Udayavani: ನವರೂಪದಲ್ಲಿ ಪಾಲ್ಗೊಂಡು ಸಂಭ್ರಮಿಸಿ; ಇಂದಿನಿಂದ ನವರೂಪ -ನವರಾತ್ರಿ
Team Udayavani, Oct 3, 2024, 7:15 AM IST
ಉಡುಪಿ: ದುರ್ಗೆಯನ್ನು ನವ ಅವತಾರಗಳಲ್ಲಿ ಪೂಜಿಸುವ ಶರನ್ನವರಾತ್ರಿಯ ಸಂಭ್ರಮವನ್ನು ಹೆಚ್ಚಿಸಲು “ಉದಯವಾಣಿ’ಯ “ನವರೂಪ’ ಮತ್ತೆ ಬಂದಿದೆ.
ಅ. 3ರಿಂದ ಅ. 11ರ ವರೆಗೂ ನಿತ್ಯ ಮಹಿಳೆಯರು, ಹೆಣ್ಣು ಮಕ್ಕಳು ನಿರ್ದಿಷ್ಟ ಬಣ್ಣದ ಸಾಂಪ್ರದಾಯಿಕ ಸೀರೆ/ದಿರಿಸು ಧರಿಸಿ ಅದರೊಂದಿಗೆ ಸಮೂಹ ಚಿತ್ರ ತೆಗೆದು ಉದಯವಾಣಿಗೆ ಕಳುಹಿಸುವ ಮೂಲಕ ಎಲ್ಲರೂ ಈ “ನವರೂಪ’ದಲ್ಲಿ ಭಾಗವಹಿಸಿ ಸಂಭ್ರಮಿಸಬಹುದಾಗಿದೆ.
ಕುಟುಂಬ ಸದಸ್ಯೆಯರು, ಕಚೇರಿ ಸಹೋದ್ಯೋಗಿಗಳು, ಗೆಳತಿಯರು, ಸಂಘ ಸಂಸ್ಥೆಯ ಸಹಪಾಠಿಗಳು ಒಟ್ಟಾಗಿ ಇದರಲ್ಲಿ ಸಂಭ್ರಮದಿಂದ ಭಾಗವಹಿಸಬಹುದು.
ಆಯಾ ದಿನ ಸೂಚಿಸಲಾದ ಬಣ್ಣದ ಸೀರೆ, ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ಚಿತ್ರಗಳನ್ನು ತೆಗೆದು ಅದೇ ದಿನ ಸಂಜೆ 3 ಗಂಟೆಯೊಳಗೆ ನಮ್ಮ ವಾಟ್ಸ್‌ಆ್ಯಪ್ ನಂಬರ್‌ಗೆ ಕಳುಹಿಸಬೇಕು. ಹಳೆಯ ಚಿತ್ರಗಳನ್ನು ಪರಿಗಣಿಸುವುದಿಲ್ಲ.
ಸಾಧಕರ ಕೂಡುವಿಕೆಯೇ ನವರೂಪ
ಹಿಂದಿನ ಎರಡು ವರ್ಷಗಳಂತೆಯೇ ಈ ಬಾರಿಯೂ ಕಲೆ, ಸಾಹಿತ್ಯ, ಸಿನೆಮಾ, ಸಂಗೀತ, ಕ್ರೀಡೆ ಮತ್ತು ಉದ್ಯಮ ಸಹಿತ ವಿವಿಧ ಕ್ಷೇತ್ರದಲ್ಲಿನ ವಿಶಿಷ್ಟ ಸಾಧಕಿಯರಾದ ಪದ್ಮಭೂಷಣ ಪುರಸ್ಕೃತರಾದ ಬಿ. ಸರೋಜಾ ದೇವಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವೈದೇಹಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಹಿನ್ನೆಲೆ ಗಾಯಕಿ ಎಂ.ಡಿ. ಪಲ್ಲವಿ, ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಶ್ರೇಯಾಂಕ ಪಾಟೀಲ್, ಚಿತ್ರನಟಿಯರಾದ ರುಕ್ಮಿಣಿ ವಸಂತ್, ಮಧುರಾ ಆರ್.ಜೆ., ಫ್ಯಾಶನ್ ಸ್ಟೈಲಿಸ್ಟ್ ಪ್ರಗತಿ ಶೆಟ್ಟಿ, ಆಭರಣ ಜುವೆಲರ್ನ ಸಂಧ್ಯಾ ಕಾಮತ್, ಹ್ಯಾಂಗ್ಯೋ ಐಸ್‌ಕ್ರೀಂನ ದೀಪಾ ಪೈ ಉದಯವಾಣಿಯ ನವ ರೂಪದಲ್ಲಿ ಭಾಗವಹಿಸಿ ನವರೂಪದ ಸಂಭ್ರಮವನ್ನು ಹೆಚ್ಚಿಸಲಿದ್ದಾರೆ.
