Uchila Dasara: ಛದ್ಮವೇಷ ವಿಜೇತರಿಗೆ ಬಹುಮಾನ ವಿತರಣೆ
ದಸರೆಯಿಂದ ಕ್ಷೇತ್ರದ ಪ್ರತಿಷ್ಠೆ ಹೆಚ್ಚಳ: ಶೀರೂರು ಶ್ರೀ
Team Udayavani, Oct 20, 2023, 11:58 PM IST
ಕಾಪು: ಉಚ್ಚಿಲದ ಮಹಾಲಕ್ಷ್ಮೀ ತಾಯಿ ಸಂಪತ್ತಿನ ಅಧಿದೇವತೆ. ಇಲ್ಲಿ ವಿಶೇಷ ಚೈತನ್ಯವಿದ್ದು ಮಾತೆ ಎಲ್ಲರನ್ನೂ ಕಾಯುವುದರ ಜತೆಗೆ ಭಕ್ತರ ಅಭೀಷ್ಟಗಳನ್ನು ನೆರವೇರಿಸುತ್ತಾಳೆ. ಉಚ್ಚಿಲ ದಸರಾ ಮೂಲಕ ಕ್ಷೇತ್ರದ ಶಕ್ತಿ ಹೆಚ್ಚಿದೆ ಮಾತ್ರವಲ್ಲದೇ ಮೊಗವೀರರ ಪ್ರತಿಷ್ಠೆ ಹೆಚ್ಚಿಸಿದೆ ಎಂದು ಉಡುಪಿ ಶ್ರೀ ಶೀರೂರು ಮಠದ ಯತಿ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಹೇಳಿದರು.
ಶುಕ್ರವಾರ ಉಚ್ಚಿಲ ದೇವಸ್ಥಾನಕ್ಕೆ ಭೇಟಿ ನೀಡಿ, ನವದುರ್ಗೆಯರು ಮತ್ತು ಶಾರದಾ ಮಾತೆಯ ದರ್ಶನ ಪಡೆದ ಬಳಿಕ ಅವರು ಆಶೀರ್ವಚನ ನೀಡಿದರು.
ಶಾರದಾ ಮಾತೆ ಛದ್ಮವೇಷ ಸ್ಪರ್ಧೆ
ದಸರಾ ಪ್ರಯುಕ್ತ ಶುಕ್ರವಾರ ಮುದ್ದು ಮಕ್ಕಳಿಗೆ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ ನಡೆಯಿತು. 1ರಿಂದ 5 ವರ್ಷದವರ ವಿಭಾದಲ್ಲಿ ವೈ. ಆರಾಧ್ಯ ಭಟ್ (ಪ್ರ.), ಶಿವಿಕಾ ಡಿಂಪಲ್ (ದ್ವಿ.), ಸಾನ್ವಿಕಾ ಎಸ್. ಪೂಜಾರಿ (ತೃ.) ಹಾಗೂ 6ರಿಂದ 10 ವರ್ಷದವರ ವಿಭಾಗದಲ್ಲಿ ತನಿಶಾ ಕೋಡಿಕಲ್ (ಪ್ರ.), ಸನಿಹಾ ಜೆ.ಕೆ. (ದ್ವಿ.), ಪ್ರಾಪ್ತಿ ಪಿ. ಶೆಟ್ಟಿ (ತೃ) ಬಹುಮಾನ ಗೆದ್ದಿದ್ದಾರೆ. ಕ್ರಮವಾಗಿ 10, 6 ಮತ್ತು 3 ಸಾವಿರ ರೂ. ಹಾಗೂ ಸ್ಪರ್ಧಿಸಿದ ಎಲ್ಲರಿಗೂ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ತಲಾ 1 ಸಾವಿರ ರೂ. ಗೌರವಧನ ನೀಡಲಾಯಿತು. ಶಾಲಿನಿ ಜಿ. ಶಂಕರ್ ಬಹುಮಾನ ವಿತರಿಸಿದರು.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ. ಅಮೀನ್, ಪ್ರಧಾನ ಅರ್ಚಕ ವೇ| ಮೂ| ರಾಘವೇಂದ್ರ ಉಪಾಧ್ಯಾಯ, ಮಹಿಳಾ ಸಂಘದ ಅಧ್ಯಕ್ಷೆ ಉಷಾ ರಾಣಿ, ಕಾಪು ನಾಲ್ಕುಪಟ್ಣ ಮೊಗವೀರ ಮಹಾಸಭಾದ ಅಧ್ಯಕ್ಷ ಮನೋಜ್ ಕಾಂಚನ್, ಮಹಿಳಾ ಸಭಾದ ಅಧ್ಯಕ್ಷೆ ಸುಗುಣಾ ಕರ್ಕೇರ, ಬಡಾ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್ ಮೆಂಡನ್, ಸಂಘಟಕರಾದ ವಿಶ್ವಾಸ್ ಅಮೀನ್, ಶಂಕರ್ ಸಾಲ್ಯಾನ್, ದಿನೇಶ್ ಮೂಳೂರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ ಸಂಚಾಲಕ ಸತೀಶ್ ಅಮೀನ್ ಪಡುಕೆರೆ ಸ್ವಾಗತಿಸಿ, ವಂದಿಸಿದರು. ವಿಜೇತಾ ಶೆಟ್ಟಿ ನಿರ್ವಹಿಸಿದರು.
ರಂಗೋಲಿ, ಮಹಿಳೆಯರ
ಹುಲಿವೇಷ ಸ್ಪರ್ಧೆ
ಅ. 21ರಂದು ಪೂರ್ವಾಹ್ನ 9ಕ್ಕೆ ಚಂಡಿಕಾ ಹೋಮ, ಮಧ್ಯಾಹ್ನ ನವದುರ್ಗೆಯರಿಗೆ ಮಹಾಮಂಗಳಾ ರತಿ, ಮಹಾಪೂಜೆ, ಅನ್ನಸಂತರ್ಪಣೆ, 2ರಿಂದ ರಂಗೋಲಿ ಸ್ಪರ್ಧೆ ಮಹಿಳೆಯರಿಗೆ (ಸಾಂಪ್ರದಾಯಿಕ), ಪುರುಷರಿಗೆ (ಐಚ್ಛಿಕ), ಮಧ್ಯಾಹ್ನ 2.30ರಿಂದ ಮಹಿಳೆಯರ ಹುಲಿವೇಷ ಸ್ಪರ್ಧೆ, ಸಂಜೆ ಸಾವಿರ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಧಾರ್ಮಿಕ ಸಭೆ, ರಾತ್ರಿ ಮಹಾಪೂಜೆ, ಕಲೊ³àಕ್ತ ಪೂಜೆ, ರಾತ್ರಿ “ನೃತ್ಯ ಮತ್ತು ಸಂಗೀತ ವೈಭವ’ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.