ಫೆ.11, 12: ನಮ್ಮ ಸಂತೆಯಲ್ಲಿ ನಿಮ್ಮ ಮಳಿಗೆಯೂ ಇರಲಿ
ಉದಯವಾಣಿ, ಎಂಐಸಿ: ಕುಶಲಕರ್ಮಿಗಳಿಗೆ ಮಾರುಕಟ್ಟೆ ಒದಗಣೆ
Team Udayavani, Feb 5, 2023, 10:21 AM IST
ಮಣಿಪಾಲ: ಸ್ಥಳೀಯ ಕುಶಲ ಕರ್ಮಿಗಳ ಉತ್ಪನ್ನಗಳ ಮಾರಾಟಕ್ಕೆ ವೇದಿಕೆ ಕಲ್ಪಿಸಿ ಉತ್ತೇಜನ ನೀಡಲು ಉದಯವಾಣಿ, ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಷನ್ (ಎಂಐಸಿ) ಸಂಯುಕ್ತವಾಗಿ ರೂಪಿಸಿರುವ ಪರಿಕಲ್ಪನೆ “ನಮ್ಮ ಸಂತೆ’.ಜನಮನದ ಜೀವನಾಡಿ ಉದಯವಾಣಿ ಹಾಗೂ ಎಂಐಸಿ ಫೆಬ್ರವರಿ 11 ಮತ್ತು 12ರಂದು ನಮ್ಮ ಸಂತೆಯನ್ನು ಎಂಐಸಿ ಆವರಣದಲ್ಲಿ ಹಮ್ಮಿಕೊಂಡಿವೆ.
ಕುಶಲ ಕರ್ಮಿಗಳು ರೂಪಿಸಿರುವ ವಿವಿಧ ಉತ್ಪನ್ನಗಳು, ಉಪಕರಣಗಳು, ಪರಿಕರಗಳ ಪ್ರದರ್ಶನಕ್ಕೆ ನಮ್ಮ ಸಂತೆ ಅತ್ಯಂತ ಅನುಪಮವಾದ ವೇದಿಕೆಯಾಗಲಿದೆ. ಈ ಹಿನ್ನೆಲೆ ಈಗಾಗಲೇಹಲವು ಸ್ಥಳೀಯ ಕುಶಲ ಕರ್ಮಿಗಳು ನಮ್ಮ ಸಂತೆಯಲ್ಲಿ ಕೈಮಗ್ಗ ಉತ್ಪನ್ನಗಳು, ಕರಕುಶಲ ವಸ್ತುಗಳು, ದಿರಿಸುಗಳು- ಹೀಗೆ ಹತ್ತಾರು ಬಗೆಯ ವೈವಿಧ್ಯಮಯವಾದ ಉತ್ಪನ್ನಗಳನ್ನು ಪ್ರದರ್ಶಿಸಲು ಮುಂದಾಗಿದ್ದಾರೆ. ಹಾಗಾಗಿ ಇದೊಂದು ಸ್ಥಳೀಯ ಕರಕುಶಲ ಉತ್ಪನ್ನಗಳ ಅನಾವರಣವೂ ಆಗಲಿದೆ. ಸ್ಥಳೀಯ ಉದ್ಯಮಿಗಳ ಪ್ರವರ್ತನೆಗೆ ನಮ್ಮ ಸಂತೆ ರೂಪಿಸಲಾಗಿದೆ.
ನಮ್ಮ ಸಂತೆ ಕೇವಲ ಪ್ರದರ್ಶನವಷ್ಟೇ ಆಗದೆ ಮಾಹಿತಿ ವಿನಿಮಯಕ್ಕೆ ಅವಕಾಶವಿರಲಿದೆ. ಸ್ಥಳೀಯ ಗುಡಿಕೈಗಾರಿಕೆ, ಕರ ಕುಶಲ ಉದ್ಯಮಶೀಲರಿಗೆ ತಮ್ಮ ಉದ್ಯಮವನ್ನು ಇನ್ನಷ್ಟು ಬೆಳೆಸಲು, ಈ ಕ್ಷೇತ್ರದಲ್ಲಿ ಹೊಸದಾಗಿ ಉದ್ಯಮ ಸ್ಥಾಪಿಸುವ ಮಾಹಿತಿ, ಮಾರುಕಟ್ಟೆ ವ್ಯವಸ್ಥೆ ಸೃಷ್ಟಿಸಿಕೊಳ್ಳುವ ಕುರಿತೂ ಮಾಹಿತಿ ಒದಗಿಸುವ ಉದ್ದೇಶವಿದೆ. ಹಾಗಾಗಿ ನಮ್ಮ ಸಂತೆಯನ್ನು ಕೇವಲ ಪ್ರದರ್ಶನದನೆಲೆಗಷ್ಟೇ ಸೀಮಿತಗೊಳಿಸದೆ ಒಂದು ವಿಶಿಷ್ಟ ಅನುಭವದ ಹಾಗೂ ಉನ್ನತಿಗೇರಿಸುವ ಅವಕಾಶವಾಗಿಸಬೇಕೆಂಬುದು ಎಂಐಸಿ ಹಾಗೂ ಉದಯವಾಣಿಯ ಉದ್ದೇಶ.
ಎಂಐಸಿಯು 1997ರಲ್ಲಿ ಸ್ಥಾಪನೆಯಾಯಿತು. ಮಾಧ್ಯಮ ಮತ್ತು ಸಂವಹನ ಶಾಲೆಯಾಗಿ ದೇಶದಲ್ಲೇ ಉನ್ನತ ಸ್ಥಾನದಲ್ಲಿದೆ. ವಿಶ್ವದರ್ಜೆಯ ವೃತ್ತಿಪರರಿಗೆ ಮಾರ್ಗದರ್ಶನ ನೀಡುತ್ತಿದೆ. ರಜತಮಹೋತ್ಸವ ಸಂಭ್ರಮದಲ್ಲಿರುವ ಸಂಸ್ಥೆಯು ಹಲವು ಸಾಮಾಜಿಕಕಾರ್ಯಕ್ರಮಗಳನ್ನು ನಡೆಸುತ್ತಾ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ.
ನೀವೂ ಮಳಿಗೆ ಸ್ಥಾಪಿಸಿ, ಭಾಗವಹಿಸಿ :
ಉದಯವಾಣಿ ಮತ್ತು ಎಂಐಸಿಯ ನಮ್ಮ ಸಂತೆಯಲ್ಲಿ ತಮ್ಮ ವಿಶಿಷ್ಟ ಉತ್ಪನ್ನಗಳೊಂದಿಗೆಸ್ಥಳೀಯ ಉದ್ಯಮಿಗಳು, ಕರಕುಶಲಉತ್ಪನ್ನಗಾರರು ಪಾಲ್ಗೊಳ್ಳಲು ಅವಕಾಶವಿದೆ.ನಮ್ಮ ಸಂತೆಯಲ್ಲಿ ತಮ್ಮ ಮಳಿಗೆಗಳನ್ನುಸ್ಥಾಪಿಸುವ ಸಂಬಂಧಿತ ಮಾಹಿತಿಗಾಗಿಚಕಿತ್ ಎಂ. ಶಿವ(9449450175) ಅಥವಾ ಶ್ರುತಿ ಸುಬ್ರಹ್ಮಣ್ಯನ್ (9480479213) ಇವರನು ಸಂಪರ್ಕಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.