“ಒಂದು ಓಟು ಕೂಡ ಹಾಳು ಮಾಡೋದಿಲ್ಲ, ನಾವು ರೆಡಿ’​​​​​​​


Team Udayavani, May 6, 2018, 6:25 AM IST

0505udsb2.jpg

ಉಡುಪಿ: ಇಲ್ಲಿನ ರಾಜಕೀಯ ಆಡುಂಬೊಲ ಎಂಬಂಥ ಪ್ರದೇಶಗಳಲ್ಲಿ ಒಂದಾಗಿರುವ ಉಪ್ಪೂರಿನ ಮತದಾರರು ಮತದಾನದ ದಿನಕ್ಕಾಗಿ ಕಾಯುತ್ತಿದ್ದಾರೆ ಎಂಬುದು ಉಪ್ಪೂರು ತೆಂಕಬೆಟ್ಟಿನ ಹಿರಿಯ ವ್ಯಾಪಾರಿ ಕೃಷ್ಣ ನಾಯಕ್‌ ಅವರ ಮಾತುಗಳಿಂದಲೇ ವೇದ್ಯವಾಯಿತು. 

“ಇಲ್ಲಿಯವರು ಹಿಂದಿನಿಂದಲೂ ಹಾಗೆಯೇ. ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕುತ್ತಾರೆ. ಬೆಳಗ್ಗೆ 7 ಗಂಟೆಗೇ ರೆಡಿಯಾಗ್ತಾರೆ. ಕೂಲಿಗೆ ಹೋಗುವವರು ಕೂಡ ಓಟ್‌ ಹಾಕಿಯೇ ಹೋಗುತ್ತಾರೆ. ಪರವೂರಿನಲ್ಲಿರುವವರು ಮಾತ್ರ ಓಟು ಹಾಕದಿರಬಹುದಷ್ಟೆ’ ಎನ್ನುತ್ತಾರೆ ಅವರು. ಈ ಭಾಗದಲ್ಲಿ ಕೃಷಿಕರು ಇದ್ದಾರೆ. ಗೇರು ಬೀಜ ಫ್ಯಾಕ್ಟರಿಯೂ ಇದೆ. ನಗರಕ್ಕೆ ಕೆಲಸಕ್ಕೆ ಹೋಗುವ ಯುವಕರು ಕೂಡ ಅನೇಕರಿದ್ದಾರೆ. ಉಪ್ಪೂರು ಪರಿಸರ ರಾಜಕೀಯವಾಗಿ ಹೆಚ್ಚು ಜಾಗೃತವಾಗಿರುವುದು ಸ್ಪಷ್ಟವಾಗುತ್ತದೆ.

ಓಟು ಕೇಳಲು ಯಾರೂ ಬಂದಿಲ್ಲ
ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಲಕ್ಷ್ಮೀನಗರ ನಾರ್ನಾಡ್‌ನ‌ ಪದ್ಮಾ ಅವರಿಗೂ ಮತದಾನದ ಉತ್ಸಾಹವಿದೆ. “ನಾವು ಮನೆಯಲ್ಲಿ ನಾಲ್ಕು ಮಂದಿ ಇದ್ದೇವೆ. ಎಲ್ಲರೂ ಓಟು ಹಾಕುತ್ತೇವೆ. ಬೇಗ ಓಟು ಹಾಕಿ ಅನಂತರ ಕೆಲಸಕ್ಕೆ ಹೋಗುತ್ತೇನೆ. ನಮ್ಮ ಮನೆಗೆ ಇದುವರೆಗೆ ಓಟು ಕೇಳಲು ಯಾರೂ ಬಂದಿಲ್ಲ’ ಎನ್ನುತ್ತಾರೆ ಪದ್ಮಾ.

ಚುನಾವಣೆಗೆ ಸಿದ್ಧ
ನಮ್ಮೂರಿನಲ್ಲಿ ಅಂತಹ ಸಮಸ್ಯೆ ಇಲ್ಲ. ಈ ಬಾರಿ ಕುಡಿಯುವ ನೀರು ಕೂಡ ಪಂಚಾಯತ್‌ನಿಂದ ದೊರೆಯುತ್ತಿದೆ. ನಮ್ಮೂರಿನ ಜನ ಚುನಾವಣೆಗೆ ಸಿದ್ಧರಾಗಿದ್ದಾರೆ ಎನ್ನುತ್ತಾರೆ ಗುತ್ತಿಗೆದಾರರೊಂದಿಗೆ ಕೆಲಸ ಮಾಡುತ್ತಿರುವ ಹಾವಂಜೆಯ ಸುರೇಶ್‌ ಅವರು.

