ಇಂದಿನಿಂದ ಉಡುಪಿ ಪರ್ಬ: ಕರಾವಳಿ ಸಜ್ಜು
Team Udayavani, Dec 29, 2017, 6:00 AM IST
ಉಡುಪಿ: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಯುವ ಸಶಕ್ತೀಕರಣ ಮತ್ತು ಕ್ರೀಡಾ ಇಲಾಖೆ, ನಿರ್ಮಿತಿ ಕೇಂದ್ರ, ಮಲ್ಪೆ ಅಭಿವೃದ್ಧಿ ಸಮಿತಿ, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಅಕಾಡೆಮಿ, ಕರಾವಳಿ ಪ್ರವಾಸೋದ್ಯಮಗಳ ಸಂಘಟನೆ ಸಹಯೋಗದಲ್ಲಿ ವಿವಿಧ ಪ್ರವಾಸಿ ಸ್ಥಳಗಳಲ್ಲಿ ಡಿ. 29ರಿಂದ 31ರ ವರೆಗೆ ಆಯೋಜಿಸಿದ “ಉಡುಪಿ ಪರ್ಬ’ ಮತ್ತು “ಉಡುಪಿ ಅಡ್ವೆಂಚರ್ ಫೆಸ್ಟಿವಲ್’ಗೆ ಸಕಲ ಸಿದ್ಧತೆಗಳು ನಡೆದಿವೆ.
ಡಿ. 29ರ ಸಂಜೆ 6ಕ್ಕೆ ಮಲ್ಪೆ ಬೀಚ್‌ನಲ್ಲಿ ಉಡುಪಿ ಪರ್ಬಕ್ಕೆ ಸಚಿವ ಪ್ರಮೋದ್ ಮಧ್ವರಾಜ್ ಚಾಲನೆ ನೀಡುವರು. ಅನಂತರ ನೃತ್ಯರೂಪಕ, ಶಿವಮಣಿ ಅವರಿಂದ ವಾದ್ಯಗೋಷ್ಠಿ, ಡಿ. 30ರ ಸಂಜೆ ಪ್ರಹ್ಲಾದ ಆಚಾರ್ಯರ ಶಾಡೋ ಪ್ಲೇ, ಆಳ್ವಾಸ್ ವಿದ್ಯಾರ್ಥಿಗಳಿಂದ ನೃತ್ಯ ವೈಭವ, ಡಿ. 31 ಸಂಜೆ 7ಕ್ಕೆ ಸಂಗೀತ ಸಂಜೆ ನಡೆಯಲಿದೆ.
125 ಕಿ.ಮೀ. ದೂರದ ಸೈಕಲ್ ರೇಸಿಂಗ್ ಸ್ಪರ್ಧೆ ಡಿ. 31ರ ಬೆಳಗ್ಗೆ 6.30ಕ್ಕೆ ಮಲ್ಪೆ ಕಿನಾರೆಯಿಂದ ಹೊರಟು ವಾಪಸು ಅಲ್ಲೇ ಕೊನೆಗೊಳ್ಳಲಿದೆ. ಸ್ಪರ್ಧೆಗೆ ಇದುವರೆಗೆ 73 ಮಂದಿ ಈಗಾಗಲೇ ಹೆಸರು ನೋಂದಾಯಿಸಿದ್ದಾರೆ.
ಮಲ್ಪೆ ಬೀಚ್‌ನಲ್ಲಿ ಮುಕ್ತ ಈಜುಗಾರಿಕೆ ಸ್ಪರ್ಧೆ ಡಿ. 30ರ ಬೆಳಗ್ಗೆ 6.30ಕ್ಕೆ ನಡೆಯಲಿದೆ. 14-15, 16-17, 18-19 ವರ್ಷದವರಿಗೆ ಮುಕ್ತ ಈಜುಗಾರಿಕೆ ಸ್ಪರ್ಧೆ ನಡೆಯಲಿದ್ದು ಇದಕ್ಕೆ ಇದುವರೆಗೆ 270 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. 5, 10, 20 ಕಿ.ಮೀ. ಈಜಿನ ಸ್ಪರ್ಧೆ ನಡೆಯಲಿದೆ. ಇದು ಉಡುಪಿಯಲ್ಲಿ ನಡೆಯುವ ಮೊದಲ ಮುಕ್ತ ನಾಶನಲ್ ಜೂನಿಯರ್ ಸ್ವಿಮ್ಮಿಂಗ್ ಸ್ಪರ್ಧೆಯಾಗಿದೆ.
