ಉಡುಪಿ ನಗರ: ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣ
Team Udayavani, Jun 2, 2019, 10:49 AM IST
ಉಡುಪಿ: ನಗರದಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತಿದೆ. ಜೂನ್ ತಿಂಗಳ ಮೊದಲು ಮಳೆ ಸುರಿಯಬಹುದು ಎಂದು ಎಲ್ಲರ ನಿರೀಕ್ಷೆಯಿತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ.
ಒಂದೆಡೆ ಸಂಘ-ಸಂಸ್ಥೆಗಳು, ವಾರ್ಡ್ ಸದಸ್ಯರು, ಸಾಮಾಜಿಕ ಕಾರ್ಯಕರ್ತರು ಸಾಧ್ಯವಾದಷ್ಟು ನೀರು ವಿತರಿಸುತ್ತಿದ್ದಾರೆ. ಶಾಲೆ, ವಾಣಿಜ್ಯ ಕಟ್ಟಡ, ಉದ್ಯಮ ನೀರಿಲ್ಲದೆ ಸಮಸ್ಯೆ ಎದುರಿಸುತ್ತಿವೆ. ನೀರಿನ ಸಮಸ್ಯೆ ಯಿಂದಾಗಿ ನಗರದಲ್ಲಿ ಸುಮಾರು 15ರಷ್ಟು ಹೊಟೇಲ್ ಬಾಗಿಲು ಮುಚ್ಚಿವೆ. ಸಣ್ಣಪುಟ್ಟ ಹೊಟೇಲ್ಗಳಿಗೆ ದಿನ ವೊಂದಕ್ಕೆ 1 ಸಾವಿರದಿಂದ 1,500 ಲೀ.ನಷ್ಟು ನೀರು ಬೇಕಾಗುತ್ತದೆ. ಆದರೆ ಅಷ್ಟೊಂದು ಪ್ರಮಾಣದಲ್ಲಿ ನೀರು ಲಭ್ಯವಿಲ್ಲದ ಕಾರಣ ಹೊಟೇಲ್ಗಳನ್ನು ಬಂದ್ ಮಾಡುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಹೊಟೇಲ್ ಮಾಲಕರೊಬ್ಬರು.
ನಿಟ್ಟೂರು ವಾರ್ಡ್‌ನಲ್ಲೊಬ್ಬರ ಸಮಾಜ ಸೇವೆ!
ನಿಟ್ಟೂರು ವಾರ್ಡ್ ನಿವಾಸಿ ಮಹಾಬಲ ಶೆಟ್ಟಿ ಅವರು ತಮ್ಮ ಸ್ವಂತ ವೆಚ್ಚದಲ್ಲಿ ವಾರ್ಡ್ ನಿವಾಸಿಗಳಿಗೆ ದಿನನಿತ್ಯ 20 ಸಾವಿರ ಲೀ. ನೀರು ಪೂರೈಕೆ ಮಾಡುತ್ತಿದ್ದಾರೆ. ಕಳೆದ 21 ದಿನಗಳಿಂದ ಈ ಕರ್ತವ್ಯವನ್ನು ಅವರು ನಿಭಾಯಿಸುತ್ತಿದ್ದಾರೆ. ಬೆಳಗ್ಗೆ 10 ಗಂಟೆಗೆ ಆರಂಭವಾದರೆ ರಾತ್ರಿ 12 ಗಂಟೆವರೆಗೂ ಕೆಲವು ಬಾರಿ ರಾತ್ರಿ 2 ಗಂಟೆಯವರೆಗೂ ನೀರು ಪೂರೈಸಿದ್ದೂ ಇದೆ ಎನ್ನುತ್ತಾರೆ ಅವರು. ಇವರ ಮನೆಯಲ್ಲಿರುವ ಕೊಳವೆಬಾವಿಯಿಂದಲೇ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಸಮೀಪದ ಕಕ್ಕುಂಜೆ ವಾರ್ಡ್‌ನವರು ಕೂಡ ಟ್ಯಾಂಕರ್ ಮೂಲಕ ಇಲ್ಲಿಂದ ನೀರು ಕೊಂಡೊಯ್ಯುತ್ತಾರೆ.
ನಗರಸಭೆ: ನೀರು ಪೂರೈಕೆ ಮುಂದುವರಿಕೆ
ನಗರವನ್ನು 6 ವಿಭಾಗಗಳನ್ನಾಗಿ ವಿಂಗಡಿಸಿ ಆರು ದಿನಗಳಿಗೊಮ್ಮೆ ಒಂದೊಂದು ವಿಭಾಗಗಳಿಗೆ ನೀರು ಒದಗಿಸುವ ಪ್ರಕ್ರಿಯೆ ನಗರಸಭೆಯಿಂದ ನಡೆಯುತ್ತಿದೆ. ಸದ್ಯಕ್ಕೆ ಸ್ವರ್ಣಾ ನದಿಯಲ್ಲಿ 5ರಿಂದ 6 ದಿನಕ್ಕಾಗುವಷ್ಟು ಮಾತ್ರ ನೀರಿನ ಅಂದಾಜು ಲಭ್ಯತೆ ಇದೆ. ವಾರ ಕಳೆದರೂ ಮಳೆ ಬಾರದೆ ಇದ್ದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.