ಮೊದಲ ಸಂಚಿಕೆಯ ಸಂಭ್ರಮವೇ ವರ್ಣನಾತೀತ
Team Udayavani, Jan 1, 2020, 8:40 AM IST
ಮೊದಲ ಸಂಚಿಕೆಯ ಮೊದಲ ಪುಟದಲ್ಲಿ ಅರ್ಧದಷ್ಟು ಜಾಗ ಮಾತ್ರವೇ ಇದ್ದರೂ ಅದರಲ್ಲಿ 15 ಸುದ್ದಿಗಳನ್ನು ಅಚ್ಚೊತ್ತಲಾಗಿತ್ತು. 9 ರಾಷ್ಟ್ರ ಮಟ್ಟದ ಸುದ್ದಿಗಳಿದ್ದರೆ, 4 ವಿದೇಶೀ ಸುದ್ದಿ ಗಳಿಗೆ ಸ್ಥಾನ ಕಲ್ಪಿಸಿದ್ದು ವಿಶೇಷವಾಗಿತ್ತು. ಒಂದು ರಾಜ್ಯ ಮತ್ತು ಒಂದು ಮಂಗಳೂರಿನ ಸುದ್ದಿಯೂ ಅದರಲ್ಲಿತ್ತು. ಅದು ಕೇಂದ್ರ ಸಚಿವರ ಭೇಟಿಯದ್ದಾಗಿತ್ತು. ಮೊದಲ ಸಂಚಿಕೆಯಲ್ಲಿಯೇ ಉದಯವಾಣಿ ಅರ್ಧ ಪುಟ ಜಾಹೀರಾತು ಹೊಂದಿತ್ತು.
ಭಾರತ ನಕಾಶೆಯ ಕರ್ನಾಟಕ ಭೂಭಾಗದಲ್ಲಿ ಹೆಸರೇಕೇ? ಯಾರಿಗೂ ಅಷ್ಟೊಂದು ಪರಿಚಯವಿಲ್ಲದ ಪುಟ್ಟದೊಂದು ಹಳ್ಳಿ ಇಂಥದೊಂದು ದೊಡ್ಡ ಪ್ರಯೋಗ ನಡೆಸುತ್ತದೆಂದು ಯಾರೂ ಊಹಿಸಿರಲಿಲ್ಲ. ಆಗ ಪ್ರಯೋಗವೆನ್ನುವುದು ಹೆಚ್ಚು ನಡೆಯುತ್ತಿದ್ದುದೇ ದೊಡ್ಡ ನಗರಗಳಲ್ಲಿ. ಮೂಲಸೌಲಭ್ಯಗಳ ಕೊರತೆಯಿಂದ ಬಸವಳಿಯುತ್ತಿದ್ದ ಗ್ರಾಮ ಭಾರತದ ನಕಾಶೆಯೊಳಗೆ ಈ ಊರಿಗೆ ಮಹತ್ವ ಬಂದಿದ್ದೇ ಅಚ್ಚರಿಯ ಸಂಗತಿ,
ಹುಲಿಗಳು ಓಡಾಡುತ್ತಿದ್ದ ಕಾಡಿನಂಚಿನ ಬೋರ್ಗುಡ್ಡೆಯಲ್ಲಿ ಮತ್ತೂಂದು ಮಹಾ ಪ್ರಯೋಗದ ವೇದಿಕೆಯದು. ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಆಗಲೇ ಕೆಲವು ಯಶಸ್ವಿ ಪ್ರಯೋಗಗಳು ನಡೆದಿದ್ದ ಬಂಜರು ಭೂಮಿಯಲ್ಲಿ ಕೆಲವೇ ಕೆಲವು “ಕಮಾಂಡರ್’ ಗಳ ಕನಸಿನ ಪ್ರಯೋಗಕ್ಕೆ ಸದ್ದಿಲ್ಲದೆ ಸಿದ್ಧತೆ ನಡೆದಿತ್ತು. ಅಕ್ಷರ ರಂಗದ “ವಾರ್‌ಫೀಲ್ಡ್’ಗೆ ಇಳಿಯಲು ಯಾವೆಲ್ಲ ಶಸ್ತ್ರಗಳು ಬೇಕಿತ್ತೋ
