ಉಡುಪಿ ಸಹಜ ಸ್ಥಿತಿಗೆ; 7 ಪ್ರಕರಣ ದಾಖಲು,10 ಮಂದಿ ವಶಕ್ಕೆ
Team Udayavani, Sep 12, 2018, 9:47 AM IST
ಉಡುಪಿ: ಸೋಮವಾರದ ಭಾರತ ಬಂದ್ ಸಂದರ್ಭ ಉಡುಪಿಯಲ್ಲಿ ನಡೆದ ಕಾಂಗ್ರೆಸ್ – ಬಿಜೆಪಿ ನಡುವಿನ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿ 10 ಮಂದಿ ಪೊಲೀಸ್ ವಶದಲ್ಲಿದ್ದಾರೆ. ಪೊಲೀಸರು ಸ್ವಯಂ ಪ್ರೇರಿತರಾಗಿ 3 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಬಲವಂತದ ಬಂದ್‌ಗೆ ಸಂಬಂಧಿಸಿ 1, ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿ ಒಂದು ಹಾಗೂ ಪರಸ್ಪರ ಹಲ್ಲೆಗೆ ಸಂಬಂಧಿಸಿ 2 ಪ್ರಕರಣಗಳು ಉಡುಪಿ ಮತ್ತು ಮಣಿಪಾಲ ಠಾಣೆಗಳಲ್ಲಿ ದಾಖಲಾಗಿವೆ. ಬಿಜೆಪಿ ಮತ್ತು ಕಾಂಗ್ರೆಸ್‌ನ ಒಟ್ಟು 30ರಿಂದ 40 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.
ಗಾಯಾಳುಗಳಾಗಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಬಿಜೆಪಿಯ 6 ಮತ್ತು ಕಾಂಗ್ರೆಸ್‌ನ 4 ಮಂದಿ ಚಿಕಿತ್ಸೆ ಜತೆಗೆ ಪೊಲೀಸ್ ನಿಗಾದಲ್ಲಿದ್ದಾರೆ. ಆರೋಪಿಗಳೂ ಆಗಿರುವುದರಿಂದ ಇವರು ಪೊಲೀಸ್ ವಶದಲ್ಲಿರುತ್ತಾರೆ. ಘರ್ಷಣೆಗೆ ಸಂಬಂಧಿಸಿ ಎರಡೂ ಪಕ್ಷಗಳ ಕಾರ್ಯಕರ್ತರ ವಿರುದ್ಧವೂ ಒಂದೇ ರೀತಿಯ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೆಚ್ಚುವರಿ ಪೊಲೀಸ್ ನಿಯೋಜನೆ
ಮಂಗಳವಾರ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಆದರೆ ಉಡುಪಿಯಲ್ಲಿ 2 ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋ ಜಿಸಲಾಗಿದೆ. ಕುಂದಾ ಪುರಕ್ಕೆ ಒಂದು ಕೆಎಸ್‌ಆರ್‌ಪಿ ತುಕಡಿ ಕಳುಹಿಸಿ ಕೊಡಲಾಗಿದೆ. ಲಾಠಿಚಾರ್ಜ್ ಮತ್ತು ಘರ್ಷಣೆ ಕುರಿತಾಗಿ ಚಿಕ್ಕಮಗಳೂರು ಎಸ್‌ಪಿ ಅಣ್ಣಾಮಲೈ ಮಂಗಳವಾರ ಕೂಡ ಮಾಹಿತಿ ಪಡೆದುಕೊಂಡಿದ್ದಾರೆ.
