೆ ಬೆಳೆದು ನರಳಾಡುತ್ತಿದ್ದ ಶ್ವಾನ ಕೊನೆಗೂ ಈಗ ನಿರಾಳವಾಗಿದೆ.
ನಗರಾಡಳಿತ ಮಾಡಿಸಿದ್ದ ಸಂತಾನ ಹರಣ ಶಸ್ತ್ರಚಿಕಿತ್ಸೆ ಬಳಿಕ ನಾಯಿಗೆ ಗಡ್ಡೆ ಬೆಳೆದಿದ್ದು, ಶಸ್ತ್ರಚಿಕಿತ್ಸೆ ವಿಫಲವಾಗಿ ಹೀಗಾಗಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು. ಶ್ವಾನಕ್ಕೆ ಪೇಟೆ ಸುತ್ತಮುತ್ತ ಜನ ಆಹಾರ ಹಾಕುತ್ತಿದ್ದು, ಅದರ ಕಷ್ಟ ನೋಡಿ, ಗಡ್ಡೆ ತೆಗೆಯುವ ಶಸ್ತ್ರ ಚಿಕಿತ್ಸೆಗೆ ಪ್ರಯತ್ನಿಸಿದ್ದರು. ಶ್ವಾನವನ್ನು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ವಿನಯಚಂದ್ರ ಸಾಸ್ತಾನ ಅವರೊಂದಿಗೆ ಶ್ರೀನಿಧಿ ಮೆಡಿಕಲ್‌ನ ಪ್ರಸಾದ್ ಭಟ್ ಕೆಮ್ಮಣ್ಣು ಅವರು ಶ್ವಾನವನ್ನು ಪಶು ವೈದ್ಯರಲ್ಲಿಗೆ ಕರೆದೊಯ್ದರು. ಪಶುಚಿಕಿತ್ಸಕ ಡಾ| ಸಂದೀಪ್ ಕುಮಾರ್ ಅವರು ಶ್ವಾನದ ಉದರ ಶಸ್ತ್ರಚಿಕಿತ್ಸೆ ನಡೆಸಿ 1.50 ಕೆ.ಜಿ. ಗೆಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಈಗ ಶ್ವಾನ ಆರೋಗ್ಯವಾಗಿದ್ದು, ಎಂದಿನಂತೆ ಓಡಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.