Udupi; ಗೀತಾರ್ಥ ಚಿಂತನೆ 58-ಒಳ್ಳೆಯ ಕೆಲಸ, ಕೆಟ್ಟ ಕೆಲಸ: ಸಜ್ಜನ, ದುರ್ಜನ ಲಕ್ಷಣ
Team Udayavani, Oct 8, 2024, 1:14 AM IST
ದೂರವಿರುವ ಪಾಂಡವರ ಸೈನ್ಯವನ್ನು ಈ ಸೈನ್ಯವೆಂದು (ಇದಂ), ಹತ್ತಿರವಿದ್ದ ಕೌರವರ ಸೈನ್ಯವನ್ನು ಆ ಸೈನ್ಯವೆಂದು (ತತ್) ದುರ್ಯೋಧನ ಹೇಳುತ್ತಾನೆ. ನನ್ನ ಸೈನ್ಯ ಅಪರ್ಯಾಪ್ತವಾಗಿದೆ ಎಂದೂ, ನಮ್ಮ ಬಲ ದುರ್ಬಲವಾಗಿದೆ ಎಂದೂ ನಾಯಕರನ್ನುದ್ದೇಶಿಸಿ ಹೇಳುತ್ತಾನೆ. ನಾನೇ ನಾಯಕ ಎಂಬರ್ಥ ಇಲ್ಲಿದೆ. ದುಯೋಧನನ ಮನಃಸ್ಥಿತಿ ಹೇಗೆಂದರೆ “ಒಳ್ಳೆಯದೆಲ್ಲ ನನ್ನಿಂದ, ಕೆಟ್ಟದ್ದೆಲ್ಲ ನಿಮ್ಮಿಂದ’ ಎಂಬಂತೆ.
“ಒಳ್ಳೆಯದಾದರೆ ಗುರು, ದೇವರಿಂದ, ಕೆಟ್ಟದ್ದಾದರೆ ನಮ್ಮಿಂದ’ ಎನ್ನುವುದು ಸಜ್ಜನರ ಲಕ್ಷಣ. ದುಯೋಧನ ಸೇನಾನಾಯಕರಾದ ಭೀಷ್ಮಾಚಾರ್ಯರನ್ನು ರಕ್ಷಿಸಲು ಗುಂಪಿನವರಿಗೆ ಹೇಳುತ್ತಾನೆ. ಅಂದರೆ ಭೀಷ್ಮರ ಮೇಲೆ ಆತನಿಗೆ ಮನಸ್ಸಿರಲಿಲ್ಲ. ಹಿರಿಯರಾದ ಕಾರಣ ಬಿಡಲು ಆಗದೆ ಸೇನಾಪತಿಯಾಗಿ ಮಾಡಿದ್ದಾನೆ. ಆತ ಭೀಷ್ಮರಿಗಿಂತಲೂ ದ್ರೋಣರಿಗೆ ಹತ್ತಿರವಾಗಿದ್ದ. ಭೀಷ್ಮರು ಪಾಂಡವಪಕ್ಷಪಾತಿ ಎಂದು ದುರ್ಯೋಧನ ತಿಳಿದುಕೊಂಡಿದ್ದ. ವಯಸ್ಸಾಗಿದ್ದರೂ ಭೀಷ್ಮರು ಆ ಕಾಲದಲ್ಲಿ ನಂಬರ್ 1 ವೀರರು. ಅವರ ಮುಖ್ಯ ಉದ್ದೇಶ ಸಿಂಹಾಸನ, ವಂಶದ ರಕ್ಷಣೆ. ದುರ್ಯೋಧನ ಹೇಳಿದ್ದನ್ನು ಕೇಳಿಸಿಕೊಂಡ ಭೀಷ್ಮರು ಶಂಖನಾದವನ್ನು (ಸಿಂಹನಾದ) ಮೊಳಗಿಸಿದರು. ತತ್‌ಕ್ಷಣವೇ ಕೃಷ್ಣಾರ್ಜುನರು ಶಂಖವನ್ನು ಊದಿದರು. ಅಂದರೆ ಮೊದಲು ಯುದ್ಧವನ್ನು ಸಾರಿದವರು ಕೌರವರು ಎಂಬುದು ಶಂಖನಾದದಿಂದ ಸಾಬೀತಾಗುತ್ತದೆ. ಜಗಳದಲ್ಲಿ ಮೊದಲು ಆರಂಭಿಸಿದವನೇ ಆರೋಪಿ.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Surathkal-ಗಣೇಶಪುರ ರಸ್ತೆಯಲ್ಲಿ ಟ್ಯಾಂಕರ್ ರಾಜ್ಯಭಾರ!
Mangaluru: ಕರಾವಳಿ ಉತ್ಸವ; ಮತ್ಸ್ಯ ಲೋಕದೊಳಗೆ ನಾವು!
Kundapura: ಮೆಟ್ಟಿಲು ಹತ್ತುವಾಗಲೇ ಶುಚಿಯಾಗುವ ಶೌಚಾಲಯ!
ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್ ನಕಾರ
ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.