Uchila ಶ್ರೀ ಮಹಾಲಕ್ಷ್ಮೀ ದೇವಸ್ಥಾನ: ನಾಳೆ ಉಚ್ಚಿಲ ದಸರಾ ಉದ್ಘಾಟನೆ
ನವದುರ್ಗೆಯರು, ಶಾರದಾ ಮಾತೆಯ ವಿಗ್ರಹ ಪ್ರತಿಷ್ಠಾಪನೆಗೆ ಸಿದ್ದ
Team Udayavani, Oct 13, 2023, 10:57 PM IST
ಕಾಪು: ಇಲ್ಲಿನ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ಅ. 15ರಿಂದ 24ರ ವರೆಗೆ ಜರಗಲಿರುವ ಉಚ್ಚಿಲ ದಸರಾ ಮತ್ತು ಯುವ ದಸರಾ ಆರಂಭಕ್ಕೆ ಸಿದ್ಧತೆಗಳು ಪೂರ್ಣಗೊಂಡಿದೆ.
ದೇವಸ್ಥಾನದ ಪಕ್ಕದ ಶಾಲಿನಿ ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹ ಪ್ರತಿಷ್ಠಾಪನೆಯೊಂದಿಗೆ ಉತ್ಸವಕ್ಕೆ ಚಾಲನೆ ದೊರಕಲಿದೆ. ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಚಾಲನೆ ನೀಡಲಿದ್ದು ಬಳಿಕ ಮಹಾಲಕ್ಷ್ಮೀ ಅನ್ನಛತ್ರ ಮತ್ತು ಅತಿಥಿಗೃಹ ಲೋಕಾರ್ಪಣೆಗೊಳ್ಳಲಿದೆ.
ಅ. 15ರಿಂದ ಅ. 24ರವರೆಗೆ ಪ್ರತೀ ದಿನ ಬೆಳಗ್ಗೆ ಚಂಡಿಕಾ ಹೋಮ, ಮಧ್ಯಾಹ್ನ ನವದುರ್ಗೆಯರಿಗೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ, ಭಜನ ಕಾರ್ಯಕ್ರಮ, ಸಂಜೆ ಸಾವಿರ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ರಾತ್ರಿ ಮಹಾಪೂಜೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅ. 24ರ ಸಂಜೆ ಉಚ್ಚಿಲದಿಂದ ಕಾಪುವಿನವರೆಗೆ ವೈಭವದ ಶೋಭಾಯಾತ್ರೆ ನಡೆದು ಕಾಪು ಕಡಲ ಕಿನಾರೆಯಲ್ಲಿ ಕಾಶಿಯ ಪುರೋಹಿತರ ನೇತೃತ್ವದಲ್ಲಿ ಗಂಗಾರತಿ, ಸಹಸ್ರ ಮಂಗಳಾರತಿ ಬಳಿಕ ವಿಗ್ರಹಗಳ ಜಲಸ್ಥಂಭನ ನಡೆಯಲಿದೆ.
ದಸರಾ ವೈಭವದಲ್ಲಿ ಉಭಯ ಜಿಲ್ಲೆ ಸಹಿತ ವಿವಿಧೆಡೆಗಳಿಂದ ಲಕ್ಷಾಂತರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ದ. ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಡಾ| ಜಿ. ಶಂಕರ್, ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್ ತಿಳಿಸಿದ್ದಾರೆ.
ಸಾಂಸ್ಕೃತಿಕ ರಸದೌತಣ
ಯುವ ದಸರಾ ಪ್ರಯುಕ್ತ ಅ. 15ರ ಸಂಜೆ ಯುವ ನೃತ್ಯೋತ್ಸವ ಸ್ಪರ್ಧೆ, ಅ. 20ರ ಬೆಳಗ್ಗೆ ಮುದ್ದು ಮಕ್ಕಳಿಂದ ಛದ್ಮವೇಷ ಸ್ಪರ್ಧೆ, ಅ. 21ರ ಮಧ್ಯಾಹ್ನ ಮಹಿಳೆ ಮತ್ತು ಪುರುಷರಿಗೆ ರಂಗೋಲಿ ಸ್ಪರ್ಧೆ, ಮಹಿಳೆಯರ ಹುಲಿವೇಷ ಸ್ಪರ್ಧೆ, ಅ. 22ರ ಬೆಳಗ್ಗೆ ಚಿತ್ರಕಲಾ ಸ್ಪರ್ಧೆ, ಅ. 15ರಿಂದ 24ರ ವರೆಗೆ ಫಲ ಪುಷ್ಪ ಪ್ರದರ್ಶನ, ಪುಸ್ತಕ ಮೇಳ, ಮೀನುಗಾರಿಕೆ ಯೋಜನೆಗಳ ಮಾಹಿತಿ ಮತ್ತು ಮೀನುಗಾರಿಕಾ ಪರಿಕರಗಳ ಪ್ರದರ್ಶನ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.