ರಾಡ್‌ನಿಂದ ಹಲ್ಲೆ
“ಕಾಂಗ್ರೆಸ್ ಕಾರ್ಯಕರ್ತರು ನನ್ನ ಮೇಲೆ ರಾಡ್‌ನಿಂದ ಮಾರಣಾಂತಿಕ ವಾಗಿ ಹಲ್ಲೆ ನಡೆಸಿದ್ದಾರೆ. ಪಕ್ಷದ ಧ್ವಜ ವನ್ನು ಕಾಲಿನಿಂದ ತುಳಿದಿದ್ದಾರೆ’ ಎಂದು ಪ್ರಭಾಕರ ಪೂಜಾರಿ ಅವರು ಕಾಂಗ್ರೆಸ್‌ನ ಪ್ರಖ್ಯಾತ್ ಶೆಟ್ಟಿ, ರಮೇಶ್ ಕಾಂಚನ್, ಯತೀಶ್ ಕರ್ಕೇರ, ಸತೀಶ್ ಅಮೀನ್ ಪಡುಕೆರೆ, ಸುರೇಶ್ ಕುಂದರ್, ಜನಾರ್ದನ ಭಂಡಾರ್‌ಕರ್ ಸೇರಿದಂತೆ 25ಕ್ಕೂ ಅಧಿಕ ಮಂದಿಯ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಭಾಕರ ಪೂಜಾರಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಪ್ರತಿ ದೂರು
ಪ್ರಭಾಕರ ಪೂಜಾರಿ, ದಿನಕರ ಪೂಜಾರಿ, ಯೋಗೀಶ್ ಸಾಲ್ಯಾನ್, ರಾಕೇಶ್ ಜೋಗಿ, ಶರತ್ ಬೈಲಕೆರೆ, ದಿನೇಶ್ ಅಮೀನ್, ಗಿರೀಶ್ ಅಂಚನ್ ಹಾಗೂ ಇತರರು ಕಲ್ಲಿನಿಂದ ಹಲ್ಲೆ ನಡೆಸಿರುವುದಾಗಿ ಕಾಂಗ್ರೆಸ್‌ನ ಗೋಪಾಲ ಪೂಜಾರಿ ದೂರು ನೀಡಿದ್ದಾರೆ.
ಬಲವಂತದ ಬಂದ್ ವಿರುದ್ಧ ಕೇಸ್
ಮಣಿಪಾಲ ಟೈಗರ್ ಸರ್ಕಲ್ ಬಳಿ ಆಟೋರಿಕ್ಷಾ ನಿಲ್ದಾಣ ಬಂದ್ ಮಾಡಬೇಕೆಂದು ಆಗ್ರಹಿಸಿ ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗವುಂಟು ಮಾಡಿರುವ ಪ್ರಕರಣದಲ್ಲಿ ಕಾಂಗ್ರೆಸ್‌ನ ಪ್ರಖ್ಯಾತ್ ಶೆಟ್ಟಿ, ಪ್ರಶಾಂತ್ ಪೂಜಾರಿ, ಯತೀಶ್ ಕರ್ಕೇರಾ, ರಮೇಶ್ ಕಾಂಚನ್ ಹಾಗೂ ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲಾಠಿಚಾರ್ಜ್ ಅನಿವಾರ್ಯವಾಗಿತ್ತು: ಎಸ್‌ಪಿ
“ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಮನವಿಗೆ ಸ್ಪಂದಿಸದೇ ಇದ್ದಾಗ ಲಾಠಿ ಚಾರ್ಜ್ ಮಾಡುವುದು ಅನಿವಾರ್ಯವಾಯಿತು.ಇಲ್ಲವಾದರೆ ಪರಿಸ್ಥಿತಿ ಕೈ ಮೀರಿ ಹೋಗುತ್ತಿತ್ತು. ಬಳಿಕ ಪರಿಸ್ಥಿತಿ ಪೂರ್ಣ ಹತೋಟಿಗೆ ಬಂದಿತ್ತು. ಕೆಲವರ ವಿರುದ್ಧ ನಾವಾಗಿಯೇ ಪ್ರಕರಣ ದಾಖಲಿಸಿಕೊಂಡಿದ್ದೇವೆ. ವೀಡಿಯೋ ಮತ್ತಿತರ ಮಾಹಿತಿಗಳ ಆಧಾರದಲ್ಲಿ ಮತ್ತಷ್ಟು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ಕೊಳ್ಳಲಾಗುವುದು’ ಎಂದು ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.