ಉಚ್ಚಿಲ-ಪಣಿಯೂರು: ತ್ಯಾಜ್ಯದಿಂದ ಮುಚ್ಚಿ ಹೋದ ರಸ್ತೆ ಬದಿ ಚರಂಡಿ
Team Udayavani, May 23, 2019, 6:07 AM IST
ಕಾಪು: ಕಾಪು ತಾಲೂಕಿನ ಉಚ್ಚಿಲ – ಪಣಿಯೂರು ಪಿ.ಡಬ್ಲೂ.ಡಿ ರಸ್ತೆಯ ಇಕ್ಕೆಲಗಳಲ್ಲಿರುವ ಮಳೆ ನೀರು ಹರಿಯುವ ಚರಂಡಿಯು ತ್ಯಾಜ್ಯದ ಕೊಂಪೆಯಾಗಿದೆ ಇಲ್ಲಿ ವ್ಯಾಪಕ ಪರಿಸರ ಮಾಲಿನ್ಯ ಉಂಟಾಗುತ್ತಿದ್ದು, ಮಳೆ ಬಂದರೆ ಸಾಂಕ್ರಾಮಿಕ ರೋಗಭೀತಿ ಕಾಡಿದೆ.
ರಾ.ಹೆ. 66ರ ಉಚ್ಚಿಲ ಮೂಲಕವಾಗಿ ಪಣಿಯೂರು ರಸ್ತೆಯನ್ನು ಪ್ರವೇಶಿಸುವಲ್ಲಿಂದ ಹಿಡಿದು ಮುಳ್ಳಗುಡ್ಡೆ ಕ್ರಾಸ್‌ನವರೆಗಿನ ರಸ್ತೆಯ ಇಕ್ಕೆಲಗಳ ಚರಂಡಿ ಹಾಗೂ ಚರಂಡಿ ಇಲ್ಲದಿರುವ ಪ್ರದೇಶಗಳಲ್ಲಿ ರಸ್ತೆ ಬದಿಯಲ್ಲೇ ತ್ಯಾಜ್ಯ ಎಸೆಯಲಾಗಿದೆ.
ಸಂಜೆಯಾಗುತ್ತಿದ್ದಂತೆ ಜನರು ಇಲ್ಲಿ ತ್ಯಾಜ್ಯ ಎಸೆಯುತ್ತಾರೆ. ಆಹಾರ, ಬಟ್ಟೆ, ಕಸ ಎಲ್ಲೆಂದರಲ್ಲಿ ಎಸೆಯಲಾಗಿದೆ. ಇದರಿಂದ ಬಡಾ ಗ್ರಾ.ಪಂ.ಗೆ ತ್ಯಾಜ್ಯದ ಕುಖ್ಯಾತಿ ಅಂಟಿಕೊಂಡಿದೆ. ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಭಾಸ್ಕರ ನಗರ, ಪೊಲ್ಯ, ಮುಳ್ಳಗುಡ್ಡೆ, ಪೋಂಕ್ರಡು³, ಕಟ್ಟಿಂಗೇರಿ ಪರಿಸರದ ಜನರು ಮಾತ್ರವಲ್ಲದೇ ಈ ರಸ್ತೆಯಲ್ಲಿ ಓಡಾಡುವ ನೆರೆಯ ಎಲ್ಲೂರು, ಕುಂಜೂರು, ಪಣಿಯೂರಿನ ಜನರು ಕೂಡ ಉಚ್ಚಿಲ – ಪಣಿಯೂರು ರಸ್ತೆ ಬದಿ ತ್ಯಾಜ್ಯ ಎಸೆಯುತ್ತಾರೆ.
ಎಲ್ಲೆಲ್ಲಿ ತ್ಯಾಜ್ಯ
ಉಚ್ಚಿಲದಿಂದ ಪಣಿಯೂರು ಪ್ರವೇಶಿಸುವ ರಸ್ತೆಯ ಮಗ್ಗುಲಿನಿಂದ ಹಿಡಿದು ವೆಲ್ಡಿಂಗ್ ಶಾಪ್ ಮುಂಭಾಗ, ಸಿ.ಎ. ಬ್ಯಾಂಕ್ ಮುಂಭಾಗ, ಭಾಸ್ಕರ ನಗರ, ಅಂಗನವಾಡಿ ಮುಂಭಾಗ, ಬಿಸ್ಮಿಲ್ಲಾ ಜನರಲ್ ಸ್ಟೋರ್ ಬಳಿ, ಮಹಾಲಕೀÒ$¾ ನಗರ ತಲುಪುವ ರಸ್ತೆ ಬಳಿ, ನಿವೃತ್ತ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಮನೆ ಬಳಿ, ಜನಪ್ರಿಯ ಮಿಲ್ ಮುಂಭಾಗ, ಮುಳ್ಳಗುಡ್ಡೆ ಜಂಕ್ಷನ್ ಮುಂಭಾಗದವರೆಗಿನ ಎಲ್ಲಾ ಪ್ರದೇಶಗಳಲ್ಲೂ ತ್ಯಾಜ್ಯ ತುಂಬಿವೆೆ.
