ಉದಯ ಕಿಚನೆಕ್ಸ್ಟ್: ಇಂದು ಕುಂದಾಪುರ ಮಳಿಗೆ ಉದ್ಘಾಟನೆ
Team Udayavani, Aug 8, 2018, 11:36 PM IST
ಉಡುಪಿ: ಉದಯ ಸಮೂಹ ಸಂಸ್ಥೆಯ ಗೃಹೋಪಕರಣ, ಹೊಟೇಲ್, ಕ್ಯಾಟರಿಂಗ್ ಹಾಗೂ ದಿನಬಳಕೆಯ ಅಡುಗೆಮನೆಯ ಸಾಮಗ್ರಿಗಳ ಮಳಿಗೆ ‘ಉದಯ ಕಿಚನೆಕ್ಸ್ಟ್’ನ 10ನೇ ರಿಟೇಲ್ ಸೂಪರ್ ಬಜಾರ್ ಆ. 9ರಂದು ಕುಂದಾಪುರ ಪಾರಿಜಾತ ಹೊಟೇಲ್ ಸಮೀಪದ ಶಂಕರ ಶೇಟ್ ಟವರ್ಸ್‌ನಲ್ಲಿ ಉದ್ಘಾಟನೆಗೊಳ್ಳಲಿದೆ.
ಬೆಳಗ್ಗೆ 10ಕ್ಕೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು, ಸಿಂಡಿಕೇಟ್ ಬ್ಯಾಂಕ್ ವಲಯ ಕಚೇರಿ ಮಹಾಪ್ರಬಂಧಕ ಭಾಸ್ಕರ ಹಂದೆ, ಕುಂದಾಪುರ ಪುರಸಭೆ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ, ರೋಟರಿ ಜಿಲ್ಲಾ ಗವರ್ನರ್ ಅಭಿನಂದನ್ ಎ. ಶೆಟ್ಟಿ, ಶಂಕರ ಶೇಟ್ ಟವರ್ಸ್ ಮಾಲಕಿ ಸುಂದರಿ ಎ. ಶೇಟ್ ಪಾಲ್ಗೊಳ್ಳಲಿದ್ದಾರೆ ಎಂದು ಉದಯ ಸಮೂಹ ಸಂಸ್ಥೆಯ ಮಹಾಪ್ರಬಂಧಕ ಉಮೇಶ್ ಬಾಧ್ಯ ತಿಳಿಸಿದ್ದಾರೆ.
ಆ. 31: ಕಿನ್ನಿಗೋಳಿ ಮಳಿಗೆ ಆರಂಭ
1979ರಲ್ಲಿ ಆರಂಭಗೊಂಡ ಸಂಸ್ಥೆ ಇಂದು ಬೃಹದಾಕಾರವಾಗಿ ಬೆಳೆದಿದ್ದು 11 ಉತ್ಪಾದನ ಘಟಕಗಳು ಮತ್ತು 9 ರಿಟೇಲ್ ವ್ಯಾಪಾರ ಮಳಿಗೆಗಳನ್ನು ಹೊಂದಿದೆ. 11ನೇ ರಿಟೇಲ್ ಮಳಿಗೆ ಆ. 31ರಂದು ಕಿನ್ನಿಗೋಳಿಯಲ್ಲಿ ಆರಂಭಗೊಳ್ಳಲಿದೆ. ಗುಣಮಟ್ಟದ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ನೀಡುವ ಮೂಲಕ ಗ್ರಾಹಕರ ವಿಶ್ವಾಸ ಉಳಿಸಿಕೊಂಡಿದೆ. ಜನರ ಅಭಿರುಚಿ ಮತ್ತು ಅಗತ್ಯಗಳಿಗೆ ತಕ್ಕಂತೆ ಉದಯ ಸಂಸ್ಥೆ ಪ್ರಷರ್ ಕುಕ್ಕರ್, ಸ್ಟೀಲ್ ಪಾತ್ರೆ, ನಾನ್‌ಸ್ಟಿಕ್ ಕುಕ್‌ವೆàರ್, ಹಾರ್ಡ್ ಅನೋಡೈಸ್ ಕುಕ್ ವೇರ್, ವೈಟ್ ಅನೋಡೈಸ್ ಕುಕ್ ವೇರ್ ಉತ್ಪಾದಿಸಲು ಆರಂಭಿಸಿತು. ಹೊಟೇಲ್, ದೇವಸ್ಥಾನ, ಕ್ಯಾಟರರ್, ಶಾಲೆಗಳಿಗೆ ಬೇಕಾದ ದೊಡ್ಡ ಪಾತ್ರೆಗಳನ್ನೂ ತಯಾರಿಸಲಾಗುತ್ತಿದೆ. ಮ್ಯಾಜಿಕ್ ಪಾಟ್ ಮನೆಮಾತಾಗಿದ್ದು, ಗ್ಯಾಸ್ ಮತ್ತು ವಿದ್ಯುತ್ ಖರ್ಚು ಉಳಿಸುತ್ತದೆ. ಹೊಸ ವಿನ್ಯಾಸ ಹಾಗೂ ತಂತ್ರಜ್ಞಾನದೊಂದಿಗೆ ಮ್ಯಾಜಿಕ್ ಪಾಟ್ ಮತ್ತು ಹಾರ್ಡ್ ಅನೋಡೈಸ್ಡ್ ಕುಕ್ ವೇರ್ ಅಕ್ಟೋಬರ್‌ನಲ್ಲಿ ಮಾರುಕಟ್ಟೆಗೆ ಬರಲಿವೆ ಎಂದರು.
ಉದ್ಘಾಟನೆ ಕೊಡುಗೆ
ಮಳಿಗೆ ಉದ್ಘಾಟನೆ ಪ್ರಯುಕ್ತ ಆ. 9ರಿಂದ 19ರವರೆಗೆ ವಿಶೇಷ ಕೊಡುಗೆ ಮಾರಾಟ ಇರುತ್ತದೆ. ಶೇ. 60ರವರೆಗೆ ದರ ಕಡಿತ, ಕೋಂಬೋ ಆಫರ್ ಹಾಗೂ ಬಹುಮಾನಗಳಿರುತ್ತವೆ ಎಂದು ಉಮೇಶ್ ಬಾಧ್ಯ ತಿಳಿಸಿದರು. ಅಧಿಕಾರಿಗಳಾದ ಅನುದೀಪ್ ಮತ್ತು ಹರೀಶ್ ಪತ್ರಿಕಾಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.