ನೀರಿಲ್ಲದ ಕಾರಣ ಮನೆಗೆ ನೆಂಟರು ಬರಲೂ ಹಿಂದೇಟು!

ಅಜ್ಜರಕಾಡಿನಲ್ಲೂ ನೀರಿನ ಸಮಸ್ಯೆಯಿಂದ ಜನರು ಕಂಗಾಲು ; ನೀರು ಬರುವುದಕ್ಕೆ ಹೊತ್ತುಗೊತ್ತು ಇಲ್ಲ

Team Udayavani, May 2, 2019, 6:00 AM IST

2604GK2

ಎಲ್ಲದರಲ್ಲೂ ನೀರು ಶೇಖರಣೆ.

ನಗರಸಭೆಯ ಪ್ರಮುಖ ಪ್ರದೇಶ ಅಜ್ಜರಕಾಡಿನಲ್ಲೂ ನೀರಿನ ಸಮಸ್ಯೆ ಬಾಧಿಸಿದೆ. ಪ್ರಮುಖ ಬಾವಿಗಳು ಬತ್ತುವ ಹಂತದಲ್ಲಿದೆ. ನೀರಿನ ಶೇಖರಣೆ ಸಮಸ್ಯೆ ಇಲ್ಲಿ ಹೆಚ್ಚಾಗಿದ್ದು, ಇದರಿಂದ ಜನರು ಹೆಚ್ಚಿನ ಬವಣೆ ಪಡುವಂತಾಗಿದೆ.

ಉಡುಪಿ: ಸರಕಾರಿ ಕಚೇರಿಗಳು, ಜಿಲ್ಲಾಸ್ಪತ್ರೆ, ಕ್ರೀಡಾಂಗಣ, ಪಾರ್ಕ್‌ ಇರುವ ಅಜ್ಜರಕಾಡು ಪ್ರದೇಶದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಸುಮಾರು 2,959 ಜನಸಂಖ್ಯೆ ಇರುವ ಈ ವಾರ್ಡ್‌ ಜನರು ಕೂಡ 3 ದಿನಕ್ಕೊಮ್ಮೆ ಬರುವ ನೀರನ್ನೇ ಆಶ್ರಯಿಸಿದ್ದಾರೆ.

ಅಜ್ಜರಕಾಡು ಮಸೀದಿ ಸಮೀಪವಿರುವ 6-7 ಮನೆಗಳಿಗೆ ಬಾವಿ ನೀರು ಸಂಪರ್ಕವಿದೆ. ಬಾವಿಯಲ್ಲಿ ಈವರೆಗೆ ತಳಮಟ್ಟದಲ್ಲಿ ನೀರಿದೆ. ಯಾವಾಗ ಮುಗಿಯುತ್ತದೋ ಗೊತ್ತಿಲ್ಲ. ಎನ್ನುತ್ತಾರೆ ಇಲ್ಲಿನ ನಿವಾಸಿ ಇಕ್ಬಾಲ್‌. ಚುನಾವಣೆ ಸಮಯದಲ್ಲಿ ನೀರು ಕೊಡುತ್ತಿದ್ದರು, ಈಗ ಏಕಾಏಕಿ ನಿಲ್ಲಿಸಲಾಗಿದೆ ಎಂದು ಅಳಲು ತೋಡಿಕೊಂಡರು ಬಶೀರ್‌ ಅಹಮ್ಮದ್‌. ಇಲ್ಲಿನ ಮಸೀದಿ ಸಹಿತ ಹಲವು ಮನೆಗಳಿಗೆ ನಗರಸಭೆಯಿಂದಲೇ ನೀರು ಪೂರೈಕೆಯಾಗುತ್ತಿದೆ. ಕೆಲವು ಮನೆಗಳಲ್ಲಿ ನೀರು ದಾಸ್ತಾನಿರಿಸಲು ಟ್ಯಾಂಕ್‌ಗಳಿದ್ದರೆ, ಇನ್ನು ಕೆಲವೆಡೆ ಟ್ಯಾಂಕ್‌ಗಳಿಲ್ಲ. ಕೆಲವೊಮ್ಮೆ ಸರಗವಾಗಿ ನೀರು ಬಂದರೂ ಕೂಡ ತುಂಬಿಸುವುದು ಹೇಗೆ ಎಂಬ ಚಿಂತೆ ಹಲವರದ್ದು.