ಅವನ್ನೆಲ್ಲ ವಿರೋಧಿಗಳ ರಾಡಾರ್‌ಕಣ್ಣಿಗೂ ಬೀಳದ ರೀತಿಯಲ್ಲಿ ಸಜ್ಜು ಮಾಡಲಾಗಿತ್ತು. ಎಷ್ಟೋ ಜನರಿಗೆ ಏನಾಗುತ್ತಿದೆ ಎಂಬುದು ಗೊತ್ತಾಗಿದ್ದೇ ಪ್ರಯೋಗ ಬಹಿರಂಗವಾದಾಗಲೇ…
ಹೊಸ ವರ್ಷದ ದಿನದಲ್ಲಿ ಆರಂಭವಾಗಲಿದ್ದ “ಲೇಖನಿ ಸಮರ’ಕ್ಕೆ ಆಗಲೇ ಸುಮಾರು ಒಂದು ತಿಂಗಳ ತಾಲೀಮು ನಡೆದಿತ್ತು. ಹಲವಾರು ರೀತಿಯ ಶಸ್ತ್ರಗಳ ಪ್ರಯೋಗದ ಪರಿಣಾಮಗಳನ್ನು ಅಭ್ಯಸಿಸಿಕೊಂಡು ಅದಕ್ಕೆ ಪರ್ಯಾಯಗಳನ್ನೂ ಕಂಡುಕೊಳ್ಳಲಾಗಿತ್ತು. ಆದುದರಿಂದ ನೇರವಾಗಿ ರಂಗ ಪ್ರವೇಶ ಮಾಡುವಾಗ ಹೇಳಿಕೊಳ್ಳು ವಂತಹ ದೊಡ್ಡ ಸಮಸ್ಯೆಯಾಗಲಿಲ್ಲ.
ಇದಕ್ಕೆ ದೂರಗಾಮಿ ಯೋಜನೆ-ಯೋಚನೆಗಳೇ ಕಾರಣವಾಗಿದ್ದವು. ಆದುದ ರಿಂದ 1970ರ ಜನವರಿ 1ರಂದು “ಉದಯವಾಣಿ’ ಜನ್ಮ ತಾಳಿದಾಗಲೇ ಎಲ್ಲವೂ ಒಪ್ಪ ಓರಣವಾಗಿತ್ತು. ಹಲವು ವರ್ಷಗಳ ಅನುಭವ ಹೊಂದಿದ ಸುದ್ದಿಮನೆಯಿಂದ ಹೊರಬಂದಂತಿತ್ತು.
ಕರಾವಳಿ ಕರ್ನಾಟಕಕ್ಕೆ ಇಲ್ಲಿಯದೇ ಆದ ಪತ್ರಿಕೆ ಬೇಕು ಎಂದು ಕನಸು ಕಂಡಿದ್ದ ಆಗಿನ ಮಣಿಪಾಲ ಪವರ್ ಪ್ರಸ್‌ನ ಮಾಲಕರಾಗಿದ್ದ ಟಿ. ಮೋಹನದಾಸ ಪೈ ಮತ್ತು ಸತೀಶ್ ಪೈ ಅವರು ಮಣಿಪಾಲದ ಶಿಲ್ಪಿ ಡಾ| ಟಿ.ಎಂ.ಎ. ಪೈ ಮತ್ತು ಟಿ.ಎ. ಪೈ ಅವರ ಮಾರ್ಗದರ್ಶನದೊಂದಿಗೆ ಇಂಥ ಸಾಹಸ ಆರಂಭಿಸಿದ್ದರು.
ಮೊದಲ ಸಂಚಿಕೆಯ ತವಕ
ಯಾವುದೇ ವಿಷಯಗಳಾಗಲಿ ಅದರಲ್ಲಿ ಮೊದಲು ಎಂಬುದಕ್ಕೆ ವಿಶೇಷವಾದ ಸ್ಥಾನಮಾನ ಇದ್ದೇ ಇದೆ. ಹಾಗೆಯೇ ಉದಯವಾಣಿಯ ಮೊದಲ ಸಂಚಿಕೆ ಕೂಡ ಇಂದು ಹೆಗ್ಗುರುತು ಆಗಿದೆ. ಕೆಲವು ದಿನಗಳ ಪ್ರಯೋಗ ನಡೆಸಿದ್ದರೂ ಮೊದಲ ಸಂಚಿಕೆ ಹೊರ ತರುವ ಪುಳಕ ಅಂದು ಕೂಡ ವಿಶೇಷವೇ ಆಗಿತ್ತು. ಮಾಲಕರಿಂದ ಹಿಡಿದು ಅನುಭವಿ ಸಿಬಂದಿಯವರೆಗೆ ಎಲ್ಲರೂ ಅಕ್ಷರಗಳಲ್ಲಿ ಕಟ್ಟಿಕೊಡಲಾಗದ ಆತುರದಲ್ಲಿಯೇ ಇದ್ದರು.
