ಉಡುಪಿ ಚಲೋ ಹಿಂದಿದ್ದ ರಾಜಕಾರಣ…


Team Udayavani, Apr 20, 2017, 3:40 PM IST

20-REPORT-8.jpg

ಉಡುಪಿ: ಕೆಲವು ತಿಂಗಳ ಹಿಂದೆ ನಡೆದ ಉಡುಪಿ ಚಲೋ ಕಾರ್ಯಕ್ರಮದ ಹಿಂದಿನ ಹುನ್ನಾರ ದೊಡ್ಡದು. ಹಿರಿಯ ಐಎಎಸ್‌ ಅಧಿಕಾರಿ, ದಲಿತ ಸಮುದಾಯಕ್ಕೆ ಸೇರಿದ ರತ್ನಪ್ರಭಾ ಅವರು ಸೇವಾ ಜ್ಯೇಷ್ಠತೆಯಲ್ಲಿ ಮುಖ್ಯಕಾರ್ಯದರ್ಶಿ ಹುದ್ದೆ ಅಲಂಕರಿಸಬೇಕಿತ್ತು. ಅದನ್ನು ಸರಕಾರ ಕೊಟ್ಟಿರಲಿಲ್ಲ. ಇದು ದಲಿತರಿಗೆ ಗೊತ್ತಾಗುವ ವೇಳೆ “ಬುದ್ಧಿವಂತ ಸಲಹೆಗಾರರು’ ಉಡುಪಿ ಶ್ರೀಕೃಷ್ಣ ಮಠದ ವಿರುದ್ಧ ದಲಿತರನ್ನು ಎತ್ತಿಕಟ್ಟಿದರು. ರತ್ನಪ್ರಭಾ ಅವರಿಗೆ ಹುದ್ದೆ ತಪ್ಪಿ ಹೋದ ವಿಷಯ ಬಿದ್ದು ಹೋಯಿತು. ಇದು ರಾಜಕಾರಣ…

ಇದು ಚಿತ್ರದುರ್ಗದ ಶ್ರೀ ಬಸವ ಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರ ಹೇಳಿಕೆ. ಶ್ರೀಕೃಷ್ಣ ಮಠದಲ್ಲಿ ಬುಧವಾರ ವಸಂತ ಸಂತ ಸಂದೇಶ ಮಾಲಿಕೆಯಲ್ಲಿ ಸಂದೇಶ ನೀಡಿದ ಅವರು ಈ ವಿಷಯವನ್ನು ನಾನು ಚಿತ್ರದುರ್ಗದಲ್ಲಿ ಹೇಳಿದರೂ ಉಡುಪಿ ಕಡೆಯ ಮಾಧ್ಯಮಗಳಲ್ಲಿ ಪ್ರಕಟವಾಗಲಿಲ್ಲ ಎಂದರು. ಬಸವಣ್ಣನವರು ಎಂಟನೇ ಶತಮಾನದಲ್ಲಿ ದೇವರನ್ನು ವಿರೋಧಿಸಲಿಲ್ಲ. ದೇವರು ಮತ್ತು ಭಕ್ತರ ನಡುವಿನ ಅಂತರವನ್ನು ವಿರೋಧಿಸಿದಾಗ, ಸಮಾನತೆ ಕಾಪಾಡಲು ಯತ್ನಿಸಿದಾಗ ವಿರೋಧ ವ್ಯಕ್ತವಾಯಿತು. ಅನುಭವ ಮಂಟಪದಲ್ಲಿ ಎಲ್ಲರನ್ನು ಸೇರಿಸಿದರು. ದಲಿತರಾದ ಮಾದಾರ ಚೆನ್ನಯ್ಯನವರೂ ಶ್ರೇಷ್ಠ ಸಂಸ್ಕಾರವನ್ನು ಪಡೆದು ಉನ್ನತ ಮಟ್ಟಕ್ಕೇರಿದರು. ಬಸವಣ್ಣ- ಮಾದಾರ ಚೆನ್ನಯ್ಯನವರು ಹುಟ್ಟು ಹಾಕಿದ ಚಳವಳಿ ಮತ್ತೆ ಬರಲಿಲ್ಲ. ಮತ್ತೆ ಅಂತರ ಸೃಷ್ಟಿಯಾಯಿತು. 1970ರಲ್ಲಿ ನಾನು ಹುಟ್ಟುವುದಕ್ಕೆ ಮುನ್ನವೇ ಪೇಜಾವರ ಶ್ರೀಗಳು ದಲಿತರ ಕಾಲನಿಗಳಲ್ಲಿ ಪಾದಯಾತ್ರೆ ಮಾಡಿದರು. ತಮ್ಮ ವಿಚಾರಗಳನ್ನು ಉಳಿಸಿಕೊಂಡು ಸಮಾಜದಲ್ಲಿ ಸಾಮರಸ್ಯ ಕಾಪಾಡಲು ಯತ್ನಿಸಬೇಕಾದರೆ ಗಟ್ಟಿತನಬೇಕು ಎಂದರು.

