44 ವರ್ಷಗಳ ಯಶಸ್ವಿ ಪಯಣದ ಸಂಭ್ರಮ ಆಚರಿಸುತ್ತಿರುವ ಉದಯ
ಕರಾವಳಿ ಕರ್ನಾಟಕದ ಏಕೈಕ ನಾನ್ ಸ್ಟಿಕ್ ಪಾತ್ರೆಗಳ ತಯಾರಿಕಾ ಸಂಸ್ಥೆ
Team Udayavani, Mar 19, 2023, 5:06 PM IST
1970 ರ ಕಾಲಘಟ್ಟ ದಲ್ಲಿ ಹೆಚ್ಚಿನ ಪ್ರತಿಭಾನ್ವಿತ ಯುವಜನರು ತಾವು ಉತ್ತಮ ಸ್ಥಾನಮಾನ ಗಳಿಸಬೇಕೆಂಬ ಇಚ್ಚೆಯಿಂದ ಬೆಂಗಳೂರು, ಬಾಂಬೆ, ಪರದೇಶಗಳಿಗೆ ತೆರಳುವ ಕಾಲದಲ್ಲಿ, ಒಂದು ಸಣ್ಣ ಬಂಡವಾಳ ಹಾಗೂ ತನ್ನದೇ ಊರಿನಲ್ಲಿ ಒಂದು ಸ್ವಂತ ಉದ್ಯಮ ಕಟ್ಟಿ ಬೆಳೆಸಬೇಕೆಂಬ ದೊಡ್ಡ ಕನಸಿನೊಂದಿಗೆ ರಮೇಶ್ ಬಂಗೇರ ಅವರು 1979 ಸ್ಥಾಪಿಸಿದ ಒಂದು ಚಿಕ್ಕ ಅಲ್ಯುಮಿನಿಯಂ ಪಾತ್ರೆಗಳ ತಯಾರಿಕಾ ಸಂಸ್ಥೆ “ಉದಯ”….
ಒಂದು ಹಂತದಲ್ಲಿ ತನ್ನ ಪಾತ್ರೆಗಳಿಗೆ ಕೇವಲ ಗುಣಮಟ್ಟದ ಅಲ್ಯುಮೀನಿಯಂ ಲೋಹದ ಸರ್ಕಲ್ ಗಳನ್ನೇ ಬಳಸಬೇಕೆಂದ ಮನದಾಸೆಯಿಂದ ತನ್ನದೇ ಎರಡು ಅಲ್ಯುಮಿನಿಯಂ ಮೆಲ್ಟಿಂಗ್ ಕಾರ್ಖಾನೆ ಸ್ಥಾಪಿಸಿ, ಮುಖ್ಯ ಕಚ್ಚಾವಸ್ತು ಸಮೇತವಾಗಿ ಸಂಪೂರ್ಣ ಸ್ವಂತ ತಯಾರಿಕೆಯ ಆಹಾರ ಗುಣಮಟ್ಟಕ್ಕೆ ಪೂರಕವಾದ ಅಲ್ಯುಮೀನಿಯಂ ಪಾತ್ರೆಗಳ ತಯಾರಕರು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಅಂದಿನ ಕಾಲದಲ್ಲಿ ಮಹಾನಗರಗಳಿಗೆ ಸೀಮಿತವಾಗಿದ್ದ ನಾನ್ ಸ್ಟಿಕ್ ಪಾತ್ರೆ, ಪ್ರೆಶರ್ ಕುಕ್ಕರ್ ತಯಾರಿಕಾ ಘಟಕಗಳನ್ನು ತನ್ನ ಹುಟ್ಟೂರಿನಲ್ಲಿಯೇ ಸ್ಥಾಪಿಸಿ ತನ್ನ ಉದ್ಯೋಗವನ್ನು ಬೆಳೆಸಬೇಕು ಹಾಗೂ ಮತ್ತಷ್ಟು ಯುವಜನತೆಗೆ ಉದ್ಯೋಗ ಸೃಷ್ಠಿಸಬೇಕೆಂಬ ಹಂಬಲದಿಂದಾಗಿ, ಈ ಉದ್ಯಯಮಕ್ಕೆ ಬೇಕಾಗುವ ಎಲ್ಲಾ ಕಚ್ಚಾ ವಸ್ತುಗಳು ಸುಲಭವಾಗಿ ಹಾಗೂ ಕಡಿಮೆದರದಲ್ಲಿ ಮಹಾನಗರಗಳಲ್ಲಿ ಲಭಿಸುವುದು ಮಾತ್ರವಲ್ಲದೆ ಉತ್ಪನ್ನಗಳಿಗೆ ಬೃಹತ್ ಮಾರುಕಟ್ಟೆಯೂ ಮಹಾನಗರಗಳಲ್ಲೆ ಇರುವುದರಿಂದ ತನಗೆ ಎದುರಾಗಬಹುದಂತಹ ಪ್ರಬಲ ಸ್ಪರ್ಧೆ ಬಗೆಗಿನ ಅರಿವಿದ್ದರೂ ಕೂಡ ತನ್ನದೆ ನೆಲದಲ್ಲಿಯೇ ಏನದರೂ ಸಾದಿಸಬೇಕೆಂಬ ಛಲದಿಂದ ಹತ್ತಾರು ವರುಷಗಳ ಹಿಂದೆಯೇ ಸಣ್ಣ ಪ್ರಮಾಣದಲ್ಲಿ ನಾನ್ ಸ್ಟಿಕ್ ಉದ್ಯಮವನ್ನು ಸ್ಥಾಪಿಸಿದ ಸಂಸ್ಥೆ ಇಂದು ತನ್ನ ಗುಣಮಟ್ಟ ಹಾಗೂ ಗ್ರಾಹಕ ಸೇವೆಯಿಂದ ಈಗಾಗಲೇ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸುತ್ತಾ ದೇಶ ದಲ್ಲಿ ಮಾತ್ರವಲ್ಲದೆ ಪರದೇಶಕ್ಕೂ ರಫ್ತಾಗುತಿರುವುದು ಹೆಮ್ಮೆಯ ವಿಷಯ.
ಏರುತ್ತಿರುವ ಬೇಡಿಕೆ ಹಾಗೂ ತನ್ನ ನಾನ್ ಸ್ಟಿಕ್ ಗುಣಮಟ್ಟವನ್ನು ಮಟ್ಟಷ್ಟು ಉತ್ಕ್ರಷ್ಟ ಮಟ್ಟಕ್ಕೆ ತಲುವಿಸುವ ನಿಟ್ಟಿನಲ್ಲಿ ಇಂದು ತಮ್ಮ ಸಾಧನೆಗೆ ಮತ್ತೊಂದು ಗರಿಯಾಗಿ ಅಟೊಮ್ಯಾಟಿಕ್ ನಾನ್ ಸ್ಟಿಕ್ ಪಾತ್ರೆಗಳ ತಯಾರಿಕಾ ಘಟಕವನ್ನು ಮಣಿಪಾಲದಲ್ಲಿಯೇ ಆರಂಭಿಸಿದ್ದಾರೆ.
ಅಲ್ಯುಮಿನಿಯಂ ಸ್ಪಿನ್ನಿಂಗ್ ಪಾತ್ರೆಗಳ ತಯಾರಿಕೆಯಲ್ಲಿ ಕರ್ನಾಟಕದಲ್ಲಿಯೇ ಅತೀ ಹೆಚ್ಚಿನ ಸ್ಪಿನ್ನಿಂಗ್ ಉತ್ಪನ್ನಗಳನ್ನು ತಯಾರಿಸುವ ಅಗ್ರಪಂತೀಯ ಸಂಸ್ಥೆಯೆಂಬ ಹೆಗ್ಗಳಿಕೆ ಪಡೆದಿರುವ ರಮೇಶ್ ಬಂಗೇರರವರ “ಉದಯ” ಸಂಸ್ಥೆಯು, ಕರಾವಳಿ ಕರ್ನಾಟಕದ ಏಕೈಕ ನಾನ್ ಸ್ಟಿಕ್ ಪಾತ್ರೆಗಳ ತಯಾರಿಕಾ ಸಂಸ್ಥೆಯೂ ಕೂಡ “ಉದಯ ಕಿಚನ್ಸ್” ಸಂಸ್ಥೆಯಾಗಿರುತ್ತದೆ ಎಂಬುದು ಹೆಮ್ಮೆಯ ವಿಷಯ.
ಗ್ರಾಹಕರಿಗೆ ಗೃಹೋಪಯೋಗಿ ಎಲ್ಲಾ ವಸ್ತುಗಳೂ ಒಂದೇ ಸೂರಿನಡಿಯಾಲ್ಲಿ ಲಭಿಸುವಂತೆ ಮಾಡುವ ಸಲುವಾಗಿ ’ಉದಯ ಕಿಚನೆಕ್ಸ್ಟ್’ ಕಿಚನ್ ವೇರ್ ಮಳಿಗೆ ಗಳು ಈಗಾಗಲೇ ಕರಾವಳಿ ಕರ್ನಾಟಕದ ನೆಚ್ಚಿನ ಮಳಿಗೆಗಳೊಂದಾಗಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.