![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Aug 28, 2024, 9:53 PM IST
ಉಡುಪಿ: ಅನಾಮಧೇಯ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ.
ಮಾರ್ಕ್ ಪ್ರೇಮ ಕುಮಾರ್ ಅವರು ಫೇಸ್‌ಬುಕ್‌ನಲ್ಲಿ ಬ್ರೌಸಿಂಗ್ ಮಾಡುತ್ತಿದ್ದಾಗ ಕೋಟಾಕ್ ಸೆಕ್ಯೂರಿಟಿ Promoting free trading tips ನ ಲಿಂಕ್ ಅನ್ನು ಕ್ಲಿಕ್ ಮಾಡಿದ ಅನಂತರ ಯಾವುದೋ ಅನಾಮಧೇಯ ವಾಟ್ಸಪ್ ಗ್ರೂಪ್‌ಗೆ ಸೇರ್ಪಡೆಯಾಗಿದ್ದಾರೆ.
ಈ ವೇಳೆ ಅದರಲ್ಲಿದ್ದ ವ್ಯಕ್ತಿಗಳು ಉತ್ತಮ ಸಂವಹನಕಾರರಾಗಿ ತಮ್ಮನ್ನು ಕೋಟಾಕ್ ಸೆಕ್ಯುರಿಟಿಸ್ ಪ್ರತಿನಿಧಿಗಳು ಎಂಬಂತೆ ಬಿಂಬಿಸಿಕೊಂಡಿದ್ದು ಅವರು ನೋಂದಾಯಿಸಿದ ಸೇಬಿ ನಂಬರ್ ಅನ್ನು ಮಾರ್ಕ್ ಪ್ರೇಮ ಕುಮಾರ್ ಅವರಿಗೆ ತೋರಿಸಿ https://app.nbhkobhtakbhe.com ಲಿಂಕ್ ಕಳುಹಿಸಿದ್ದಾರೆ.
ಅನಂತರ ಮಾರ್ಕ್ ಪ್ರೇಮ ಕುಮಾರ್ ಅವರು Kotakpro ಎಂಬ ಟ್ರೇಡಿಂಗ್ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿಕೊಂಡಿದ್ದು, ಆರೋಪಿಗಳು ಐಪಿಓ ಸ್ಟಾಕ್ ಮಾರ್ಕೆಟ್‌ನಲ್ಲಿ ಹಣವನ್ನು ಹೂಡಿಕೆ ಮಾಡಿದರೇ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಿ ಅವರ ಖಾತೆಯಿಂದ 3.55 ಲಕ್ಷ ರೂ.ಗಳನ್ನು ವರ್ಗಾಯಿಸಿಕೊಂಡು ಮೋಸ ಎಸಗಿದ್ದಾರೆ ಎನ್ನುವುದಾಗಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.