ಮಳೆಗಾಲ ಎದುರಿಸಲು ಸಜ್ಜಾಗಿ: ಜಿಲ್ಲಾಧಿಕಾರಿ ಕರೆ
Team Udayavani, May 7, 2017, 3:23 PM IST
ಉಡುಪಿ: ಜಿಲ್ಲೆಯಲ್ಲಿ ಜೂನ್ ತಿಂಗಳಿನಿಂದ ಆರಂಭವಾಗುವ ಮಳೆಗಾಲವನ್ನು ಎದುರಿಸಲು ಅಧಿಕಾರಿಗಳು ಪೂರ್ವ ಸನ್ನದ್ಧ
ರಾಗಬೇಕು. ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ನಿಯಂತ್ರಣ ಕೊಠಡಿ ಮತ್ತು ತುರ್ತು ಕರೆ ಸ್ವೀಕರಿಸಲು ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದರು.
ಅವರು ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್‌ನಲ್ಲಿ ಶನಿವಾರ ಮುಂಗಾರು ಮಳೆ ಸಂದರ್ಭ ಅಗತ್ಯ ಮುಂಜಾಗ್ರತಾ ಕ್ರಮ ಹಾಗೂ ರಕ್ಷಣಾ ಕ್ರಮ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ಸಾಲಿನಲ್ಲಿ ರಾಷ್ಟ್ರೀಯ ಹೆದ್ದಾರಿ ವಿಭಾಗದವರ ಕಾಮಗಾರಿಯಿಂದ ಕೃತಕ ನೆರೆ ಉಂಟಾಗಿದ್ದು, ಪ್ರಸಕ್ತ ಸಾಲಿನಲ್ಲಿ ಸಮಸ್ಯೆ ಪುನರಾವರ್ತನೆ ಆಗಬಾರದೆಂಬ ಎಚ್ಚರಿಕೆಯನ್ನು ರಾ.ಹೆ. ಅಧಿಕಾರಿಗಳಿಗೆ ನೀಡಿ, ಈ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ವರದಿ ನೀಡಲು ಸೂಚಿಸಿದರು. ಕಾಮಗಾರಿಗಳನ್ನು ವೈಜ್ಞಾನಿಕವಾಗಿ ನಿರ್ವಹಿಸಿ, ಮಾನ್ಸೂನ್ ಟಾಸ್ಕ್ ಫೋರ್ಸ್ ರಚಿಸಿ ಎಂದರು.
ಪಡುಬಿದ್ರಿ ವ್ಯಾಪ್ತಿ, ಕುಂದಾಪುರದಿಂದ ಶಿರೂರು ವರೆಗಿನ ರಸ್ತೆ ಕಾಮಗಾರಿ ಇನ್ನೂ ನಡೆಯುತ್ತಿದ್ದು, ಅಪಘಾತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಿ ಎಂದರು.
ಅಪಾಯಕಾರಿ ಮರಗಳ ತೆರವು
ಅರಣ್ಯ ಇಲಾಖೆಯವರು ಸತ್ತ ಹಾಗೂ ಅಪಾಯಕಾರಿ ಮರಗಳನ್ನು ಸಬೂಬು ನೀಡದೆ ತತ್‌ಕ್ಷಣವೇ ತೆರವುಗೊಳಿಸಬೇಕು. ನಿಮ್ಮಲ್ಲಿ ಈ ಸಂಬಂಧ ಇರುವ ಸೌಕರ್ಯಗಳ ಪಟ್ಟಿ ನೀಡಿ, ಸೂಕ್ತ ಸಲಕರಣೆಗಳಿಲ್ಲದಿದ್ದಲ್ಲಿ ಜಿಲ್ಲೆಯ ಪ್ರಾಕೃತಿಕ ವಿಕೋಪ ನಿಧಿಯನ್ನು ಬಳಸಿ ಸೌಕರ್ಯಗಳನ್ನು ಒದಗಿಸಿ ಕೊಡಲಾಗುವುದು. ಪೊಲೀಸ್ ಮತ್ತು ಅರಣ್ಯ ಇಲಾಖೆ ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು ಎಂದರು. ಎಸಿಎಫ್ ಅಚ್ಚಪ್ಪಅವರಿಗೆ ಇಲಾಖೆಯಲ್ಲಿರುವ ವ್ಯವಸ್ಥೆಗಳ ಬಗ್ಗೆ, ಅಗತ್ಯ ಸಲಕರಣೆಗಳ ಬೇಡಿಕೆ ಪಟ್ಟಿಯನ್ನು ತತ್‌ಕ್ಷಣವೇ ಸಲ್ಲಿಸಿ ಎಂದರು.
