“ದೀಪಾವಳಿ ಧಮಾಕ 2022′ ಲಕ್ಕಿ ಡ್ರಾ ವಿಜೇತರ ಆಯ್ಕೆ:  ಉದಯವಾಣಿ ಸುದ್ದಿ,ಲೇಖನಗಳಲ್ಲಿ ವೈಶಿಷ್ಟ್ಯ


Team Udayavani, Dec 16, 2022, 6:21 AM IST

“ದೀಪಾವಳಿ ಧಮಾಕ 2022′ ಲಕ್ಕಿ ಡ್ರಾ ವಿಜೇತರ ಆಯ್ಕೆ:  ಉದಯವಾಣಿ ಸುದ್ದಿ,ಲೇಖನಗಳಲ್ಲಿ ವೈಶಿಷ್ಟ್ಯ

ಉಡುಪಿ: ಆರಂಭದಿಂದಲೂ ಉದಯವಾಣಿ ಪತ್ರಿಕೆ ಸುದ್ದಿ, ಲೇಖನಗಳಲ್ಲಿ ವೈಶಿಷ್ಟ್ಯ ಕಾಪಾಡಿಕೊಂಡು ಓದುಗರನ್ನು ಹಿಡಿದಿಟ್ಟುಕೊಂಡಿದೆ. ನಿತ್ಯ ಉದಯವಾಣಿ ಪತ್ರಿಕೆ ಓದಿದ ಅನಂತರವೇ ದಿನಚರಿ ಅರ್ಥಪೂರ್ಣ ಎಂದು ಕಿದಿಯೂರು ಹೊಟೇಲ್ಸ್‌ ಪ್ರೈ. ಲಿ. ಆಡಳಿತ ನಿರ್ದೇಶಕ ಭುವನೇಂದ್ರ ಕಿದಿಯೂರು ಹೇಳಿದರು.

ಬುಧವಾರ ಮಣಿಪಾಲದ ಉದಯವಾಣಿ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದಯವಾಣಿಯು ಮಂಗಳೂರು ಲೇಡಿಹಿಲ್‌ ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ “ದೀಪಾವಳಿ ಧಮಾಕ-2022’ರ ವಿಜೇತರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿ ಅವರು ಮಾತನಾಡಿದರು.

ಪ್ರಚಲಿತ ಸುದ್ದಿಗಳು, ಸಾಮಾಜಿಕ ಕಳಕಳಿ ನೆಲೆಯಲ್ಲಿ ವರದಿ ಪ್ರಕಟಿಸುವ ಉದಯವಾಣಿ ಜನರ ಆಪ್ತ ಪತ್ರಿಕೆಯಾಗಿ ಹೊರಹೊಮ್ಮಿದೆ. ದೀಪಾವಳಿ ವಿಶೇಷಾಂಕದ ಮೂಲಕ ಓದುಗರನ್ನು ಒಳಗೊಂಡು ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಕೊಡುಗೆ ನೀಡುತ್ತಿರುವುದನ್ನು ಶ್ಲಾ ಸಿದರು.

ಮಣಿಪಾಲ ಮೀಡಿಯ ನೆಟ್‌ವರ್ಕ್‌ ಲಿ. ಕಾರ್ಯನಿರ್ವಹಕ ಅಧ್ಯಕ್ಷ ಟಿ. ಸತೀಶ್‌ ಯು. ಪೈ ಅಧ್ಯಕ್ಷತೆ ವಹಿಸಿದ್ದರು. ಗುಣಮಟ್ಟದ ಸುದ್ದಿ, ಹೊಸತನದ ಪರಿಕಲ್ಪನೆಗೆ ಉದಯವಾಣಿ ಸದಾ ತೆರೆದುಕೊಂಡು ಓದುಗರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ದಿನಪತ್ರಿಕೆಗಳ ಇತಿಹಾಸದಲ್ಲಿ ದೀಪಾವಳಿ ವಿಶೇಷಾಂಕವನ್ನು ಮೊದಲು ಆರಂಭಿಸಿದ ಕೀರ್ತಿ ಉದಯವಾಣಿಗೆ ಸಲ್ಲುತ್ತದೆ. ಈ ಮೂಲಕ ಓದುಗ ವರ್ಗವನ್ನು ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಲಾಯಿತು. ಈ ವರ್ಷ ಓದುಗರ ಸ್ಪಂದನೆ ಅತ್ಯುತ್ತಮವಾಗಿತ್ತು. ವರ್ಷದಿಂದ ವರ್ಷಕ್ಕೆ ಉದಯವಾಣಿ ವಿಶೇಷಾಂಕ ಹೆಚ್ಚು ಓದುಗರನ್ನು ತಲುಪುತ್ತಿದೆ ಎಂದು ಎಂಎಂಎನ್‌ಎಲ್‌ ಆಡಳಿತ ನಿರ್ದೇಶಕ ಮತ್ತು ಸಿಇಒ ವಿನೋದ್‌ ಕುಮಾರ್‌ ತಿಳಿಸಿದರು.

