ಕೋ.ಅ. ಉಡುಪ ಪ್ರಶಸ್ತಿ ಪ್ರದಾನ
Team Udayavani, Jul 26, 2017, 6:30 AM IST
ಕಿನ್ನಿಗೋಳಿ: ಯುಗಪುರುಷದ ಮೂಲಕ ಕಿನ್ನಿಗೋಳಿಯನ್ನು ಸಾಂಸ್ಕೃತಿಕ, ಸಾಹಿತ್ಯಿಕವಾಗಿ ಬೆಳೆಸಿ ದೇಶ ವಿದೇಶಗಳಿಗೆ ಪರಿಚಯಿಸಿದ ಕೀರ್ತಿ ದಿ| ಕೊ.ಅ. ಉಡುಪ ಅವರಿಗೆ ಸಲ್ಲುತ್ತದೆ
ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು. ಅವರು ಸೋಮವಾರ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಯುಗಪುರುಷ ಸಂಸ್ಥಾಪಕ ದಿ| ಕೊ.ಅ. ಉಡುಪ ಅವರ ಸಂಸ್ಮರಣ ಕಾರ್ಯಕ್ರಮದಲ್ಲಿ ಸಂಸ್ಮರಣ ಭಾಷಣ ಮಾಡಿದರು. ಕೊ.ಅ. ಉಡುಪ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ರೀತಿಯ ಸೇವೆ ಸಲ್ಲಿಸಿದ ಸಾಂತೂರು ಶ್ರೀನಿವಾಸ ತಂತ್ರಿ ಅವರಿಗೆ ನೀಡಿ ಗೌರವಿಸಲಾಯಿತು. ವೇದ ವಿದ್ವಾಂಸರ ನೆಲೆಯಲ್ಲಿ ಸಗ್ರಿ ವೇದವ್ಯಾಸ ಐತಾಳ ಅವರನ್ನು ಗೌರವಿಸಲಾಯಿತು.
ಕಟೀಲು ದೇವಸ್ಥಾನದ ಅರ್ಚಕ ಲಕ್ಷ್ಮೀನಾರಾಯುಣ ಆಸ್ರಣ್ಣ ಶುಭ ಹಾರೈಸಿದರು. ಬೆಂಗಳೂರಿನ ಎಂ.ವಿ. ಭಟ್ ಬರೆದ ಸಂಸ್ಕೃತಿ ಸಮಾಜ ಮತ್ತು ದೇಶ ಕೃತಿಯನ್ನು ದ.ಕ. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಬಿಡುಗಡೆಗೊಳಿಸಿದರು. ಹಿರಿಯ ಸಾಹಿತಿ ಕೆ.ಜಿ. ಮಲ್ಯ ಕಿನ್ನಿಗೋಳಿ, ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಅತುಲ್ ಕುಡ್ವ, ಮಂಗಳೂರು ನ್ಯಾಯವಾದಿ ನಾರಾಯಣ ಪೂಜಾರಿ, ಕಿನ್ನಿಗೋಳಿಯ ಉದ್ಯಮಿ ಪೃಥ್ವೀರಾಜ್ ಆಚಾರ್ಯ, ಡಾ| ನಯನಾಭಿರಾಮ್ ಉಡುಪ, ಅನಂತ ಉಡುಪ, ಪದ್ಮನಾಭ ಉಡುಪ, ಎಂ.ಜಿ. ರಾಮ್‌ಣ್ಣ , ಶೇಖರ ಶೆಟ್ಟಿ, ಪಿ. ಸತೀಶ್ ರಾವ್, ದೇವಪ್ರಸಾದ್ ಪುನರೂರು ಉಪಸ್ಥಿತರಿದ್ದರು. ಯುಗಪುರುಷದ ವತಿಯಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉತ್ತಮ ಬರವಣಿಗೆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಎಂ.ಜೆ. ರಾಮ್‌ಣ್ಣ ಪಕ್ಷಿಕರೆ, ರಾಮ್‌ಚಂದ್ರ ಭಟ್ ಕಿನ್ನಿಗೋಳಿ, ಅರೂರು ಲಕ್ಷ್ಮೀರಾವ್, ಕಿನ್ನಿಗೋಳಿಯ ದೇವರಾಯ ಮಲ್ಯ ಪ್ರತಿಷ್ಠಾನ ನೀಡುವ ವಿದ್ಯಾರ್ಥಿವೇತನ ವಿತರಣೆ ನಡೆಯಿತು. ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ್ ಉಡುಪ ಪ್ರಸ್ತಾವನೆಗೈದು ಸ್ವಾಗತಿಸಿದರು. ಅನುಷಾ ಕರ್ಕೇರಾ ಹಾಗೂ ಪು. ಗುರುಪ್ರಸಾದ್ ಭಟ್ ಸಮ್ಮಾನ ಪತ್ರ ವಾಚಿಸಿದರು. ಶರತ್ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.