ಉಡುಪಿ ಬನ್ನಂಜೆ ಬಾಬು ಅಮೀನ್ ಪ್ರಶಸ್ತಿ ಪ್ರದಾನ
Team Udayavani, Oct 15, 2019, 5:39 AM IST
ಉಡುಪಿ: ಯುವವಾಹಿನಿ ಉಡುಪಿ ಘಟಕ ನೀಡುವ ಬನ್ನಂಜೆ ಬಾಬು ಅಮೀನ್ ಜಾನಪದ ವಿದ್ವಾಂಸ ಪ್ರಶಸ್ತಿಯನ್ನು ಹಿರಿಯ ಲೇಖಕಿ ಯಶವಂತಿ ಎಸ್. ಸುವರ್ಣ ನಕ್ರೆ ಹಾಗೂ ಜಾನಪದ ಕಲಾವಿದ ಪ್ರಶಸ್ತಿಯನ್ನು ಚಿತ್ರಕಲಾವಿದ ಪಿ.ಎನ್. ಆಚಾರ್ಯ ಅವರಿಗೆ ರವಿವಾರ ಬಲಾಯಿಪಾದೆ ಗರಡಿಮನೆ ನಾಗಪ್ಪ ಪೂಜಾರಿ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು.
ಅಭಿನಂದನಾ ಭಾಷಣ ಮಾಡಿದ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ| ದುಗ್ಗಪ್ಪ ಕಜೆಕಾರು, ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಸಾಕಷ್ಟು ಹೋರಾಟಗಳು ನಡೆದಿವೆ. ಆದರೆ ಪರಿಣಾಮಕಾರಿಯಾದ ಒಗ್ಗಟ್ಟಿನ ಚಳುವಳಿ ಆಗಿಲ್ಲ. ಚಳುವಳಿಗೆ ಅಗತ್ಯವಿರುವ ಪುಸ್ತಕ ಹಾಗೂ ಬೇಕಾದ ಜನರ ಬಳಕೆ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜಕೀಯ ಪ್ರಭಾವ ಬಳಸಿ
ತುಳು ಭಾಷೆಯ ನಿರ್ಲಕ್ಷ್ಯ ಮಾಡಿದರೆ, ಮುಂದಿನ ಪೀಳಿಗೆಗೆ ಇಂಟರ್‌ನೆಟ್ ಮೂಲಕ ತುಳು ಭಾಷೆ, ಶಬ್ದಗಳನ್ನು ತೋರಿಸಬೇಕಾದ ಪರಿಸ್ಥಿತಿ ಎದುರಾಗಲಿದೆ. ತುಳು ಭಾಷಿಗರು ಒಂದಾಗಿ ರಾಜಕೀಯ ಪ್ರಭಾವ ಬಳಸಿ ಚಳುವಳಿ ಮಾಡಿದರೆ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಸಾಧ್ಯ ಎಂದರು.
ಪ್ರಶಸ್ತಿಗೆ ಪ್ರಯತ್ನ
ತುಳು ಅಕಾಡೆಮಿ ಅಧ್ಯಕ್ಷ ಸ್ಥಾನ, ಗೌರವ ಡಾಕ್ಟರೇಟ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಯಾವುದಾದರೂ ಒಂದನ್ನು ಬನ್ನಂಜೆ ಬಾಬು ಅಮೀನ್ ಅವರಿಗೆ ಕೊಡುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕು ಎಂದು ತಿಳಿಸಿದರು.
ಪ್ರಶಸ್ತಿ ಭಿನ್ನವಾಗಿದೆ
ಇಂದು ಮಾನದಂಡ ಇಲ್ಲದೆ ಕೊಡುವ ಹಲವು ಪ್ರಶಸ್ತಿಗಳಿವೆ. ಆದರೆ ಬನ್ನಂಜೆ ಬಾಬು ಅಮಿನ್ ಜಾನಪದ ಪ್ರಶಸ್ತಿ ಭಿನ್ನವಾಗಿದೆ. ಸಾಧನೆ ಮಾಡಿದ ಕಲಾವಿದರಿಗೆ, ವಿದ್ವಾಂಸರಿಗೆ ಈ ಪ್ರಶಸ್ತಿ ಲಭಿಸುತ್ತಿದೆ. ಇದು ರಾಜ್ಯಮಟ್ಟದ ಮನ್ನಣೆಯನ್ನು ಪಡೆದುಕೊಂಡಿದೆ. ಇವತ್ತು ಪ್ರಭಾವ, ಶಿಫಾರಸಿಗೆ ಪ್ರಶಸ್ತಿ ಪಡೆಯಲು ಸಾಧ್ಯವಿದೆ. ಜಾನಪದ ಎಂಬ ಬ್ಯಾಚ್ ಹಾಕಿಕೊಂಡು ತಿರುಗುವವರು ತುಂಬಾ ಮಂದಿ ಇದ್ದಾರೆ. ಆದರೆ ಅದರ ಸ್ಪಷ್ಟ ಜ್ಞಾನ, ನಿರೂಪಣೆ ಮಾಡುವವರು ಬೆರಳೆಣಿಗೆ ಮಂದಿ ಮಾತ್ರಯಿದ್ದು, ಅದರಲ್ಲಿ ಬಾಬು ಅಮೀನ್ ಪ್ರಮುಖರಾಗಿದ್ದಾರೆ ಎಂದರು.
ಉಡುಪಿ ತುಳುಕೂಟದ ಗೌರವಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಪ್ರಶಸ್ತಿ ಪ್ರದಾನ ಮಾಡಿದರು. ಉಡುಪಿ ಯುವವಾಹಿನಿ ಘಟಕದ ಅಧ್ಯಕ್ಷ ನಾರಾಯಣ ಬಿ.ಎಸ್. ಅಧ್ಯಕ್ಷತೆ ವಹಿಸಿದರು.
ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು, ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಬನ್ನಂಜೆ ಬಾಬು ಅಮೀನ್ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಮುದ್ದು ಮೂಡುಬೆಳ್ಳೆ, ಕಾರ್ಯದರ್ಶಿ ಮಹಾಬಲ ಅಮೀನ್, ಕೋಶಾಧಿಕಾರಿ ಭಾರತಿ ಭಾಸ್ಕರ್ ಸುವರ್ಣ, ಮಹಿಳಾ ಸಂಚಾಲಕಿ ಶಕುಂತಳಾ ಸುಕೇಶ್, ಉದಯ ಅಮೀನ್, ಪದಾಧಿಕಾರಿ ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ದಯಾನಂದ ಅವರು ನಿರೂಪಿಸಿದರು.
ರಾಜಕೀಯ ಪ್ರಭಾವ ಬಳಸಿ
ತುಳು ಭಾಷೆಯ ನಿರ್ಲಕ್ಷ್ಯ ಮಾಡಿದರೆ, ಮುಂದಿನ ಪೀಳಿಗೆಗೆ ಇಂಟರ್‌ನೆಟ್ ಮೂಲಕ ತುಳು ಭಾಷೆ, ಶಬ್ದಗಳನ್ನು ತೋರಿಸಬೇಕಾದ ಪರಿಸ್ಥಿತಿ ಎದುರಾಗಲಿದೆ. ತುಳು ಭಾಷಿಗರು ಒಂದಾಗಿ ರಾಜಕೀಯ ಪ್ರಭಾವ ಬಳಸಿ ಚಳುವಳಿ ಮಾಡಿದರೆ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಸಾಧ್ಯ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.