ಉಚ್ಚಿಲ ವಾರದ ಸಂತೆ: ಹೆದ್ದಾರಿಯಲ್ಲಿ ಅಪಾಯದ ಹೆಬ್ಟಾಗಿಲು


Team Udayavani, Apr 2, 2019, 6:30 AM IST

UCHILA-VARA-SANTE

ಪಡುಬಿದ್ರಿ: ಪ್ರತಿ ಸೋಮವಾರ ಉಚ್ಚಿಲದಲ್ಲಿ ನಡೆಯುವ ವಾರದ ಸಂತೆಯು ಹೆದ್ದಾರಿಯನ್ನೇ ನುಂಗುತ್ತಾ ಸಾಗುತ್ತಿದೆ. ಇದು ಹೆದ್ದಾರಿ ಪ್ರಯಾಣಿಕರಿಗೆ, ಪಾದಚಾರಿಗಳಿಗೆ ಹಾಗೂ ಅಲ್ಲಿ ಸಂಚರಿಸುವ ವಾಹನ ಸವಾರರಿಗೂ ಅಪಾಯವನ್ನು ಒಡ್ಡುವ ಭೀತಿ ಎದುರಾಗಿದೆ.

ಉಚ್ಚಿಲ ಸುತ್ತಮುತ್ತಲಲ್ಲಿ ಹಳ್ಳಿಗಳೇ ಇರುವುದರಿಂದ ತಮ್ಮ ವಾರದ ಆಹಾರ ಪದಾರ್ಥಗಳಿಗಾಗಿ ವಾರದ ಸಂತೆಯನ್ನೇ ನೆಚ್ಚಿಕೊಂಡವರಿದ್ದಾರೆ. ಹಾಗಾಗಿ ಎಲ್ಲರೂ ಉಚ್ಚಿಲ ಪೇಟೆಗೆ ಬರುವಾಗ ಸಂತೆಯ ಸ್ಥಳವೂ ಬಹಳಷ್ಟು ಇಕ್ಕಟ್ಟಾಗಿರುವುದರಿಂದ ವ್ಯಾಪಾರಗಳು ಹೆದ್ದಾರಿ ಬದಿಯಲ್ಲೇ ನಡೆಯುತ್ತವೆ.

ಹೆದ್ದಾರಿ ಬದಿ ಯರ್ರಾಬಿರ್ರಿ ವಾಹನ ನಿಲುಗಡೆ: ಪ್ರವೇಶ
ಸಂತೆಗೆ ಬರುವವರೂ ತಮ್ಮ ವಾಹನಗಳನ್ನು ಹೆದ್ದಾರಿ ಬದಿಯಲ್ಲೇ ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಮತ್ತು ವಿರುದ್ಧ ದಿಕ್ಕಿನಿಂದ ಬರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಪಾದಚಾರಿಗಳಿಗೆ ರಸ್ತೆ ದಾಟಲೂ ತೊಂದರೆಗಳುಂಟಾಗುತ್ತಿವೆ. ದ್ವಿಚಕ್ರ ಸವಾರರು ಯರ್ರಾಬಿರ್ರಿಯಾಗಿ ಹೆದ್ದಾರಿ ಪ್ರವೇಶಿಸುತ್ತಾರೆ. ಈ ನಡುವೆ ಹೆದ್ದಾರಿ ವಾಹನಗಳು 100ಕಿಮೀ.ಗೂ ವೇಗದ ಸ್ಥಿತಿಯಲ್ಲಿ ಇರುವುದರಿಂದ ಈ ವೇಳೆ ಇಲ್ಲಿ ಪೊಲೀಸ್‌ ಸೇವೆ ಅತ್ಯಗತ್ಯವಾಗಿದೆ.