ಜಿಲ್ಲಾಸ್ಪತ್ರೆಗೂ ನೀರಿಲ್ಲ
ನೀರಿನ ಸಮಸ್ಯೆ ಅಜ್ಜರಕಾಡು ಜಿಲ್ಲಾಸ್ಪತ್ರೆಗೂ ತಟ್ಟಿದೆ. ತಿಂಗಳಿಂದ ಇಲ್ಲಿಗೆ ಟ್ಯಾಂಕರ್‌ ನೀರು ಸರಬರಾಜಾಗುತ್ತಿದೆ. ಆಸ್ಪತ್ರೆಯಿಂದ ಅರ್ಧ ಕಿ.ಮೀ.ದೂರದಲ್ಲಿ ಬಾವಿಯಿದ್ದು, ನೀರು ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಪ್ರಸ್ತುತ ಒಂದು ಹೊತ್ತು ಅರ್ಧತಾಸು ಮಾತ್ರ ಇಲ್ಲಿ ನೀರು ಲಭ್ಯವಾಗುತ್ತಿದೆ. ಆಸ್ಪತ್ರೆಗೆ ದಿನಕ್ಕೆ 12 ಲೀ. ಸಾಮರ್ಥ್ಯದ 8-10 ಟ್ಯಾಂಕರ್‌ಗಳಿಂದ ನೀರು ಪಡೆಯಲಾಗುತ್ತಿದೆ. ಆಸ್ಪತ್ರೆಯಲ್ಲಿ 30 ಸಾವಿರ ಲೀಟರ್‌ ಸಾಮರ್ಥ್ಯದ ಸಂಪ್‌ ಹಾಗೂ 10 ಸಾವಿರ ಲೀಟರ್‌ ಸಾಮರ್ಥ್ಯದ ಓವರ್‌ಹೆಡ್‌ ಟ್ಯಾಂಕ್‌ ಇದೆ. ಸಂಪ್‌ನಲ್ಲಿ ನೀರು ತುಂಬಿಸಿ ಅನಂತರ ಓವರ್‌ಹೆಡ್‌ ಟ್ಯಾಂಕ್‌ಗೆ ಹಾಕಲಾಗುತ್ತದೆ. ಆಸ್ಪತ್ರೆಯ ಸಿಬಂದಿಯೂ ನೀರನ್ನು ಮಿತವಾಗಿ ಬಳಸುತ್ತಿದ್ದಾರೆ.

ತವರು ಮನೆಯ ನೆನಪು
ನೀರಿಲ್ಲದ ಕಾರಣ ತವರು ಮನೆಯ ನೆನಪಾಗುತ್ತಿದೆ. ಮಕ್ಕಳಿಗೆ ಈಗ ರಜೆಯಿದೆ. ಜೂನ್‌ ತಿಂಗಳಲ್ಲಿ ಮತ್ತೆ ಪುನಃ ಬಂದರೆ ಆದೀತು ಎಂದು ತಮ್ಮ ಹಂಬಲ ವ್ಯಕ್ತಪಡಿಸಿದವರು ದಯಾವತಿ ಎಂಬವರು.

1 ಕೊಡ ತುಂಬಲು ಅರ್ಧ ಗಂಟೆ!
ಮೊನ್ನೆ ದಿನ ನೀರು ಬಂತು. ಆದರೆ ಒತ್ತಡ ಕಡಿಮೆ ಇದ್ದ ಕಾರಣ ಹನಿಹನಿ ಪ್ರಮಾಣದಲ್ಲಿ ನಮಗೆ ಲಭ್ಯವಾಯಿತು. ಸಿಕ್ಕಿದ್ದು 1 ಕೊಡ ಮಾತ್ರ ಆದರೆ ಅದು ತುಂಬಲು ಸುಮಾರು ಅರ್ಧಗಂಟೆ ಸಮಯ ತೆಗೆದುಕೊಂಡಿತು ಎಂದು ವಿವರಿಸಿದರು ಆನಂದ್‌.

ಟ್ಯಾಂಕರ್‌ ಅನಿವಾರ್ಯ
2018ರಲ್ಲಿ ಕೂಡ ಈ ಭಾಗದಲ್ಲಿ ನೀರಿನ ಸಮಸ್ಯೆ ಎದುರಾಗಿತ್ತು. ಮೂರು ದಿನಕ್ಕೊಮ್ಮೆ ನೀರು ಬಿಡುತ್ತಿದ್ದರೂ, ಮಧ್ಯೆ ಟ್ಯಾಂಕರ್‌ ನೀರು ಸರಬರಾಜಿತ್ತು. ಆದರೆ ಬೇಗನೆ ಮಳೆ ಸುರಿದ ಪರಿಣಾಮ ಅಷ್ಟೊಂದು ಸಮಸ್ಯೆ ಗೋಚರಕ್ಕೆ ಬರಲಿಲ್ಲ. ಈ ಬಾರಿ ಎಪ್ರಿಲ್‌ ತಿಂಗಳಲ್ಲೇ ನೀರಿನ ಕೊರತೆ ಕಂಡುಬಂದಿರುವುದರಿಂದ ಮತ್ತೆ ಸಮಸ್ಯೆ ಎದುರಾಗಿದೆ. ಸಮಸ್ಯೆ ಇರುವೆಡೆ ಟ್ಯಾಂಕರ್‌ ನೀರು ಪೂರೈಕೆ ಮಾಡಲು ಕ್ರಮ ತೆಗೆದುಕೊಳ್ಳಬೇಕಾಗಿದೆ.