ಮೊದಲ ಸಂಚಿಕೆಯಲ್ಲಿ ಏನಾದರೊಂದು ವಿಶೇಷ ಇರಬೇಕು ಎಂದು ಭಾವಿಸಿದ ಮಾಲಕರು ಅದಕ್ಕಾಗಿ ಹುಡುಕಾಟ ನಡೆಸಿದ್ದರು. ವಿಶೇಷವಾದ ಚಿತ್ರಗಳು ಸಿಕ್ಕಿದರೂ ಸಾಕು ಎಂಬ ಆಲೋಚನೆ ಇತ್ತು. ಕೊನೆಗೆ ವ್ಯಂಗ್ಯಚಿತ್ರವೊಂ ದನ್ನು ಬಿಡಿಸುವ ಆಲೋಚನೆ ಮೂಡಿ ಅದರಂತೆ ಮುನ್ನಡೆದರು.
ಈ ರೇಖಾ ಚಿತ್ರದಲ್ಲಿದ್ದ ರಾಜಕಾರಣಿಗಳೂ ಅಸಾಮಾನ್ಯ ರಲ್ಲ. ಆಗ ದೇಶದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯೂ ಹಾರ ಹಿಡಿದು ನಿಂತಿದ್ದರು. ಜತೆಗೆ ನಿಜಲಿಂಗಪ್ಪ, ನೀಲಂ ಸಂಜೀವ ರೆಡ್ಡಿ ನಿಂತಂತೆ ತೋರುತ್ತಿದೆ. ಯಾಕೆಂದರೆ, ಆಗಷ್ಟೇ ಕಾಂಗ್ರೆಸ್ ನಾಯಕರ ನಡುವೆ ಶೀತಲ ಸಮರ ಆರಂಭವಾಗ್ತಿತ್ತು. ಇಂದಿರಾ ಅವರು ವಿ.ವಿ. ಗಿರಿ ಅವರನ್ನು ರಾಷ್ಟಪತಿ ಹುದ್ದೆಗೆ ಬೆಂಬಲಿಸುವುದಾಗಿ ಪ್ರಕಟಿಸಿದ್ದರು. ಜತೆಗೆ ಆಗಿನ ಆರ್ಥಿಕ ಸಚಿವರ ಗಮನಕ್ಕೆ ತಾರದೇ ಬ್ಯಾಂಕುಗಳ ರಾಷ್ಟ್ರೀಕರಣವನ್ನು ಪ್ರಕಟಿಸಿದ್ದರು. ಇವರೆಲ್ಲರೂ ಬರ್ತ್‌ಡೇ ಬಾಯ್‌ಯನ್ನು ಬೆಂಬಲಿಸಲು ಬಂದಿರುವಂತೆ ಚಿತ್ರವಿದೆ.