ರಸ್ತೆಯಲ್ಲಿ ಹರಿಯಲಿದೆ ಮಳೆನೀರು
ಭಾಸ್ಕರ ನಗರ ಅಂಗನವಾಡಿ ಮುಂಭಾಗ ತ್ಯಾಜ್ಯ ಎಸೆದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಬೋರ್ಡ್ ಇದ್ದರೂ ತ್ಯಾಜ್ಯ ರಾಶಿ ವೃದ್ಧಿಸುತ್ತಿದೆ. ಹಲವು ಕಡೆ ಮಳೆ ನೀರಿನ ಚರಂಡಿ ತ್ಯಾಜ್ಯದಿಂದ ಮುಚ್ಚಿದ್ದು, ರಸ್ತೆಯಲ್ಲೇ ನೀರು ಹರಿಯಲಿದೆ.
ಪ್ರಶ್ನಿಸಿದರೆ ಆಕ್ಷೇಪ
ಇಲ್ಲಿ ತ್ಯಾಜ್ಯ ಎಸೆಯುವವರನ್ನು ಪ್ರಶ್ನಿಸಿದರೆ ಬೆದರಿಸುತ್ತಾರೆ ಎನ್ನುವ ಆರೋಪವೂ ಇದೆ. ಈ ಭಾಗದಲ್ಲಿ ಹಲವು ಮನೆಗಳಲ್ಲಿ ಮತ್ತು ಕಟ್ಟಡಗಳಲ್ಲಿ ಬಾಡಿಗೆಗೆ ವಾಸವಿರುವ ಜನರು ರಸ್ತೆಯ ಒಂದು ಬದಿಯಲ್ಲಿ ನಿಂತು ಮತ್ತೂಂದು ಬದಿಗೆ ಕಸ ಎಸೆಯುತ್ತಾರೆ ಎನ್ನಲಾಗಿದೆ. ಇಲ್ಲಿ ವಾಸವಿರುವ ಹೊರ ರಾಜ್ಯಗಳ ಯುವಕರಂತೂ ಕಸ ಎಸೆಯುವುದನ್ನು ಪ್ರಶ್ನಿಸಿದವರಿಗೇ ಹೊಡೆಯಲು ಮುಂದಾದ ಘಟನೆಯೂ ನಡೆದಿದೆ ಎನ್ನುತ್ತಾರೆ ಸ್ಥಳೀಯರು.
ನಾಗರಿಕರೇ ಕಾರಣ
ಉಚ್ಚಿಲ – ಪಣಿಯೂರು ರಸ್ತೆ ತ್ಯಾಜ್ಯದ ಕೊಂಪೆಯಾಗಿ ಬೆಳೆಯಲು ನಾಗರಿಕರೇ ಕಾರಣ. ಜನರು ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಎಸೆದು ಪರಿಸರ ಮಾಲಿನ್ಯಕ್ಕೆ ಕಾರಣರಾಗುತ್ತಿದ್ದಾರೆ. ಈ ಬಗ್ಗೆ ಸ್ಥಳೀಯಾಡಳಿತ ಯಾವುದೇ ಕಠಿನ ಕ್ರಮ ಕೈಗೊಳ್ಳದೆ ಇರುವುದರಿಂದ ಸಮಸ್ಯೆಯಾಗಿದೆ. ಗ್ರಾಮದ ಸೌಂದರ್ಯಕ್ಕೂ ಕುತ್ತಾಗಿದೆ.
-ಪಿ.ಪಿ. ಅಬ್ದುಲ್ ಖರೀಂ ಪೊಲ, ಸಾಮಾಜಿಕ ಕಾರ್ಯಕರ್ತ, ಉಚ್ಚಿಲ
ವಿಲೇವಾರಿ ಘಟಕ ಪ್ರಾರಂಭಿಸಲಾಗುವುದು
ಈ ಭಾಗದಲ್ಲಿ ತ್ಯಾಜ್ಯವನ್ನು ಹಲವು ಬಾರಿ ವಿಲೇವಾರಿ ಮಾಡಲಾಗಿದೆ. ಶುಚಿಗೊಳಿಸಿದ ಒಂದೆರಡು ದಿನಗಳಲ್ಲೇ ಮತ್ತೆ ತ್ಯಾಜ್ಯ ತಂದು ಸುರಿಯುವ ಮೂಲಕ ಜನರು ಸ್ವತ್ಛ ಗ್ರಾಮದ ನಮ್ಮ ಕನಸಿಗೆ ಎಳ್ಳು ನೀರು ಬಿಡುವಂತೆ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಉತ್ಪತ್ತಿಯಾಗುವ ಕಸ – ತ್ಯಾಜ್ಯವನ್ನು ಸಂಗ್ರಹಿಸಲು ಸಮರ್ಪಕ ಜಾಗ ಇಲ್ಲದೇ ನಾವು ಒದ್ದಾಡುತ್ತಿದ್ದೇವೆ. ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ತ್ಯಾಜ್ಯ ವಿಲೇವಾರಿ ಘಟಕವನ್ನು ಪ್ರಾರಂಭಿಸಲಾಗುವುದು.
-ಕುಶಾಲಿನಿ, ಪಿಡಿಒ ಬಡಾ ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.