ಹಳೆಯ ಮಿನು ಮಾರುಕಟ್ಟೆಯಲ್ಲಿ ಸ್ಥಳಾವಕಾಶದ ಕೊರತೆ
ಸಂತೆ ಮಾರುಕಟ್ಟೆ ಸಮೀಪವೇ ಹಳೆಯ ಮೀನುಮಾರುಕಟ್ಟೆಯೂ ಉಚ್ಚಿಲದಲ್ಲಿದೆ. ಕೇವಲ ಒಂದಿಬ್ಬರಿಗೆ ಇಲ್ಲಿ ಕೂತು ಮೀನು ಮಾರಾಟ ಮಾಡುವ ಅವಕಾಶವಿದ್ದು ಮಿಕ್ಕವರು ಹೆದ್ದಾರಿಯಲ್ಲೇ ಮೀನು ಮಾರಾಟವನ್ನು ನಡೆಸುತ್ತಾರೆ. ಮೀನಿನ ನೀರೂ ಇಲ್ಲಿ ಹೆದ್ದಾರಿ ಪಕ್ಕದಲ್ಲೇ ಹರಿಯುವುದರಿಂದ ಹೆದ್ದಾರಿಯಲ್ಲಿ ಬಸ್‌ಗಾಗಿ ಕಾಯು
ವವರೂ ತೊಂದರೆಗೊಳಗಾಗುತ್ತಿದ್ದಾರೆ.

ಹಾಗಾಗಿ ಮೀನು ಮಾರುಕಟ್ಟೆ ಮತ್ತು ವಾರದ ಸಂತೆಯನ್ನು ಉಚ್ಚಿಲದಲ್ಲಿ ವಿಶಾಲ ಸ್ಥಳಾವಕಾಶವಿರುವಲ್ಲಿಗೆ
ಸ್ಥಳಾಂತರಿಸಬೇಕು ಎನ್ನುವುದೂ ಸ್ಥಳೀಯರ ಆಶಯವಾಗಿದೆ.
ವಾರದ ಸಂತೆಯ ಗೊಂದಲ, ವಾಹನ ಸವಾರರು, ಪಾದಚಾರಿಗಳಿಗೆ
ಸದಾ ಅಪಾಯದ ಭಯಗಳಿಂದ ಮುಕ್ತಿಗಳಿಗಾಗಿ ಸಂತೆಮತ್ತು ಸುಸಜ್ಜಿತ ಮೀನು ಮಾರುಕಟ್ಟೆಯ ನಿರ್ಮಾಣವು ಉಚ್ಚಿಲದಲ್ಲಿ ಬೇರೆಡೆ ಆಗಬೇಕಿದೆ ಎನ್ನುವುದು ಉಚ್ಚಿಲ ಪೊಲ್ಯ ನಿವಾಸಿ ಅಬ್ದುಲ್‌ ಕರೀಮ್‌
ಅಭಿಮತವಾಗಿದೆ.

ಕಾಪುವಿನಲ್ಲಿ ಚುನಾವಣಾ ಕರ್ತವ್ಯದಲ್ಲಿರುವ ಬಡಾ ಗ್ರಾ. ಪಂ. ಉಚ್ಚಿಲದ ಪಿಡಿಒ ಕುಶಾಲಿನಿ ಅವರು ಈಗಾಗಲೇ ಬಡಾ ಗ್ರಾ. ಪಂ. ಗೂ ಈ ಕುರಿತಾದ ದೂರುಗಳು ಬಂದಿದ್ದು ಈಗಾಗಲೇ ಹೆದ್ದಾರಿಗೆ ಸೂಚಿತವಾದ ಜಾಗವನ್ನು ಬಿಟ್ಟು ಉಳಿದಂತೆ ಇರುವ ಬೇರೆಯೇ ಜಾಗದಲ್ಲಿ ಮೀನು ಮಾರುಕಟ್ಟೆಯನ್ನೂ, ವಾರದ ಸಂತೆಯನ್ನೂ ಸ್ಥಳಾಂತರಿಸುವ ಯೋಚನೆಗಳನ್ನು ಗ್ರಾ. ಪಂ. ಮಾಡುತ್ತಿದೆ. ಮೀನು ಮಾರುಕಟ್ಟೆ ನಿರ್ಮಾಣಕ್ಕಾಗಿ ಮೀನುಗಾರಿಕಾ ಇಲಾಖಾ ಅನುದಾನಕ್ಕೂ ಬರೆದುಕೊಳ್ಳಲಾಗಿದೆ ಎಂದಿದ್ದಾರೆ.

ಟಾಪ್ ನ್ಯೂಸ್

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

kmc

Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.