ಅಕ್ವಾ ನ್ಪೋರ್ಟ್ಸ್ನಲ್ಲಿ ಜೆಟ್ ಸ್ಕೈ, ವಿಂಡ್ ಸರ್ಫಿಂಗ್, ಬನಾನ ರೈಡ್, ಕಯಾಕಿಂಗ್, ಕನೂಯಿಂಗ್ ಮತ್ತು ಬೀಚ್ ಟಗ್ ಆಫ್ ವಾರ್ ಹಾಗೂ ಟೆರಿಸ್ಟಿಯಾ; ಅಡ್ವೆಂಚರ್ ನ್ಪೋರ್ಟ್ಸ್ನಲ್ಲಿ ಬೋಲ್ಡಿರಿಂಗ್, ಝಿಪ್ ಲೈನ್, ಜುಮ್ಮರಿಂಗ್, ಬರ್ಮಾ ಬ್ರಿಡ್ಜ್, ಕಮಾಂಡೋ ಬ್ರಿಡ್ಜ್, ಸ್ಲೇಕ್ ಲೈನ್ ನಡೆಯಲಿವೆ.
ಕುದುರೆಮುಖ, ಹೆಬ್ರಿ, ಕೊಲ್ಲೂರುಗಳಲ್ಲಿ ಟ್ರೆಕ್ಕಿಂಗ್ ಮತ್ತು ಕ್ಯಾಂಪ್, ಕಾಪು ಬೀಚ್‌ನಲ್ಲಿ ಸ್ಕೂಬಾ ಡೈವಿಂಗ್ ಫೆಸ್ಟಿವಲ್ ನಡೆಯುತ್ತಿದೆ.
ಮಲ್ಪೆ ಬೀಚ್‌ನಲ್ಲಿ ಡಿ.29ರ ಬೆಳಗ್ಗಿನಿಂದ ಸಂಜೆವರೆಗೆ ಮರಳು ಶಿಲ್ಪ ರಚನೆ, ಡಿ.29ರಿಂದ 31ರವರೆಗೆ ಚಿತ್ರಕಲೆ ಮತ್ತು ಕಲಾ ಶಿಬಿರ, ಛಾಯಾ ಚಿತ್ರಸ್ಪರ್ಧೆ, ಡಿ.31ರಂದು ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಶ್ವಾನ ಪ್ರದರ್ಶನವಿದೆ.
ಡಿ. 28ರಿಂದ 30ರವರೆಗೆ ಒತ್ತಿನೆಣೆ ಪಡುವರಿ ಬೀಚ್‌ನಲ್ಲಿ ಒತ್ತಿನೆಣೆ ಪಡುವರಿ ಬೀಚ್ ಉತ್ಸವ, ಡಿ.28ರಿಂದ 31ರವರೆಗೆ ಕೋಟೇಶ್ವರದ ಕೋಡಿ ಕಿನಾರೆ ಬೀಚ್‌ನಲ್ಲಿ “ಊರ¾ನೆ ಹಬ್ಬ ಕೋಡಿ ಕಿನಾರೆ ಬೀಚ್ ಉತ್ಸವ’ ನಡೆಯಲಿದೆ.
ಡಿ. 29ರ ಸಂಜೆ 4ಕ್ಕೆ ಮಲ್ಪೆ ಬೀಚ್‌ನಲ್ಲಿ ಗೂಡು ದೀಪ ಸ್ಪರ್ಧೆ ನಡೆಯಲಿದೆ. ಡಿ.29ರಿಂದ 31ರವರೆಗೆ ಮಲ್ಪೆ ಬೀಚ್‌ನಲ್ಲಿ ಆಹಾರ ಮೇಳ ಆಯೋಜಿಸಲಾಗಿದೆ. ಡಿ.31ರ ರಾತ್ರಿ 12ಕ್ಕೆ ಮಲ್ಪೆ ಬೀಚ್‌ನಲ್ಲಿ ಸುಡುಮದ್ದು ಪ್ರದರ್ಶನ ಮತ್ತು ಹೊಸ ವರ್ಷದ ಸಂಭ್ರಮಾಚರಣೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.