ವಾರ್ಡಿನವರ ಬೇಡಿಕೆ
– ಟ್ಯಾಂಕರ್‌ನಿಂದ ಬರುವ ನೀರು ಅಧಿಕ ಒತ್ತಡದಿಂದ ಕೂಡಿದರೆ ಅನುಕೂಲ.
– ದಿನಕ್ಕೊಮ್ಮೆಯಾದರೂ ನೀರು ಸಿಗಬೇಕು.
– ನೀರನ್ನು ಪೋಲು ಮಾಡು ವವರ ವಿರುದ್ಧ ಕ್ರಮ ಕೈಗೊಳ್ಳಿ.
– ನೀರು ದಾಸ್ತಾನಿಗೆ ಪರ್ಯಾಯ ವ್ಯವಸ್ಥೆ ಒದಗಿಸಿ

ಹೊತ್ತಲ್ಲದ ಹೊತ್ತು ನೀರು ಬಿಟ್ಟರೆ ಏನು ಮಾಡುವುದು?
ನಿಗದಿತ ಸಮಯದಲ್ಲಿ ನೀರು ನೀಡಿದರೆ ನಮಗೂ ತುಂಬಿಸಲು ಅನುಕೂಲವಾಗುತ್ತದೆ. ಅದು ಬಿಟ್ಟು ಬೆಳ್ಳಂಬೆಳಗ್ಗೆ 2 ಗಂಟೆಗೆ 4 ಗಂಟೆಗೆ ನೀರು ಬಿಡುವುದರಿಂದ ನಿದ್ದೆ ಬಿಟ್ಟು ಕಾಯಬೇಕಾಗುತ್ತದೆ. ಕೆಲವೊಂದು ಬಾರಿ ಹಗಲು ಹೊತ್ತು ಕೂಡ ಬರುವುದುಂಡು. ಇದರಿಂದ ಅತ್ತ ಹೊರಗಡೆ ಹೋಗಲೂ ಸಾಧ್ಯವಾಗುತ್ತಿಲ್ಲ. ನಮ್ಮ ವಾರ್ಡ್‌ಗೆ ಇಂತಿಷ್ಟು ಸಮಯದಲ್ಲಿ ನೀರು ಬರುವುದು ಎಂದು ನಿಗದಿ ಮಾಡಿದರೆ ನಮಗೂ ಅನುಕೂಲವಾಗುತ್ತದೆ.
-ಆನಂದ್‌,ಸ್ಥಳೀಯ ನಿವಾಸಿ

ನೆಂಟರೂ ನೀರಿನ ಬಗ್ಗೆ ಕೇಳುತ್ತಾರೆ!
ದೂರವಾಣಿ ಮೂಲಕ ದೂರದ ನೆಂಟರಲ್ಲಿ ಮಾತನಾಡುತ್ತೇವೆ. ಅವರಿಗೂ ನಮ್ಮ ಸಮಸ್ಯೆ ಅರಿವಾಗಿದೆ. ಕಳೆದ ಬಾರಿ ರಜೆಯ ಸಮಯದಲ್ಲಿ ತಂಗಿಯ ಮಕ್ಕಳು ಬಂದಿದ್ದರು. ಆವಾಗಲೂ ನೀರಿನ ಸಮಸ್ಯೆ ಇತ್ತು. ಈ ಬಾರಿ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಊರಿಗೆ ಬರುವ ಮೊದಲೇ ನೀರು ಉಂಟಾ..? ಎಂದು ಕೇಳುತ್ತಾರೆ. ನೀರಿನ ಸಮಸ್ಯೆಯಿಂದ ಯಾರು ಕೂಡ ಬರಲು ಆಸಕ್ತಿ ತೋರಿಸುತ್ತಿಲ.
- ಪಾಂಡುರಂಗ,ಸ್ಥಳೀಯ ನಿವಾಸಿ

ಉದಯವಾಣಿ ಆಗ್ರಹ
ತಾತ್ಕಾಲಿಕವಾಗಿಯಾದರೂ ಈ ಭಾಗದಲ್ಲಿ ನೀರಿನ ಶೇಖರಣೆಗೆ ಫೈಬರ್‌ ಟ್ಯಾಂಕ್‌ನ ವ್ಯವಸ್ಥೆಯನ್ನು ಆಡಳಿತ ಮಾಡಿಕೊಡಬೇಕು. ನೀರಿನ ಅಭಾವ ತೀವ್ರವಾಗಿರುವಲ್ಲಿ ಟ್ಯಾಂಕರ್‌ ನೀರು ಪೂರೈಸಬೇಕು.

ಮಾಹಿತಿ ನೀಡಿ
ನೀರಿನ ತೀವ್ರ ಸಮಸ್ಯೆಇದ್ದಲ್ಲಿ ತಮ್ಮ ಹೆಸರಿನ ಸಹಿತ “ಉದಯವಾಣಿ’ ವಾಟ್ಸಪ್‌ ನಂಬರ್‌ 9148594259 ಬರೆದು ಕಳುಹಿಸಿ.

– ಪುನೀತ್‌ ಸಾಲ್ಯಾನ್‌

ಟಾಪ್ ನ್ಯೂಸ್

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ

8-udupi

Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್‌.ಆರ್‌.

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.