ಉಡುಪಿ : 48 ದೇಶೀ ಗೋವುಗಳ ಒಡತಿ ಮನೆ ಧರೆಗೆ…
Team Udayavani, Aug 5, 2017, 7:05 AM IST
ಉಡುಪಿ: ಪಕ್ಕಾ ದೇಶೀಯ ಗೋವುಗಳ ಪಾಲನೆ- ಪೋಷಣೆಯಲ್ಲಿಯೇ ಸಂತೃಪ್ತಿ ಪಡುತ್ತಿದ್ದ ಉಡುಪಿ ಮಲ್ಲಂಪಳ್ಳಿ ನಿವಾಸಿ ದಲಿತ ಮಹಿಳೆ ಕಮಲ (54) ಅವರು ವಾಸಿಸುತ್ತಿದ್ದ ಸಣ್ಣ ಸೂರೇ ಕುಸಿದು ಬಿದ್ದಿದ್ದು, ಈಗ ಕಂಗಲಾಗಿದ್ದಾರೆ. ಮನೆ ಕಟ್ಟಲು ದಾನಿಗಳ ನೆರವಿಗಾಗಿ ಮನವಿ ಮಾಡಿಕೊಂಡಿದ್ದಾರೆ.
ದಾದಿಯಾಗಿದ್ದ ಇವರು ಆ ಕೆಲಸ ಬಿಟ್ಟು, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚೆಗೆ ಸುರಿದ ಭಾರೀ ಗಾಳಿ-ಮಳೆಯಿಂದಾಗಿ ಕಮಲ ಅವರ ಮನೆ ಸಂಪೂರ್ಣ ಕುಸಿದು ಅಪಾರ ಹಾನಿ ಸಂಭವಿಸಿದೆ. 24 ದನ, 15 ಕರು ಹಾಗೂ 8 ಬಸವ ಒಟ್ಟು 48 ದೇಶಿಯ ಗೋವುಗಳನ್ನು ಸಾಕುತ್ತಿದ್ದು, ದಿನಕ್ಕೆ ಸುಮಾರು 15 ಲೀಟರ್ ಹಾಲು ಮಾರುತ್ತಾರೆ. ಇದರಿಂದಲೇ ದೈನಂದಿನ ಜೀವನ ನಡೆಯುತ್ತಿದೆ. ಓರ್ವ ಪುತ್ರನಿದ್ದು, ಅವರು ಕೂಡ ತಾಯಿ ಜತೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹವ್ಯಕ ಸಭಾದ ದಿಗªರ್ಶಕ ಎಸ್. ಎಲ್. ಕಾರಣಿಕ್ ಹೇಳಿದ್ದಾರೆ.
ದೇಶಿ ಗೋ ಹಾಲು ಉತ್ತಮ
ಈಗ ಹೈನುಗಾರಿಕೆಯಲ್ಲಿ ಎಲ್ಲೆಡೆ ಯಶಸ್ಸು ಸಿಗುತ್ತಿದ್ದು, ಹೆಚ್ಚಿನವರು ಈ ಉದ್ಯೋಗವನ್ನು ನೆಚ್ಚಿಕೊಂಡಿದ್ದಾರೆ. ಅದರಲ್ಲೂ ವಿದೇಶಿ ಹೈಬ್ರಿಡ್ ತಳಿಗಳನ್ನೇ ಹೆಚ್ಚೆಚ್ಚು ಸಾಕುತ್ತಿದ್ದು, ಅದರಿಂದ ಹೆಚ್ಚಿನ ಲಾಭ ಗಳಿಸುವತ್ತ ಚಿತ್ತ ಹರಿಸುತ್ತಿದ್ದಾರೆ. ಇಂತಹ ಕಾಲದಲ್ಲೂ ಲಾಭವಿಲ್ಲದಿದ್ದರೂ ದೇಶೀಯ ತಳಿಗಳನ್ನೇ ಸಾಕಿ, ಕಷ್ಟವಾದರೂ ಅದರಲ್ಲೂ ಜೀವನ ಸಾಗಿಸುತಿರುವ ಕಮಲ ಅವರ ಕಾರ್ಯ ಮೆಚ್ಚಲೇಬೇಕು. ಯಾಕೆಂದರೆ ದೇಶೀ ಗೋವುಗಳ ಹಾಲು ಆರೋಗ್ಯದ ದೃಷ್ಟಿಯಿಂದಲೂ ಉತ್ತಮ ಎನ್ನುವುದು ಈಗಾಗಲೇ ಹಲವು ಸಂಶೋಧನೆಗಳಿಂದ ಸಾಬೀತಾಗಿದೆ. ಇವರಿಗೆ ಒಟ್ಟು 60 ಸೆಂಟ್ಸ್ ಜಾಗವಿದ್ದು, ಅದರಲ್ಲಿ ಸ್ವಲ್ಪ ತೆಂಗಿನ ಮರಗಳಿವೆ ಅಷ್ಟೇ. ಉಳಿದಂತೆ ಯಾವುದೇ ಕೃಷಿಯಿಲ್ಲ. ಆ ಜಾಗದಲ್ಲೇ ಸರಕಾರದ ವತಿಯಿಂದ ಕಟ್ಟಲಾದ ಮನೆಯಿತ್ತು. ಅದು ಕೂಡ ಈಗ ಕುಸಿದು ಬಿದ್ದಿದೆ.