ಇವರದ್ದು ಸದ್ದಿಲ್ಲದ ಜಾಗೃತಿ
ಕೊಳಲಗಿರಿ ಪರಿಸರದಲ್ಲಿ 1994ರಿಂದಲೂ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ರೇಖಾ ಜಿ. ಮರಾಠೆಯವರು ಮತದಾರರನ್ನು ಜಾಗೃತಿಗೊಳಿಸುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ. ಸಮೀಕ್ಷೆಯಲ್ಲಿ ತೊಡಗಿದ್ದ ಉದಯವಾಣಿ ಪ್ರತಿನಿಧಿಗಳಿಗೆ ಎದುರಾದ ರೇಖಾ ಆಗ ತಾನೇ ಓರ್ವ ವಿಶಿಷ್ಟಚೇತನ, ಕಾರ್ತಿಬೈಲಿನ ಅನಿಲ್‌ ಡಿ’ಸೋಜಾ ಎಂಬವರ ಮನೆಗೆ ತೆರಳಿ ಮತ ಹಾಕುವಂತೆ ಕೋರಿ ವಾಪಸಾಗಿದ್ದರು. “ನಾನು ಅನಿಲ್‌ ಅವರನ್ನು ಮಾತನಾಡಿಸಿದೆ. ಅವರಿಗೆ ಮತಕೇಂದ್ರಕ್ಕೆ ಹೋಗಲು ಪಂಚಾಯತ್‌ ವ್ಯವಸ್ಥೆ ಕೂಡ ಕಲ್ಪಿಸುತ್ತದೆ ಎಂದು ತಿಳಿಸಿದೆ. ಅದಕ್ಕೆ ಖುಷಿಪಟ್ಟು ನನ್ನನ್ನು ಕರೆದುಕೊಂಡು ಹೋಗುವುದಿದ್ದರೆ ಹೋಗುತ್ತೇನೆ ಎಂದ. ನಾನು ಯಾರಿಗೂ ಇಂತಹದೇ ಪಕ್ಷಕ್ಕೆ ಮತ ಹಾಕಿ ಎಂದು ಹೇಳುವುದಿಲ್ಲ. ಆದರೆ ಮತದಾನ ಮಾಡಲೇಬೇಕು ಎಂದು ಜಾಗೃತಿ ಮೂಡಿಸುತ್ತಿದ್ದೇನೆ. ನನಗೆ ಎಲ್ಲ ಪಕ್ಷಗಳ ಒಡನಾಟವಿದೆ’ ಎಂದರು ರೇಖಾ.

ಯುವಕರು ಸಿದ್ಧ
ಮರಳು ಸಮಸ್ಯೆ ಇದೆ.ಇತರ ಕೆಲವು ಸಮಸ್ಯೆಗಳು ಕೂಡ ಇವೆ.ಯುವಕರಲ್ಲಿ ರಾಜಕೀಯದ ವಿಚಾರಗಳು ಹೆಚ್ಚು ಚರ್ಚೆಯಾಗುತ್ತಿದೆ. ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸಿದ್ದೇವೆ. ಕಳೆದ ಬಾರಿಗಿಂತ ಈ ಬಾರಿ ಪೈಪೋಟಿ ಇದೆ. 
– ಹರೀಶ್‌, ರಿಕ್ಷಾ ಚಾಲಕ ಕೆ.ಜಿ.ರೋಡ್‌ ರಿಕ್ಷಾ ನಿಲ್ದಾಣ

ಯುವಕರು ಸಿದ್ಧ
“ನೀರಿನ ಸಮಸ್ಯೆ ಇದೆ. ಆದರೆ ಅದು ಮಾಮೂಲು. ಅದನ್ನು ಅಷ್ಟು ಸುಲಭವಾಗಿ ಪರಿಹರಿಸಲಾಗದು. ಹಾಗಂತ ಯಾರು ಕೂಡ ಓಟು ಹಾಕದೆ ಇರುವುದಿಲ್ಲ. ಒಂದೇ ಒಂದು ಓಟು ಹಾಳು ಮಾಡುವುದಿಲ್ಲ’ 
 – ರಂಗನಾಥ್‌, ಅಮ್ಮುಂಜೆ ಸಾಲ್ಮರ

–  ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್‌; ತಪ್ಪಿದ ಅನಾಹುತ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

de

Malpe ಸೀವಾಕ್‌ ಸಮುದ್ರತೀರದಲ್ಲಿ ಮೃತದೇಹ ಪತ್ತೆ

sand

Bramavara: ಬೆಣ್ಣೆಕುದ್ರು; ಮರಳು ಅಕ್ರಮ ಸಾಗಾಟ

crime

Brahmavara: ಯಡ್ತಾಡಿ; ಬೈಕ್‌ ಅಪಘಾತ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

15

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್‌; ತಪ್ಪಿದ ಅನಾಹುತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.