ಉಡುಪಿ: ನೀರಿನ ಶುಲ್ಕ ಪಾವತಿಯಲ್ಲಿ ಕುಸಿತ
Team Udayavani, Jul 25, 2019, 5:59 AM IST
ಉಡುಪಿ: ನಗರಸಭೆ ವ್ಯಾಪ್ತಿಯಲ್ಲಿ ನೀರಿನ ಶುಲ್ಕ ಪಾವತಿಸುವಲ್ಲಿ ಭಾರೀ ಕುಸಿತ ಕಂಡುಬಂದಿದೆ.
ನಗರಸಭೆ ವ್ಯಾಪ್ತಿಯಲ್ಲಿ 18,322 ನಳ್ಳಿನೀರಿನ ಸಂಪರ್ಕ ಇದೆ. ಇದರಲ್ಲಿ 1,437 ವಾಣಿಜ್ಯ ಬಳಕೆಗೆ ಮತ್ತು 16,831 ಮನೆಗಳಿಗೆ ಸಂಪರ್ಕ, 28 ಕಾರ್ಖಾನೆಗಳಿಗೆ, ಇತರ 26 ನಳ್ಳಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಈ ವರ್ಷ ಹೆಚ್ಚುವರಿಯಾಗಿ ಒಟ್ಟು 220 ನಳ್ಳಿ ನೀರಿನ ಸಂಪರ್ಕ ಅಳವಡಿಸಲಾಗಿದೆ. 2018ರ ಎಪ್ರಿಲ್ನಿಂದ 2019ರ ಮಾರ್ಚ್‌ವರೆಗೆ 9,34,68,000 ರೂ. ನೀರಿನ ತೆರಿಗೆ ಸಂಗ್ರಹವಾಗಿದೆ.
ತೆರಿಗೆ ಸಂಗ್ರಹ ಇಳಿಕೆ
2018ರ ಎಪ್ರಿಲ್ನಿಂದ ಜುಲೈ ತಿಂಗಳವರೆಗೆ 3,31,90,343 ರೂ. ತೆರಿಗೆ ಸಂಗ್ರಹವಾಗಿತ್ತು. ಆದರೆ 2019ರಲ್ಲಿ ಇದೇ ಅವಧಿಯಲ್ಲಿ ಜುಲೈ 23ರ ವರೆಗೆ 2,42,67,542 ರೂ.ತೆರಿಗೆ ಸಂಗ್ರಹಿಸಲಾಗಿದೆ. ಅಂದರೆ ಕಳೆದ ಬಾರಿಗಿಂತ 89,22,801 ರೂ.ಕಡಿಮೆ. ತೆರಿಗೆ ಸಂಗ್ರಹ ಕಟ್ಟನಿಟ್ಟು ಮಾಡುವುದರಿಂದ 2020ರ ಮಾರ್ಚ್ ಒಳಗೆ ಗರಿಷ್ಠ ತೆರಿಗೆ ಸಂಗ್ರಹ ಗುರಿ ಹೊಂದಲಾಗಿದೆ.
ಸಂಪರ್ಕ ಕಡಿತ ಎಚ್ಚರಿಕೆ
ಪ್ರತೀ ತಿಂಗಳು ನೀರಿನ ಬಿಲ್ ಪಾವತಿಸಿದರೆ ಯಾವ ಸಮಸ್ಯೆಯೂ ಉದ್ಭವಿಸುವುದಿಲ್ಲ. ಈ ಬಾರಿ ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಹಲವಾರು ಮಂದಿ ನೀರಿನ ಬಿಲ್ ಬಾಕಿ ಇರಿಸಿಕೊಳ್ಳುವವರ ಹೆಸರನ್ನು ತಯಾರು ಮಾಡಿದ್ದು, ವಾರದೊಳಗೆ ನೀರಿನ ಶುಲ್ಕ ಪಾವತಿಸದಿದ್ದರೆ ಅಂತಹವರ ನಳ್ಳಿ ನೀರಿನ ಸಂಪರ್ಕ ಕಡಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ನಗರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.
ನೀರು ಸಮರ್ಪಕವಾಗಿ ಪೂರೈಕೆ ಮಾಡಲು ಗರಿಷ್ಠ ವೆಚ್ಚ ತಗಲುವ ಕಾರಣ ನಗರಸಭೆಯು ತೆರಿಗೆ ಸಂಗ್ರಹಕ್ಕೆ ಪ್ರಾಮುಖ್ಯತೆ ನೀಡಿದೆ. ಒಂದು ವೇಳೆ ಗಡುವಿನೊಳಗೆ ತೆರಿಗೆ ಪಾವತಿಸದಿದ್ದಲ್ಲಿ ನಳ್ಳಿ ನೀರಿನ ಜೋಡಣೆಯು ರದ್ದುಗೊಳ್ಳುವ ಸಾಧ್ಯತೆಯೂ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.