ಕೃಷ್ಣಾಪುರ ಪರ್ಯಾಯದ ಭತ್ತ ಮುಹೂರ್ತ
Team Udayavani, Dec 9, 2021, 5:15 AM IST
ಉಡುಪಿ: ಶ್ರೀಕೃಷ್ಣ ಮಠದಲ್ಲಿ ಜ. 18ರಂದು ನಡೆಯುವ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ಬುಧವಾರ ಭತ್ತದ ಮುಹೂರ್ತ ಜರಗಿತು.
ಕೃಷ್ಣಾಪುರ ಮಠದಲ್ಲಿ ಬೆಳಗ್ಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಒಂದು ಭತ್ತದ ಮುಡಿಯನ್ನು ಚಿನ್ನದ ಪಾಲಕಿಯಲ್ಲಿರಿಸಿ, ಉಳಿದ ಭತ್ತದ ಮುಡಿಗಳನ್ನು ಹೊತ್ತೂಯ್ದು ಮೆರವಣಿಗೆ ನಡೆಯಿತು. ಚಂದ್ರಮೌಳೀಶ್ವರ, ಅನಂತೇಶ್ವರ, ಕೃಷ್ಣಮುಖ್ಯಪ್ರಾಣ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಭತ್ತದ ಮುಡಿಗಳನ್ನು ಕೃಷ್ಣಮಠದ ಬಡಗುಮಾಳಿಗೆ ಯಲ್ಲಿರಿಸಿ ವೈದಿಕರು ಪೂಜೆ ಸಲ್ಲಿಸಿದರು. ನವಗ್ರಹ ದಾನಗಳನ್ನು ನೀಡಿದ ಬಳಿಕ ಮುಹೂರ್ತ ನಡೆಸಲಾಯಿತು. ಬಳಿಕ ಕಟ್ಟಿಗೆ ರಥಕ್ಕೆ ಮುಗುಳಿ (ಶಿಖರ) ಮುಹೂರ್ತ ನಡೆಸಲಾಯಿತು.
ತೊಂದರೆಯಾಗದು: ಶಾಸಕರ ವಿಶ್ವಾಸ
ಜಿಲ್ಲೆಯಲ್ಲಿ ಈಗಾಗಲೇ ಶೇ.95ರಷ್ಟು ಪ್ರಥಮ ಡೋಸ್ ವ್ಯಾಕ್ಸಿನೇಶನ್ ನಡೆದಿ ರುವ ಕಾರಣ ಪರ್ಯಾಯೋತ್ಸವಕ್ಕೆ ತೊಂದರೆಯಾಗದು. ತಯಾರಿಯನ್ನು ಸಹಜವಾಗಿ ಮಾಡಲಾಗುತ್ತದೆ. ಸರಕಾರ ಕೊನೇ ಕ್ಷಣದಲ್ಲಿ ಯಾವ ನಿರ್ದೇಶನ ನೀಡುತ್ತದೋ ಅದರಂತೆ ನಡೆಸಲಾಗುತ್ತದೆ ಎಂದು ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾದ ಕೆ. ರಘುಪತಿ ಭಟ್ ತಿಳಿಸಿದರು.
ಹೊರೆಕಾಣಿಕೆ
ಹೊರೆಕಾಣಿಕೆಯು ಜ. 11ರಿಂದ 16ರ ವರೆಗೆ ನಡೆಯಲಿದೆ. ಕಡಿಮೆ ದಿನ ಇರುವು ದರಿಂದ ದಿನದಲ್ಲಿ 3 ಕಡೆಗಳ ಹೊರೆಕಾಣಿಕೆ ನಡೆಯಲಿದೆ ಎಂದು ಪ್ರ.ಕಾರ್ಯದರ್ಶಿ ವಿಷ್ಣುಪ್ರಸಾದ ಪಾಡಿಗಾರ್ ತಿಳಿಸಿದರು.
ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭೆ ಮಾಜಿ ಉಪಾಧ್ಯಕ್ಷ ರೆನಾಲ್ಡ್ ಪ್ರವೀಣ್ ಕುಮಾರ್, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬೈಕಾಡಿ ಸುಪ್ರಸಾದ ಶೆಟ್ಟಿ, ಪ್ರೊ| ಶ್ರೀಶ ಆಚಾರ್ಯ, ಯು.ಕೆ. ರಾಘವೇಂದ್ರ ರಾವ್ ಮೊದಲಾದವರು ಭಾಗವಹಿಸಿದ್ದರು.ಧಾರ್ಮಿಕ ಕಾರ್ಯಕ್ರಮಗಳನ್ನು ವೇ|ಮೂ| ಅಂಬಲಪಾಡಿ ಶ್ರೀನಿವಾಸ ಉಪಾಧ್ಯಾಯ ನಿರ್ವಹಿಸಿದರು.
ಇದನ್ನೂ ಓದಿ:ರಾವತ್ ಒಬ್ಬ ಅತ್ಯುತ್ತಮ ಸೈನಿಕ,ನಿಜವಾದ ದೇಶಭಕ್ತ: ಪ್ರಧಾನಿ ಮೋದಿ
195 ಟನ್ ಕಟ್ಟಿಗೆ ರಥ
ಮಧ್ವಸರೋವರದ ದಂಡೆಯಲ್ಲಿ ನೂತನವಾಗಿ ನಿರ್ಮಿಸಿದ ಕಟ್ಟಿಗೆ ರಥಕ್ಕೆ 195 ಟನ್ ಕಟ್ಟಿಗೆಯನ್ನು ಬಳಸಲಾಗಿದೆ. ಮುಗುಳಿ ಸಹಿತ 55 ಅಡಿ ಎತ್ತರದ ರಥದ ಬುಡದ ವ್ಯಾಸ 20 ಅಡಿ, ಮಧ್ಯದ ವ್ಯಾಸ 30 ಅಡಿ. ಚಳಿ, ಮಳೆ, ಬಿಸಿಲನ್ನು ಸಹಿಸಿಕೊಳ್ಳುವ ಗೋಣಿನಾರಿನ ಉಂಡೆಯನ್ನು ಮಾಡಿ ಅದರ ಮೇಲೆ ಬಣ್ಣ ಕೊಡಲಾಗಿದೆ. ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ, ಕಟ್ಟಿಗೆ ಮುಹೂರ್ತದ ಬಳಿಕ ನಾಲ್ಕನೆಯದಾದ ಭತ್ತದ ಮುಹೂರ್ತ ನಡೆದ ದಿನವೇ ಕಟ್ಟಿಗೆ ರಥಕ್ಕೆ ಮುಗುಳಿ (ಶಿಖರ) ಇರಿಸಿ ಮುಹೂರ್ತ ಮಾಡಲಾಯಿತು. ಮಠದ ಮೇಸಿŒ ಪದ್ಮನಾಭ ಎಸ್. ಅವರು ಮುಹೂರ್ತ ಮಾಡಿದರು. ಕಟ್ಟಿಗೆ ರಥದ ಮುಹೂರ್ತವನ್ನು ಜು. 11ರಂದು ನಡೆಸಲಾಗಿತ್ತು. ಸುಮಾರು ಐದು ತಿಂಗಳಲ್ಲಿ ರಥವನ್ನು ನಿರ್ಮಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Private Bus fare: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ?
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ
Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ
Report: ಐಸಿಯು ಗಲೀಜು, ಟ್ಯಾಂಕ್‌ನಲ್ಲಿ ಪಾಚಿ: ಸರಕಾರಿ ಆಸ್ಪತ್ರೆಗಳ ದುಃಸ್ಥಿತಿ!
JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.