ಹಾಜಿ ಅಬ್ದುಲ್ಲಾ ಪೀಠಾರೋಹಣಕ್ಕೆ ಚುನಾವಣೆ!


Team Udayavani, Aug 30, 2018, 6:00 AM IST

haji-abdullah-saheb.jpg

ಉಡುಪಿ: ಉಡುಪಿ ನಗರಸಭೆಯಲ್ಲಿ ಐತಿಹಾಸಿಕ ಮಹತ್ವ ಇರುವ ಕುರ್ಚಿ ಒಂದಿದೆ. ಈ ಕುರ್ಚಿಯಲ್ಲಿ ಆಸೀನರಾಗುವವರ ಆಯ್ಕೆಗೆ ಈಗ ನಗರಸಭಾ ಚುನಾವಣೆ ನಡೆಯುತ್ತಿದೆ.
 
ಇದಕ್ಕೆ 80 ವರ್ಷಕ್ಕೂ ಹೆಚ್ಚು ವರ್ಷವಾಗಿದೆ. ಆದರೂ ನಶಿಸದಂತೆ ಕಾಪಾಡಿಕೊಂಡು ಬರಲಾಗುತ್ತಿದೆ. ಉಡುಪಿಯ ಇತಿಹಾಸದಲ್ಲಿ ಅಚ್ಚಳಿಯದ ಹೆಸರು ಹೊಂದಿದ ಹಾಜಿ ಅಬ್ದುಲ್ಲಾ ಸಾಹೇಬ್‌ ಅವರು ಕುಳಿತುಕೊಂಡ ಕುರ್ಚಿ ಇದು. 

1935ರವರೆಗೆ ಉಡುಪಿಯಲ್ಲಿ ತಾಲೂಕು ಬೋರ್ಡ್‌ ಆಡಳಿತವಿತ್ತು. ಆಗ ಉಡುಪಿ ನಗರ ಮತ್ತು ಗ್ರಾಮಾಂತರ ಎರಡನ್ನೂ ತಾಲೂಕು ಬೋರ್ಡ್‌ ಆಡಳಿತ ನಡೆಸುತ್ತಿತ್ತು. ಆಗ ತಾಲೂಕು ಬೋರ್ಡ್‌ ಅಧ್ಯಕ್ಷರಾಗಿದ್ದವರು ಹಾಜಿ ಅಬ್ದುಲ್ಲಾ ಸಾಹೇಬರು.  

1-11-1935ರಂದು ಏಳು ಗ್ರಾಮಗಳನ್ನು ಹೊಂದಿದ, 3.75 ಚದರ ಮೈಲು ವಿಸ್ತೀರ್ಣದ ನಗರಸಭೆಯನ್ನು ಅಂದಿನ ಮದ್ರಾಸ್‌ ಸರಕಾರ ಘೋಷಿಸಿತು. ಆಗಿನ ಜನಸಂಖ್ಯೆ 17,251. ಆಗ ಸರಕಾರ 20,000 ರೂ. ಮೂಲನಿಧಿ  ನೀಡಿ ಕಮಿಷನರ್‌ ಶ್ರೇಣಿ ಅಧಿಕಾರಿ ಎಚ್‌.ಎಚ್‌.ಶೆಮ್ನಾಡ್‌ ಅವರನ್ನು ವಿಶೇಷಾಧಿ ಕಾರಿಯಾಗಿ ನೇಮಿಸಿತು. 31-08-1936ರಲ್ಲಿ ಪ್ರಪ್ರಥಮ ಚುನಾಯಿತ ಅಧ್ಯಕ್ಷರಾಗಿ ಆಯ್ಕೆಯಾದವರು ಆಗಿನ ಸುಪ್ರಸಿದ್ಧ ನ್ಯಾಯವಾದಿ ಆರೂರು ಲಕ್ಷ್ಮೀನಾರಾಯಣ ರಾವ್‌. ಆಗ 12 ವಾರ್ಡುಗಳಿತ್ತು. ಆಗ ಮೂರು ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತಿತ್ತು. 

1965ರಲ್ಲಿ ಇದು ಪುರಸಭೆಯಾಯಿತು. 20-10-1995ರಲ್ಲಿ ಮಲ್ಪೆ, ಪುತ್ತೂರು, ಶಿವಳ್ಳಿ, ಹೆರ್ಗ, 76 ಬಡಗಬೆಟ್ಟು ಗ್ರಾಮಗಳನ್ನು ಒಳಗೊಂಡು 35 ವಾರ್ಡುಗಳ  ನಗರಸಭೆಯಾಗಿ ಪರಿವರ್ತನೆಗೊಂಡಿತು. ಇದರಿಂದ ವಿಸ್ತೀರ್ಣವು 9.6 ಚ.ಕಿ.ಮೀ.ನಿಂದ 68.23 ಚ.ಕಿ.ಮೀ.ಗೆ ವಿಸ್ತರಣೆಯಾಯಿತು. 2001ರ ಜನಗಣತಿಯಂತೆ ಜನಸಂಖ್ಯೆ 1,13,039, 2011ರ ಜನಗಣತಿಯಂತೆ ಜನಸಂಖ್ಯೆ 1,25,306. ಈಗಿನ ಮತದಾರರ ಸಂಖ್ಯೆ 97,561. 
 
