ಉದಯವಾಣಿ ವಿದ್ಯಾರ್ಥಿ ಪತ್ರಕರ್ತ ಯೋಜನೆಗೆ ಆಹ್ವಾನ
Team Udayavani, Aug 23, 2018, 2:55 AM IST
ಮಣಿಪಾಲ: ಈ ವರ್ಷದಿಂದ ಉದಯವಾಣಿ ವಿದ್ಯಾರ್ಥಿ ಪತ್ರಕರ್ತ ಯೋಜನೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಪೂರ್ಣ ಪ್ರಮಾಣದಲ್ಲಿ ವಿಸ್ತರಿಸಲಾಗುತ್ತಿದೆ. ಕಳೆದ ವರ್ಷ ಪ್ರಾಯೋಗಿಕವಾಗಿ ಪುತ್ತೂರಿನಲ್ಲಿ ಜಾರಿಗೊಳಿಸಲಾಗಿತ್ತು. ಈ ಯೋಜನೆ ವಿಶೇಷವಾಗಿದ್ದು, ಓದಿನ ಜತೆಗೇ ಕೆಲವು ಸಮಯವನ್ನು ವಿನಿಯೋಗಿಸುವ ಮೂಲಕ ಉಚಿತವಾಗಿ ಉದಯವಾಣಿಯೊಂದಿಗೆ ಪತ್ರಿಕೋದ್ಯಮದ ಪ್ರಾಯೋಗಿಕ ಅನುಭವವನ್ನು ಪಡೆಯಬಹುದಾಗಿದೆ. ಬಿಎ ಹಾಗೂ ಎಂಎ ಓದುತ್ತಿರುವವರು ಈ ಯೋಜನೆಗೆ ಅರ್ಹರು. ಪ್ರಸ್ತುತ ಯಾವುದಾದರೂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಈ ಯೋಜನೆಯಡಿ ವಿವಿಧ ಭಾಗಗಳಿಂದ ನಿಗದಿತ ಸಂಖ್ಯೆಯ ಆಸಕ್ತರನ್ನು ಆಯ್ದುಕೊಳ್ಳಲಾಗುವುದು.
ತರಬೇತಿ ವಿವರ
ಆಯ್ದ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ನೀಡುವುದಲ್ಲದೆ, ನಾಲ್ಕು ತಿಂಗಳಿಗೊಮ್ಮೆ ಕಾರ್ಯಾಗಾರ ನಡೆಸಲಾಗುವುದು. ವಾರದಲ್ಲಿ ಅವರು ಇರುವ ಸುತ್ತಲಿನ ಪ್ರದೇಶದಲ್ಲೇ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಮಾಡಲು ಅವಕಾಶ ನೀಡಲಾಗುವುದು. ಆ ಮೂಲಕ ಅವರಿಗೆ ವರದಿಗಾರಿಕೆಯಲ್ಲದೆ, ವರ್ಷದಲ್ಲಿ ಒಂದು-ಎರಡು ಬಾರಿ ಸುದ್ದಿಮನೆಯಲ್ಲೂ (ಡೆಸ್ಕ್) ಕೆಲಸ ಮಾಡಲು ಅವಕಾಶ ಕಲ್ಪಿಸಲಾಗುವುದು. ತರಬೇತಿ ಮುಗಿದ ಮೇಲೆ ಉದಯವಾಣಿ ವಿದ್ಯಾರ್ಥಿ ಪತ್ರಕರ್ತ ಯೋಜನೆಯ ಪ್ರಮಾಣಪತ್ರ ನೀಡಲಾಗುವುದು. ತರಬೇತಿ ಅವಧಿಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದವರಿಗೆ ಅವಕಾಶವಿದ್ದಲ್ಲಿ ‘ಉದಯವಾಣಿ’ಯಲ್ಲೇ ಪರಿಗಣಿಸಲಾಗುವುದು.
ಆಯ್ಕೆ ಹೇಗೆ?
ಈ ಸಂಬಂಧ ಸೆಪ್ಟಂಬರ್ 19ರಂದು ಕಿರು ಪರೀಕ್ಷೆ ನಡೆಯಲಿದೆ. ಸುಳ್ಯ ಮತ್ತು ಪುತ್ತೂರು ಭಾಗದವರಿಗೆ ಪುತ್ತೂರಿನಲ್ಲಿ, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ಗ್ರಾಮಾಂತರ ಹಾಗೂ ಮಂಗಳೂರಿನವರಿಗೆ ಮಂಗಳೂರಿನಲ್ಲಿ; ಉಡುಪಿ, ಕಾರ್ಕಳದವರಿಗೆ ಉಡುಪಿಯಲ್ಲಿ ಹಾಗೂ ಕುಂದಾಪುರದವರಿಗೆ ಕುಂದಾಪುರದಲ್ಲಿ ಪರೀಕ್ಷೆ ನಡೆಯಲಿದೆ. ಬೆಳ್ತಂಗಡಿ ಮತ್ತು ಬಂಟ್ವಾಳದವರು ಪುತ್ತೂರಿನಲ್ಲೂ ಪರೀಕ್ಷೆ ಬರೆಯಲು ಅವಕಾಶವಿದೆ.
ಆಸಕ್ತರು ತಮ್ಮ ಹೆಸರು, ಊರು, ಓದುತ್ತಿರುವ ಕೋರ್ಸ್-ವರ್ಷ, ಕಾಲೇಜಿನ ಹೆಸರು, ಸಂಪರ್ಕ ಸಂಖ್ಯೆ ಹಾಗೂ ಇ-ಮೇಲ್ ಐಡಿ ಈ ವಾಟ್ಸ್‌ಆಪ್ ನಂಬರ್‌ಗೆ 99641 69554ಗೆ ಅಥವಾ ಇಮೇಲ್ [email protected] ಗೆ ಸೆ. 5ರೊಳಗೆ ಕಳುಹಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.