10 ಪೈಸೆ-10 ಮಂದಿ
ಮೊದಲ ಸಂಚಿಕೆಯನ್ನು ಸಿದ್ಧಪಡಿಸಿದ್ದು ಸುಮಾರು 10
ಮಂದಿಯ ತಂಡ. ಆಗ ಸತೀಶ್ ಪೈ ಅವರು ಸಂಪಾದಕರಾಗಿದ್ದರು. ಬನ್ನಂಜೆ ರಾಮಾಚಾರ್ಯ ಮತ್ತು ಗೋವಿಂದಾಚಾರ್ಯ ಸೋದರರ ನೇತೃತ್ವದಲ್ಲಿ ಎನ್. ಗುರುರಾಜ್ ಸಹಿತ 10 ಮಂದಿಯ ತಂಡ ಪುಟ ಕಟ್ಟುವಲ್ಲಿ ತೊಡಗಿಸಿಕೊಂಡಿದ್ದರು. ಪ್ರಾರಂಭದ ವರ್ಷಗಳಲ್ಲಿ ಸುದ್ದಿ ಮನೆಯಲ್ಲಿ ಬಾಲಕೃಷ್ಣ ರಾವ್, ಜಿ.ಕೆ. ಮಧ್ಯಸ್ಥ, ಜಯರಾಮ ಅಡಿಗ, ಶ್ರೀಕರ ಭಟ್, ಗಣಪತಿ ಭಟ್, ಶ್ರೀಪತಿ ಹೆಬ್ಟಾರ್, ಕೃಷ್ಣಮೂರ್ತಿ ನಿಟಿಲಾಪುರ, ರಾಘವ ನಂಬಿಯಾರ್, ವಸಂತ ಪಲಿಮಾರ್ಕರ್, ದಾಮೋದರ ಕಕ್ರಣ್ಣಾಯ, ಸಂತೋಷ್ ಹೆಗ್ಡೆ ಆತ್ರಾಡಿ, ಎಂ.ವಿ. ಮಲ್ಯ, ಎಸ್.ಎಲ್. ಭಟ್, ಈಶ್ವರ ದೈತೋಟ ಮೊದಲಾದವರು ಕಾರ್ಯನಿರ್ವಹಿಸಿದ್ದರು. ಇನ್ನು ಕೆಲವರು ಕೆಲವೇ ತಿಂಗಳುಗಳ ಕಾಲ ಕೆಲಸ ನಿರ್ವಹಿಸಿದ್ದೂ ಇದೆ. ಜಾಹೀರಾತು, ಪ್ರಸರಣ ವಿಭಾಗಗಳಲ್ಲಿ ರಾಮಕೃಷ್ಣ ನಾಯಕ್, ಶಿವಗುರು, ತಿಮ್ಮಪ್ಪ, ತಾರಾನಾಥ ಮೊದಲಾದವರು ಆರಂಭಿಕ ವರ್ಷಗಳಲ್ಲಿ ಸೇವೆ ಸಲ್ಲಿಸಿದ್ದರು.
ಕೊನೆಯ ಕ್ಷಣದ ಧಾವಂತ
ಸುದ್ದಿ ಮನೆ ಮತ್ತು ಯುದ್ಧ ರಂಗ ಒಂದೇ ಎನ್ನಲಾಗುತ್ತದೆ. ಅದು ಅಂದಿನಿಂದ ಇಂದಿನವರೆಗೂ ಬದಲಾಗಲೇ ಇಲ್ಲ. ಎಷ್ಟೇ ಶಸ್ತ್ರಗಳಿದ್ದರೂ ಏನೇ ಯೋಜನೆಗಳಿದ್ದರೂ ಯುದ್ಧ ಭೂಮಿಯ ಸ್ಥಿತಿ ಹೇಗೆ ಕ್ಷಣ ಕ್ಷಣಕ್ಕೆ ಬದಲಾಗುತ್ತದೆಯೋ ಅದೇ ರೀತಿ ಸುದ್ದಿ ಮನೆಯ ವಾತಾವರಣವೂ ಕ್ಷಣ ಕ್ಷಣಕ್ಕೂ ಬದಲಾಗುತ್ತಿದೆ. ಇದು ಐವತ್ತು ವರ್ಷಗಳ ಹಿಂದೆಯೂ ಹಾಗೆಯೇ ಇತ್ತು. ಏಕೆಂದರೆ ಅದು ಸುದ್ದಿಗಳ ನಡುವಿನ ಹೊಡೆದಾಟದ ಮನೆ. ಮೊದಲ ಸಂಚಿಕೆಗೆ ಕೂಡ ಎಷ್ಟೇ ಯೋಜನೆ ಮಾಡಿದ್ದರೂ ಕೊನೆಯ ಕ್ಷಣದ ಧಾವಂತ ತಪ್ಪುತ್ತಿರಲಿಲ್ಲ. ಟೆಲಿಪ್ರಿಂಟರ್‌ನಲ್ಲಿ ನಾಲ್ಕು