“ಇಲ್ಲ’ಗಳ ಪಟ್ಟಿ ಬೇಡ
ಅರಣ್ಯ ಇಲಾಖೆಯಂತೆ ಅಗ್ನಿ ಶಾಮಕ ದಳದವರಿಗೂ ಸೂಚನೆ ನೀಡಿದ ಜಿಲ್ಲಾಧಿಕಾರಿ ಯವರು, ಮುಳುಗು ತಜ್ಞರಿಲ್ಲದಿದ್ದಲ್ಲಿ, ಖಾಸಗಿಯವರೊಂದಿಗೆ ಸಂಪರ್ಕ ಸಾಧಿಸಿ ಅಗತ್ಯವಿರುವವರ ನೆರವು ಪಡೆಯಿರಿ. ವಿಕೋಪ ಸಂದರ್ಭ ದಲ್ಲಿ “ಇಲ್ಲ’ಗಳ ಪಟ್ಟಿ ಹೇಳದೆ ಅಗತ್ಯಗಳನ್ನು ತತ್‌ಕ್ಷಣವೇ ಗಮನಕ್ಕೆ ತನ್ನಿ ಎಂದು ಜಿಲ್ಲಾಧಿಕಾರಿ ನಿರ್ದೇಶಿಸಿದರು. ಎಲ್ಲ ಇಲಾಖೆಗಳು ಹಶೀಲ್ದಾರ್ ಮತ್ತು ಇಒ ಕಚೇರಿಗಳನ್ನೊಳಗೊಂಡಂತೆ ರಿಸರ್ವ್ ಮ್ಯಾಪಿಂಗ್ ಸಿದ್ಧಪಡಿಸಿ ಎಂದು ಪ್ರಿಯಾಂಕಾ ಹೇಳಿದರು.
ಈಗಾಗಲೇ ಬಿಸಿಲಿನ ನಡುವೆ ಮಳೆ ಆರಂಭವಾಗಿದ್ದು, ಆರೋಗ್ಯ ಇಲಾಖೆಯವರು ಸಾಂಕ್ರಾಮಿಕ ರೋಗ ಹರಡದಂತೆ ವ್ಯಾಪಕ ಕ್ರಮಕೈಗೊಳ್ಳಿ ಎಂದರು.
ಶಾಲಾ ವಾಹನ: ಎಚ್ಚರಿಕೆ
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ವಾಹನಗಳಲ್ಲಿ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಲು ಮಕ್ಕಳ ರಕ್ಷಣೆ ಸಮಿತಿ ಜತೆ ಆರ್‌ಟಿಒ ಮತ್ತು ಡಿಡಿಪಿಐ ಸಭೆ ನಡೆಸಿ ಮಳೆಗಾಲದಲ್ಲಿ ಯಾವುದೇ ದುರಂತಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ ಎಂದರು.
ಮೆಸ್ಕಾಂನವರು ಮಳೆಗಾಲಕ್ಕೆ ಸಜ್ಜಾದ ಬಗ್ಗೆ ಅನುಸರಣೆ ವರದಿ ನೀಡಬೇಕು. ಪಶುಸಂಗೋಪನೆ ಇಲಾಖೆಯವರು ಪ್ರಾಣಿಗಳ ಸತ್ತರೆ ಮರಣೋತ್ತರ ವರದಿ ತತ್‌ಕ್ಷಣವೇ ನೀಡಬೇಕು. ತಗ್ಗು ಪ್ರದೇಶಗಳಲ್ಲಿ, ಸೇತುವೆ ಬದಿಗಳಲ್ಲಿ, ನದಿ ದಂಡೆಗಳಲ್ಲಿ, ಕಿಂಡಿ ಅಣೆಕಟ್ಟುಗಳಿರುವಲ್ಲಿ, ಸಮುದ್ರ ತೀರದಲ್ಲಿ ಈಗಾಗಲೇ ಸಮಸ್ಯೆಗಳು, ಸವಾಲುಗಳನ್ನು ಎದುರಿಸುವುದನ್ನು ಗಮನದ
ಲ್ಲಿರಿಸಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು, ಸಣ್ಣ ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ ಕ್ರಮ ಕೈಗೊಳ್ಳಬೇಕು. ಗಣಿಗಾರಿಕೆ ಪ್ರದೇಶಗಳಲ್ಲಿ ಎಚ್ಚರಿಕೆ ಫಲಕ, ಈಜಾಟ ನಿಷೇಧ ಫಲಕಗಳಿರಬೇಕು. ಈಗಾಗಲೇ ಕೆಐಎಆರ್‌ಡಿಎಲ್ ಸಂಸ್ಥೆಗೆ ಬೇಲಿ ಹಾಕಲು ಸೂಚಿಸಲಾಗಿದ್ದು, ಬೇಲೂರು ಸುತ್ತ ಮುತ್ತಲ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಿ ಎಂದು ಗಣಿ ಇಲಾಖೆ ಮತ್ತು ಇಒ ಅವರು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ದುರಂತಗಳು ಸಂಭವಿಸಿದರೆ ತಹಶೀಲ್ದಾರ್‌ಗಳು ತತ್‌ಕ್ಷಣವೆ ನಮ್ಮ ಗಮನಕ್ಕೆ ತನ್ನಿ. ಪ್ರವಾಸೋದ್ಯಮ ಕಾಮಗಾರಿಗಳು ಸಮುದ್ರ ಕೊರೆತದಲ್ಲಿ ವಿಲೀನವಾಗದಂತೆ ಮುನ್ನೆಚ್ಚರಿಕೆ ವಹಿಸಿ ಯೋಜನೆಯನ್ನು ಜಾರಿಗೆ ತನ್ನಿ ಎಂದರು. ಮೇ 18ರಿಂದ 31ರ ವರೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ ಜಿಲ್ಲೆಯಲ್ಲಿ ಅಣಕು ಕಾರ್ಯಾಚರಣೆ ನಡೆಸಲಿದ್ದು, ಅಧಿಕಾರಿಗಳು ಸಜಾjಗಿ ಎಂದು ಇದೇ ವೇಳೆ ಹೇಳಿದರು. ಅಪರ ಜಿಲ್ಲಾಧಿಕಾರಿ ಅನುರಾಧಾ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.