ಆ.20ರವರೆಗೆ ಉದಯ ಕಿಚನೆಕ್ಸ್ಟ್ ಮಳಿಗೆಗಳಲ್ಲಿ ‘ಉದಯ ಪರ್ಬ’
Team Udayavani, Aug 12, 2023, 2:27 PM IST
ಉಡುಪಿ: ಉದಯ ಸಮೂಹ ಸಂಸ್ಥೆಯ ಉದಯ ಕಿಚನೆಕ್ಸ್ಟ್ ಸೂಪರ್ ಮಾರ್ಕೆಟ್ ಗಳಲ್ಲಿ ವಿಶೇಷ ಮಾರಾಟ ಮೇಳ ‘ಉದಯ ಪರ್ಬ’ ಆರಂಭವಾಗಿದ್ದು ಆ.20 ವರೆಗೆ ಜರಗಲಿದೆ.
ತನ್ನ ಗ್ರಾಹಕರಿಗೆ ಪೂರ್ಣ ಪ್ರಮಾಣದಲ್ಲಿ ನಂಬಲಸಾಧ್ಯ ಕೊಡುಗೆಗಳನ್ನು ನೀಡುವ ನಿಟ್ಟಿನಲ್ಲಿ ನೇರವಾಗಿ ಉತ್ಪಾದನಾ ಘಟಕಗಳಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಅತೀ ಕಡಿಮೆ ದರದಲ್ಲಿ ಖರೀದಿಸಿ, ಹಿಂದೆಂದಿಗಿಂತಲೂ ಆಕರ್ಷಕ ಕೊಡುಗೆಗಳನ್ನು ಉದಯ ಸಂಸ್ಥೆಯು ಈ ಬಾರಿ ಕೊಡುತ್ತಿದೆ.
ಶೇ.50% ವರೆಗಿನ ರಿಯಾಯಿತಿ, ಅತ್ಯುತ್ತಮ ಕಾಂಬಿ ಕೊಡುಗೆಗಳು, ಹಳೆಯ ಸಾಮಾಗ್ರಿಗಳಿಗೆ ಅತೀ ಹೆಚ್ಚಿನ ದರ ಮತ್ತು ಆಕರ್ಷಕ ರಿಯಾಯಿತಿಯೊಂದಿಗೆ ಹೊಸತಾಗಿಸುವ ಬಂಪರ್ ಅವಕಾಶ ಮಾತ್ರವಲ್ಲದೇ ಎಲ್ಲಾ ಕಿಚನ್ವೇರ್ ಸಾಮಾಗ್ರಿಗಳ ಮೇಲೆ ಅತೀ ಹೆಚ್ಚಿನ ಖಚಿತ ರಿಯಾಯಿತಿ ನೀಡಲಾಗುತ್ತಿದೆ. ಪ್ರತೀ ರೂ.2000/- ಮೇಲ್ಪಟ್ಟ ಖರೀದಿಗೆ ಆಕರ್ಷಕ ಬಹುಮಾನ ಗೆಲ್ಲುವ ಲಕ್ಕಿ ಕೂಪನ್ ಪಡೆಯಿರಿ. ಅಲ್ಲದೇ ಪ್ರತೀ ರೂ.5000/- ಮೇಲ್ಪಟ್ಟ ಖರೀದಿಗೆ ನಿಗದಿ ಪಡಿಸಿದ ರಿಯಾಯತಿಯೊಂದಿಗೆ ರೂ. 1000 ರಿವಾರ್ಡ್ ಕೂಪನ್ ಗಳಿಸಿ.
ಮಹಿಳೆಯರ ನೆಚ್ಚಿನ ಕಿಚನ್ವೇರ್ ಮಳಿಗೆಯಲ್ಲಿ ಅಡುಗೆಮನೆಯ ಸೌಂದರ್ಯ ಮತ್ತಷ್ಟು ಹೆಚ್ಚಿಸುವ ನವನವೀನ ಮಾದರಿಯ ಸಾಮಾಗ್ರಿಗಳ ದಾಸ್ತಾನು ಮಾಡಲಾಗಿದ್ದು, ವಿಶೇಷ ರಿಯಾಯಿತಿಯಲ್ಲಿ ಲಭ್ಯವಿದೆ. ಹೋಟೆಲ್- ಕ್ಯಾಟರಿಂಗ್ ಮದುವೆ ಮಂಟಪಗಳು, ದೇವಸ್ಥಾನ ಪ್ರಾರ್ಥನಾ ಮಂದಿರ, ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳ ಗೃಹೋಪಯೋಗಿ, ಕಿಚನ್ ವೇರ್ ಸಾಮಾಗ್ರಿಗಳ ಖರೀದಿಗೆ “ಉದಯ ಪರ್ಬ’ ಸೂಕ್ತ ಸಮಯವಾಗಿದ್ದು ವಿಶೇಷ ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ.
ಉದಯ ಮಳಿಗೆಗಳಲ್ಲಿ, ಗೃಹೋಪಯೋಗಿ ವಸ್ಸುಗಳು, ಅಲ್ಯುಮೀನಿಯಂ, ಸ್ಟೀಲ್, ತಾಮ್ರ, ಹಿತ್ತಾಳೆ ಪಾತ್ರೆಗಳು, ಪೂಜಾ ಸಾಮಾಗ್ರಿಗಳು, ಪ್ಲಾಸ್ಟಿಕ್ ವಸ್ತುಗಳು, ಮಿಕ್ಸಿ, ಗ್ರೈಂಡರ್, ಗ್ಯಾಸ್ ಸ್ಟವ್, ಕುಕ್ಕರ್ ಮುಂತಾದ ಇಲೆಸ್ಟ್ರಿಕ್ ಗೃಹೋಪಕರಣಗಳು, ಥರ್ಮೋವೇರ್, ಗಾಜಿನ ಅಲಂಕಾರಿಕ ವಸ್ತುಗಳು, ಪಿಂಗಾಣಿ ವಸ್ತುಗಳು, ನಿಚ್ಚಣಿಕೆ, ಅಸ್ತ್ರ ಒಲೆ, ಗುಡಾಣ ಬೃಹತ್ ತೋಪುಗಳಲ್ಲದೆ ಅಡುಗೆ ಮನೆಯಲ್ಲಿ ಬಳಸುವ ಎಲ್ಲಾ ತರಹದ ಸಾಮಾಗ್ರಿಗಳು ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.