ಎಂಎಂಎನ್‌ಎಲ್‌ ಉಪಾಧ್ಯಕ್ಷ (ನ್ಯಾಶನಲ್‌ ಹೆಡ್‌-ಮ್ಯಾಗಜಿನ್‌ ಆ್ಯಂಡ್‌ ಸ್ಪೆಶಲ್‌ ಇನೀಶಿಯೇಟಿವ್ಸ್‌) ರಾಮಚಂದ್ರ ಮಿಜಾರು ಸ್ವಾಗತಿಸಿ, ಪಾರದರ್ಶಕ ನೆಲೆಯಲ್ಲಿ ಲಕ್ಕಿ ಡ್ರಾ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗಿದೆ. ದೀಪಾವಳಿ ಧಮಾಕಾ ವಿಶೇಷ ಸ್ಪರ್ಧೆಗೆ ಈ ವರ್ಷ ಓದುಗರಿಂದ ರಾಜ್ಯಾದ್ಯಂತ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ ಎಂದರು. ಸಂಪಾದಕ ಅರವಿಂದ ನಾವಡ ಪ್ರಸ್ತಾವನೆಗೈದು, ಸುದ್ದಿ ಸಂಪಾದಕ ರಾಜೇಶ್‌ ಮೂಲ್ಕಿ ವಂದಿಸಿದರು. ಅತಿಥಿಗಳು ಬಂಪರ್‌, ಪ್ರಥಮ, ದ್ವಿತೀಯ, ತೃತೀಯ, ಪ್ರೋತ್ಸಾಹಕ ಬಹುಮಾನಗಳ ವಿಜೇತರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿದರು.

ದೀಪಾವಳಿ ಧಮಾಕಾ ವಿಜೇತರು :

ಬಂಪರ್‌ ಬಹುಮಾನ: ರೋಹಿತ್‌ ಬಿ. ನಾಯಕ್‌, ಬಿಎಚ್‌ ರಸ್ತೆ, ಶಿವಮೊಗ್ಗ,

ಪ್ರಥಮ: ರಕ್ಷಿತ್‌ ದಿನೇಶ್‌ ಕೊಟ್ಯಾನ್‌ ಬಡಗಬೆಟ್ಟು ಉಡುಪಿ. ಕಾಶಿಶ್‌, ಚಿಲಿಂಬಿ ಮಂಗಳೂರು.

ದ್ವಿತೀಯ: ನಿತ್ಯಾನಂದ ಬಲ್ನಾಡು ಅಡೂxರು ಮಂಗಳೂರು.

ವಿವೇಕ್‌ ಹೆಗ್ಡೆ ಸಾಲಿಗ್ರಾಮ ಉಡುಪಿ. ಆರ್‌.ವಿ. ಕುಲಕರ್ಣಿ ಆಂಜನೇಯ ನಗರ ಬೆಳಗಾವಿ.

ತೃತೀಯ: ರಶ್ಮಿ ನಾಯಕ್‌ ಗುಡ್ಡೆ ಅಂಗಡಿ ಬೈಂದೂರು, ಪ್ರಮೋದ್‌ ಕೊಟ್ಟಾರಿ ಪದವು ಮಂಗಳೂರು.

ಎಚ್‌. ಎಸ್‌. ಸೂರಜ್‌ ಕುಮಾರ್‌ ವಿಶ್ವೇಶ್ವರ ಬಡಾವಣೆ ಟಿ. ದಾಸರಹಳ್ಳಿ ಬೆಂಗಳೂರು.

ಸ್ವಾತಿ ಕೊಡಂಗಳ ಮರ್ಣೆ.

ಪ್ರೋತ್ಸಾಹಕ ಬಹುಮಾನ: ದಿನೇಶ್‌ ಮೋಹನ್‌ ವಿಜಯನಗರ ಶಿರಸಿ, ಗಣೇಶ್‌ ಉಡುಪ ಕೆ. ಉಪ್ಪಳ ಕಾಸರಗೋಡು, ಕವಿತಾ ಕೆ. ಕೊಲ್ಯ ಮಂಗಳೂರು, ಆನಂದ್‌ ರಾವ್‌ ಮೈಸೂರು, ಅರುಣಾ ಡಿ. ರೈ, ತಲಪಾಡಿ, ಉಳ್ಳಾಲ, ವಾಸುದೇವ ಎಸ್‌. ಪೈ ಮಲಾಡ್‌ ವೆಸ್ಟ್‌ ಮುಂಬಯಿ, ಕೃಷ್ಣಪ್ಪ ಪೂಜಾರಿ ಪೆರ್ಣೆ ಬಂಟ್ವಾಳ, ಶಿವಾನಂದ ಹುಕ್ರಟ್ಟೆ ಕಾರ್ಕಳ, ಸುಮನಾ ವಿ. ಕಾಮತ್‌ ಚೇರ್ಕಾಡಿ, ಲತಾ ಆರ್‌. ಮಾರುತಿ ನಗರ, ಬೆಂಗಳೂರು, ದಿನೇಶ್‌ ಶೆಟ್ಟಿ ಇಡ್ಯಾ ಸುರತ್ಕಲ್‌, ಶಂಕರ ದೇವಾಡಿಗ ಎಲ್ಲೂರು, ಕಾಪು, ಗೀತಾ ಹಲ್ಸನಾಡು ವಡೇರಹೋಬಳಿ, ಕುಂದಾಪುರ, ಶೋಭಿತಾ ಕೆ. ಈಶ್ವರ ನಗರ ಮಣಿಪಾಲ, ಗುರುಪ್ರಸಾದ್‌ ಸಿ.ಪಿ. ನಾಲ್ಕೂರು ಸುಳ್ಯ, ತರುಣಾಕ್ಷಿ ಎನ್‌. ಬಿ. ನಿಟ್ಟೂರು, ಹಾಸನ, ಗುರುರಾಜ ಎಚ್‌. ದೇಸಾಯಿ, ಹೇಮಂತ ನಗರ ಹುಬ್ಬಳ್ಳಿ, ಶೇಖರ್‌ ಎಸ್‌. ಕೋಟತಟ್ಟು, ಕೋಟ, ಅಂತೊನಿ ಪಿರೇರ ವೇಣೂರು ಬೆಳ್ತಂಗಡಿ, ರಾಜಶೇಖರ್‌ ಎಂ. ಮುದ್ರಾಡಿ ಹೆಬ್ರಿ.

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.