ಈಗ ಹವ್ಯಕ ಸಭಾ, ರಾಘವೇಶ್ವರ ಶ್ರೀಗಳ ಮುತುವರ್ಜಿ
ಯಲ್ಲಿ ದನಗಳಿಗೆ ಕೊಟ್ಟಿಗೆಯೇನು ಸಿದ್ಧವಾಗುತ್ತಿದೆ. ಆದರೆ ಉಳಕೊಳ್ಳಲು ಇದ್ದ ಚಿಕ್ಕ ಸೂರೇ ಕುಸಿದುಬಿದ್ದಿದ್ದು, ಬಡ ಕುಟುಂಬದ ಕಮಲ ಅವರಿಗೆ ಸಹೃದಯ ಮನಸ್ಸುಗಳ ನೆರವಿನ ಹಸ್ತ ಬೇಕಿದೆ.
ನೆರವು ನೀಡಿ
ತೀರಾ ಬಡತನದಲ್ಲಿರುವ ಕಮಲ ಅವರ ಮನೆಕಟ್ಟಲು ಹವ್ಯಕ ಮಹಾಸಭಾ, ದಾನಿಗಳು ಸಹಕರಿಸುತ್ತಿದ್ದು, ನೀವು ಕೂಡ ನೆರವು ನೀಡಬಹುದು. ಪೆರಂಪಳ್ಳಿಯ ಕಾರ್ಪೋರೇಶನ್ ಬ್ಯಾಂಕಿನಲ್ಲಿ ಕಮಲ ಅವರ ಹೆಸರಿನಲ್ಲಿ ಖಾತೆಯಿದ್ದು, ಖಾತೆ ಸಂಖ್ಯೆ : 209400101001168, ಐಎಫ್ಸಿ ಕೋಡ್ ಸಂಖ್ಯೆ : CORP0002094, ದೂರವಾಣಿ ಸಂಖ್ಯೆ : 8453007126
ರಾಘವೇಶ್ವರ ಶ್ರೀಗಳಿಂದ ನೆರವಿನ ಹಸ್ತ
ಉಡುಪಿಯಲ್ಲಿ ಈ ವರ್ಷ ನಡೆದ ಮಂಗಳ ಗೋಯಾತ್ರೆ ಸಂದರ್ಭ ಕಮಲ ಅವರನ್ನು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಶ್ರೀಗಳನ್ನು ಹವ್ಯಕ ಸಭಾದ ನೇತೃತ್ವದಲ್ಲಿ ಭೇಟಿ ಮಾಡಿಸಿದ ವೇಳೆ ಶ್ರೀಗಳು ನೆರವಿನ ಭರವಸೆ ನೀಡಿದರು. ಅದರಂತೆ ಮಠದ “ಕಾಮದುಗಾ ಯೋಜನೆ (ದೇಶಿಯ ತಳಿಗಳ ಪೋಷಣೆ, ಸಂವರ್ಧನೆಗೆ ನೆರವು) ಹಾಗೂ ಮಂಗಳಾ ಗೋಯಾತ್ರೆಯಲ್ಲಿ ಉಳಿದ ಹಣ, ಕೆಲ ದಾನಿಗಳಿಂದ ಸಂಗ್ರಹಿಸಿದ ಹಣ, ಉಡುಪಿ ಹವ್ಯಕ ಸಭಾದ ವತಿಯಿಂದ ಒಟ್ಟು ಸುಮಾರು 3.5 ಲ. ರೂ. ವೆಚ್ಚದಲ್ಲಿ ಕೊಟ್ಟಿಗೆ ಕಟ್ಟಿಕೊಡುವ ನಿರ್ಧಾರಕ್ಕೆ ಬರಲಾಯಿತು. ಈಗ ಆ ಕೆಲಸ ಕೂಡ ಆರಂಭಗೊಂಡಿದ್ದು, ಪಂಚಾಂಗ, ಮಹಡಿಯ ಕೆಲಸ ಆಗಿದೆ. ಗೋಡೆ ಕಟ್ಟುವ ಕಾರ್ಯ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.