ಅಬ್ದುಲ್ಲಾ ಸಾಹೇಬರು ಕುಳಿತುಕೊಂಡ ಕುರ್ಚಿಗೆ ಎಷ್ಟು ಮಹತ್ವವಿದೆ ಎಂದರೆ…! 1935ರಿಂದಲೂ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾದವರು ಪ್ರತಿ ತಿಂಗಳು ನಡೆಯುವ ನಗರಸಭಾಧಿವೇಶನದ ಅಧ್ಯಕ್ಷತೆಯನ್ನು ವಹಿಸುವಾಗ ಇದೇ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ. ಇಷ್ಟು ಹಳೆಯ ಕುರ್ಚಿ ಸಹಜವಾಗಿ ಹಾಳಾಗುತ್ತದೆ. ಆದರೆ ಕಾಲಕಾಲಕ್ಕೆ ಇದನ್ನು ರಿಪೇರಿ ಮಾಡಿ ಇಡಲಾಗಿದೆ. ನಗರಸಭಾಧಿವೇಶನ ವಹಿಸುವಾಗ ಮಾತ್ರ ಹೊರಗೆ ತರುವ ಈ ಕುರ್ಚಿಯನ್ನು ಮತ್ತೆ ಜೋಪಾನವಾಗಿ ಇಡುತ್ತಾರೆ. ಒಂದು ರಾಜಕೀಯ ಅಧಿಕಾರದ ಸ್ಥಾನಕ್ಕೂ ಉಡುಪಿ ಈ ತೆರನಾದ ಐತಿಹಾಸಿಕ, ಭಾವನಾತ್ಮಕ ಸಂಸರ್ಗವನ್ನು ಕಲ್ಪಿಸಿದೆ. ಈಗಿನ ನಗರಸಭಾಧ್ಯಕ್ಷರು 20ನೆಯವರು. ನಗರಸಭಾ ಚುನಾವಣೆ ಆ. 31ರಂದು ನಡೆಯಲಿದೆ. ಬಳಿಕ 35 ನಗರಸಭಾ ಸದಸ್ಯರ ಪೈಕಿ ಅಬ್ದುಲ್ಲಾರ ಕುರ್ಚಿಯನ್ನು ಏರುವ 21ನೆಯ ಅಧ್ಯಕ್ಷರು ಯಾರು ಎನ್ನುವುದನ್ನು ಕಾದು ನೋಡಬೇಕು. 

ಟಾಪ್ ನ್ಯೂಸ್

1-NASA

NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!

BUS driver

RTO; ಫಿಟ್‌ನೆಸ್‌ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ

1-kkk

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ

1-stamp

Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್‌ ಪಾವತಿ ಪದ್ಧತಿ ಜಾರಿ

1-manmohan

Belagavi; ಕಾಂಗ್ರೆಸ್‌ ಅಧಿವೇಶನ ಶತಮಾನೋತ್ಸವ: ಮಾಜಿ ಪ್ರಧಾನಿ ನಿಧನದಿಂದ ಆಘಾತ

ct rav

BJP ದೂರು ಬೆನ್ನಲ್ಲೇ ಗೆಹ್ಲೋಟ್‌ ಅಖಾಡಕ್ಕೆ; ಸಿ.ಟಿ.ರವಿಗೆ ರಾಜ್ಯಪಾಲ ಬುಲಾವ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

accident

Udupi: ಬೈಕ್‌ ಢಿಕ್ಕಿ; ವ್ಯಕ್ತಿಗೆ ಗಾಯ; ಪ್ರಕರಣ ದಾಖಲು

2

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ

complaint

Udupi: ಕಾರ್ಮಿಕನ ಬೈಕ್‌ ಕಳ್ಳತನ; ಪ್ರಕರಣ ದಾಖಲು

sand

Karkala: ಪರವಾನಿಗೆ ಇಲ್ಲದೆ ಮರಳು ಲೂಟಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-NASA

NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!

BUS driver

RTO; ಫಿಟ್‌ನೆಸ್‌ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ

High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್‌

High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್‌

1-havya

Havyaka Sammelana; ಹೆಚ್ಚು ಮಕ್ಕಳನ್ನು ಹೆರಿ, ಮಠ ಸಲಹುತ್ತದೆ: ಸ್ವಾಮೀಜಿ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.