“ಉದಯವಾಣಿ’ ಕಲ್ಯಾಣಪುರ ಏಜೆನ್ಸಿಗೆ 50ರ ಸಂಭ್ರಮ
Team Udayavani, Feb 25, 2019, 1:00 AM IST
ಉಡುಪಿ: ಉದಯವಾಣಿ ಪತ್ರಿಕೆಯು ಗುಣಮಟ್ಟ ಹಾಗೂ ಸುದ್ದಿಯ ನಿಖರತೆಯನ್ನು ಇಂದಿಗೂ ಕಾಪಾಡಿಕೊಂಡು ಬಂದಿದ್ದು, ವಿಶ್ವಾಸಾ ರ್ಹತೆಗೆ ಪಾತ್ರವಾಗಿದೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಜನರಿಗೆ ತಲುಪುವಂತಾಗಲಿ ಎಂದು ಉದ್ಯಮಿ ಕೆ. ಶಾಂತಾರಾಮ ಬಾಳಿಗ ಹೇಳಿದರು.
ರವಿವಾರ ಕಲ್ಯಾಣಪುರದ ಶ್ರೀ ವೆಂಕಟರಮಣ ದೇವಸ್ಥಾನದ ಸಭಾಂಗಣದಲ್ಲಿ ನಡೆದ “ಉದಯವಾಣಿ’ ಕಲ್ಯಾಣಪುರ ವಿತರಣ ಏಜೆನ್ಸಿಗೆ 50ರ ಸಂಭ್ರಮ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿ.ನ ವ್ಯವಸ್ಥಾಪಕ ನಿರ್ದೇಶಕ ಟಿ. ಸತೀಶ್ ಯು. ಪೈ ಅವರು ಮುಖ್ಯ ಅತಿಥಿಯಾಗಿದ್ದರು.
ಕಲ್ಯಾಣಪುರ ಏಜೆಂಟ್ ಕೆ. ವಿಜೇಂದ್ರ ಕಾಮತ್-ವಿನಯಾ ಕಾಮತ್ ದಂಪತಿ, ಕುಟುಂಬದ ಹಿರಿಯ ಸದಸ್ಯ ಸುಬ್ರಾಯ ಕಾಮತ್, ಬ್ರಹ್ಮಾವರದ ಕೆ. ವಾಮನ ಕಾಮತ್, ಕಟಪಾಡಿಯ ಕೆ. ಬಾಬುರಾಯ ಶೆಣೈ, ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಯ ಸಿಬಂದಿ, ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿ. ಸಿಬಂದಿ ಉಪಸ್ಥಿತರಿದ್ದರು.
ಟಿ. ಸತೀಶ್ ಯು. ಪೈ ಅವರನ್ನು ವಿಜೇಂದ್ರ ಕಾಮತ್ ದಂಪತಿ ಸಮ್ಮಾನಿಸಿದರು.
ಸಂತೋಷ್ ಕಾಮತ್ ಸ್ವಾಗತಿಸಿದರು. ಲಕ್ಷ್ಮೀಶ ಭಟ್ ವಂದಿಸಿದರು. ವರದರಾಯ ಕಾಮತ್ ಕಾರ್ಯಕ್ರಮ ನಿರೂಪಿಸಿದರು.
ಸಮ್ಮಾನಿತರು
ವಿಜೇಂದ್ರ ಕಾಮತ್ ದಂಪತಿ, ಶಾಂತಾರಾಮ ಬಾಳಿಗ ದಂಪತಿ, ಡಾ| ವಿನ್ಸೆಂಟ್ ಆಳ್ವ, ಜನಾರ್ದನ ತೋನ್ಸೆ, ಅನಂತ ಪದ್ಮನಾಭ ಕಿಣಿ ದಂಪತಿ, ಕೆ. ಕಾಶೀನಾಥ ಭಟ್ ದಂಪತಿ, ಕೆ. ಬಾಬುರಾಯ ಶೆಣೈ ದಂಪತಿ, ವಾಮನ ಕಾಮತ್ ದಂಪತಿ, ವಿಜಯ ಕಾಮತ್, ಪ್ರಕಾಶ್ ಕಾಮತ್, ಪತ್ರಿಕೆ ವಿತರಕರಾದ ಮಾಧವ ಪೈ, ರಮೇಶ್ ಪೈ, ಯೋಗೀಶ್ ಶೆಣೈ ಅವರನ್ನು ಸಮ್ಮಾನಿಸಲಾಯಿತು. ಡಾ| ರಶ್ಮಿ ಹರೀಶ್ ಭಟ್ ಅವರನ್ನು ಗೌರವಿಸಲಾಯಿತು.
“ಪ್ರಿಯ ಓದುಗ’ಕ್ಕೆ ಮೆಚ್ಚುಗೆ
ತರಂಗ ವಾರಪತ್ರಿಕೆಯಲ್ಲಿ ಬರುವಂತಹ “ಪ್ರಿಯ ಓದುಗ’ಅಂಕಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೆ. ಶಾಂತಾರಾಮ ಬಾಳಿಗ, ಈ ಅಂಕಣವು ಓದುಗರನ್ನು ಹಿಡಿತದಲ್ಲಿರುವ ಆಕರ್ಷಣೆ ಹೊಂದಿದೆ. ಇದೇ ರೀತಿಯ ಉತ್ತಮ ಅಂಕಣಗಳನ್ನು ಪ್ರಕಟಿಸುವ ಮೂಲಕ ಮಣಿಪಾಲ ಮೀಡಿಯ ನೆಟ್‌ವರ್ಕ್ ಲಿ. ಜನರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.