ಪದಗಳ ಫ್ಲ್ಯಾಶ್ ಸುದ್ದಿ ಬಂದರೆ ಅದಕ್ಕೆ ವಿವರಣೆಯೇ ಇರುತ್ತಿರಲಿಲ್ಲ. ಸ್ತಬ್ಧವಾದ ಟಕ್, ಟಕ್ ಶಬ್ದ ಮತ್ತೆ ಕೇಳಿಸಿದಾಗ ಏನೋ ಕಾತರ, ಮತ್ತೆ ನೋಡಿದರೆ ಮತ್ತದೇ ನಾಲ್ಕು ಪದಗಳ ಫ್ಲ್ಯಾಶ್, ಫೋನ್ ಸಂಪರ್ಕಕ್ಕಾಗಿ ಗಂಟೆಗಟ್ಟಲೆ ಕಾದರೂ ಅಸಾಧ್ಯವಾಗುತ್ತಿದ್ದ ಸಂಪರ್ಕ. ಇದರ ನಡುವೆ ಇದ್ಯಾವುದರ ಪರಿವೆಯೇ ಇಲ್ಲದೆ ಸಾಗುತ್ತಿದ್ದ ಗಡಿಯಾರದ ಮುಳ್ಳು. ಒಂದೊಂದೇ ಅಕ್ಷರದ ಮೊಳೆಗಳನ್ನು ಜೋಡಿಸಬೇಕಾದ ಅನಿವಾರ್ಯತೆ ಹೊಂದಿದ್ದ ಪುಟ ಜೋಡಣೆಗಾರನ ಆತಂಕ. ಬ್ಲಾಕ್ ಚಿತ್ರಗಳನ್ನು ಹೊಂದಾಣಿಸುವ ಚಾಕಚಕ್ಯತೆ. . . ಹೀಗೆ ಎಲ್ಲೆಲ್ಲೂ ಧಾವಂತ. ಅದರ ನಡುವೆ ಸಂಭ್ರಮವೂ… ಮೊದಲ ಲೈವ್ ಸಂಚಿಕೆ ಹೊರ ಬರುತ್ತದೆ ಎಂಬ ಖುಷಿ. ಸುದ್ದಿಗಳನ್ನೆಲ್ಲ ಬರೆದ ಬಳಿಕ ಅದನ್ನು ಒಪ್ಪ ಓರಣವಾಗಿ ಮೊಳೆಗಳಲ್ಲಿ ಜೋಡಿಸುವುದು ಎಲ್ಲವೂ ಓಡಾಡಿಕೊಂಡೇ, ಒತ್ತಡದಲ್ಲಿ ಮುಗಿಯುವಷ್ಟರಲ್ಲಿ ಚಳಿಯ ತೀವ್ರತೆ ಏರಿತ್ತು… ಮಧ್ಯರಾತ್ರಿ ದಾಟಿತ್ತು. ಅನಂತರ ಮುದ್ರಣಗೊಂಡು ಊರು ಊರಿಗೆ ಉದಯವಾಣಿ ಸೇರುವಷ್ಟರಲ್ಲಿ ಉದಯಿಸಿದ ನೇಸರ ಮೇಲೇರಿಯಾಗಿತ್ತು.
ನಿರೂಪಣೆ: ಕೆ. ರಾಜೇಶ್ ಮೂಲ್ಕಿ
ಮಾಹಿತಿ: ಎನ್. ಗುರುರಾಜ್, ದಾಮೋದರ ಕಕ್ರಣ್ಣಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
Dec. 29: ಪಡುಬಿದ್ರಿಯಲ್ಲಿ ಅಂತರ್‌ರಾಜ್ಯ ಬಂಟ ಕ್ರೀಡೋತ್ಸವ – ಎಂಆರ್‌ಜಿ ಟ್ರೋಫಿ
Udupi: ಕಲ್ಸಂಕ ಜಂಕ್ಷನ್; ಹಗಲು-ರಾತ್ರಿ ಟ್ರಾಫಿಕ್ ಕಿರಿಕಿರಿ
Padubidri: ಪಲಿಮಾರು ಉಪ್ಪು ನೀರು ತಡೆ ಅಣೆಕಟ್ಟು ನಾಲ್ಕೇ ವರ್ಷದಲ್ಲಿ ಜೀರ್ಣಾವಸ್ಥೆಗೆ!
Kundapura: ಎಲ್ಲೆಡೆ ಹರಡಿದೆ ಕ್ರಿಸ್ಮಸ್ ಸಡಗರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.