ಮೈಸೂರಿನ ಪಾದಯಾತ್ರೆಯಲ್ಲಿ ಪೇಜಾವರ ಶ್ರೀಗಳನ್ನು ಪತ್ರಕರ್ತರು ಪ್ರಶ್ನಿಸಿದಾಗ “ಹಣ್ಣು ಬಿಡುವ ಮರಗಳಿಗೇ ಕಲ್ಲು ಹೊಡೆಯುವುದು ಹೆಚ್ಚು ಎಂದು ಮಾದಾರ ಸ್ವಾಮಿಗಳೇ ಹೇಳಿದ್ದಾರಲ್ಲ?’ ಎಂದಿದ್ದರು. ನನಗೆ ಜಾತಿ ನಿರ್ಮೂಲನೆ ಮಾಡುತ್ತೇನೆಂಬ ಅಹಮಿಕೆ ಇಲ್ಲ. ಪ್ರತಿಯೊಂದು ಜಾತಿಯನ್ನು ತೆಗೆದು ಒಂದೇ ಜಾತಿ ಮಾಡಿದರೆ ವ್ಯವಸ್ಥೆ ಮುರಿದು ಹೋಗುತ್ತದೆ. ನಮ್ಮಲ್ಲಿ ಸೋದರರು ಎಂಬ ಚಿಂತನೆ ಮೂಡಬೇಕು ಎಂದರು.

ಯಾರು ಅಲ್ಪಸಂಖ್ಯಾಕರು?
ಈಗ ಅಲ್ಪಸಂಖ್ಯಾಕರೆಂದು ಕರೆಸಿಕೊಳ್ಳುವವರು ದೇಶದ ಯಾವುದೇ ಭಾಗದಲ್ಲಿಯಾದರೂ ಒಂದೇ ಆಗಿ
ಕಾಣಿಸಿಕೊಳ್ಳುತ್ತಾರೆ. ಆದರೆ ಹಿಂದೂ ಸಮಾಜದಲ್ಲಿ ಬೇರೆ ಬೇರೆ ಜಾತಿ ಯವರು ಬೇರೆ ಬೇರೆ ರಾಜ್ಯಗಳಲ್ಲಿ ಭಿನ್ನ ಭಿನ್ನವಾಗಿರುತ್ತಾರೆ. ಹಾಗಿದ್ದರೆ ಅಲ್ಪಸಂಖ್ಯಾಕರೆಂದರೆ ಯಾರು ಎಂದರು.
ಕೋಮುಸಾಮರಸ್ಯ- ಜಾತಿ ಸಾಮರಸ್ಯ ಪ್ರಗತಿಪರರು ಕೋಮು ಸಾಮ ರಸ್ಯದ ಹೆಸರಿನಲ್ಲಿ ಹಿಂದೂ ಧರ್ಮದವರಲ್ಲಿ ದ್ವೇಷದ ಬೀಜ ಬಿತ್ತುತ್ತಾರೆ. ನಾವು ಜಾತಿ ಸಾಮರಸ್ಯಕ್ಕೆ ಶ್ರಮಿಸುತ್ತ ಇದ್ದೇವೆ. ಒಂದೆಡೆ ಸಂಪ್ರದಾಯವಾದಿ ಗಳು ನಮ್ಮ ನಡೆಯನ್ನು ಟೀಕಿಸುತ್ತಾರೆ, ಇನ್ನೊಂದೆಡೆ ಪ್ರಗತಿಪರರು ರಾಜಕೀಯ ಎನ್ನುತ್ತಾರೆ. ನಾವು ಯಾವುದನ್ನೂ ಕಿವಿಗೆ ಹಾಕಿಕೊಳ್ಳದೆ ಜಾತಿಜಾತಿಗಳ ನಡುವೆ ಸಾಮರಸ್ಯ, ಸಮಾನತೆ ಮೂಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಶ್ರೀ ಪೇಜಾ ವರ ಶ್ರೀಗಳು ನುಡಿದರು. ಕಿರಿಯ ಶ್ರೀಗಳು ಆಶೀರ್ವಚನ ನೀಡಿದರು. ವಾಸುದೇವ ಭಟ್‌ ಕಾರ್ಯಕ್ರಮ ನಿರ್ವಹಿಸಿದರು.

ಇದ್ದಾಗ  x ಇಲ್ಲದಾಗ
ಅನೇಕ ಕ್ರಾಂತಿಪುರುಷರು, ದಾರ್ಶನಿಕರು ಕಾಲಕಾಲಕ್ಕೆ ಆಗಿ ಹೋಗಿದ್ದಾರೆ. ಇವರನ್ನು ಕಾಲವಾದ ಬಳಿಕ ದೇವರು, ಕ್ರಾಂತಿಪುರುಷರು, ದಾರ್ಶನಿಕರ ಸ್ಥಾನದಲ್ಲಿರಿಸಿ ಪೂಜಿಸುತ್ತೇವೆ. ಇರುವಾಗ ಮಾತ್ರ ವಿರೋಧಿಸುತ್ತೇವೆ, ಕನಿಷ್ಠ ಗೌರವ ಕೊಡುವುದೂ ಇಲ್ಲ. ಇದಕ್ಕೆ ಸ್ಪಷ್ಟ ನಿದರ್ಶನ ಪೇಜಾವರ ಶ್ರೀಗಳು. ಇವರಿಗೆ ಬಂದ ಟೀಕೆಗಳನ್ನು ನಾನು ನೋಡಿದ್ದೇನೆ. 
ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ

ಟಾಪ್ ನ್ಯೂಸ್

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟುUdupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi-DC

Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ

Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Suspend: ನಕಲಿ ದಾಖಲೆ ಕೊಟ್ಟು ಹುದ್ದೆ ಪಡೆದ ಪಿಎಸ್‌ಐ ಸಸ್ಪೆಂಡ್‌

Suspend: ನಕಲಿ ದಾಖಲೆ ಕೊಟ್ಟು ಹುದ್ದೆ ಪಡೆದ ಪಿಎಸ್‌ಐ ಸಸ್ಪೆಂಡ್‌

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.