ಈಗ ಚಿತ್ರ ಕಳುಹಿಸುವುದು ಇನ್ನಷ್ಟು ಸುಲಭ;
ಹೀಗೆ ಮಾಡಿ
ಹಂತ 1: ಉದಯವಾಣಿಯ ನವರೂಪ ವಾಟ್ಸ್‌ಆ್ಯಪ್ ಸಂಖ್ಯೆ 6364888901. ಇದಕ್ಕೆ ನಮಸ್ತೆ ಅಥವಾ ಏಜಿ ಎಂದು ಸಂದೇಶ ಕಳುಹಿಸಿ.
ಹಂತ 2: ಅನಂತರ ಬರುವ ಸಂದೇಶದಲ್ಲಿ ನಿಮ್ಮ ತಾಲೂಕನ್ನು ಆಯ್ಕೆ ಮಾಡಿಕೊಳ್ಳಿ.
ಹಂತ 3: ಬಳಿಕ ನಿಮ್ಮ ತಂಡದ ಒಂದು ಅತ್ಯುತ್ತಮ ಚಿತ್ರವನ್ನು ನಿಮ್ಮ ಗ್ಯಾಲರಿಯಿಂದ ಆಯ್ಕೆ ಮಾಡಿ ಅಟ್ಯಾಚ್ ಮಾಡಿ ಅದರ ಕೆಳಗಡೆಯೇ ಆ್ಯಡ್ ಎ ಕ್ಯಾಪ್ಶನ್ ಎಂದು ತೋರಿಸುವಲ್ಲಿ ನಿಮ್ಮ ತಂಡದ ಹೆಸರು, ವಿಳಾಸ ಸಹಿತ ವಿವರವನ್ನು ಟೈಪ್ ಮಾಡಿದ ಬಳಿಕ ಕಳುಹಿಸಿ.
ಹಂತ 4: ಚಿತ್ರ ಸರಿಯಾದ ರೀತಿಯಲ್ಲಿ ಕಳುಹಿಸಿದ ಬಳಿಕ ಉದಯವಾಣಿಯ ಸ್ವೀಕೃತಿ ಸಂದೇಶ ನಿಮ್ಮನ್ನು ತಲುಪಲಿದೆ.
ನಿತ್ಯವೂ ಅದೃಷ್ಟಶಾಲಿಗಳ ಆಯ್ಕೆ
ಆಯಾ ದಿನದ ಬಣ್ಣದ ಸೀರೆ/ ಸಾಂಪ್ರದಾಯಿಕ ಉಡುಗೆ ಧರಿಸಿ ಮೂರು ಅಥವಾ ಅದಕ್ಕಿಂತ ಹೆಚ್ಚು ಮಂದಿ ಒಟ್ಟಾಗಿ ತೆಗೆದ ಸಮೂಹ ಚಿತ್ರ ಉದಯವಾಣಿಗೆ ಕಳುಹಿಸಬೇಕು. ಪ್ರತಿ ದಿನವೂ ಮೂವರು ಅದೃಷ್ಟ ಶಾಲಿಗಳು, ಅಂತಿಮವಾಗಿ ಮೂವರಿಗೆ ಬಂಪರ್ ಬಹುಮಾನ ನೀಡಲಾ ಗುವುದು. ಉತ್ತಮ ಗುಣಮಟ್ಟದ ಆಯ್ದ ಚಿತ್ರಗಳನ್ನು ಮರುದಿನದ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.