“ಉದಯವಾಣಿ” ಹೆಸರು,ಟ್ರೇಡ್‌ಮಾರ್ಕ್‌ನ ಅಕ್ರಮ ಬಳಕೆಗೆ ತಡೆಯಾಜ್ಞೆ
Team Udayavani, Dec 18, 2022, 6:40 AM IST
ಉಡುಪಿ: “ಉದಯವಾಣಿ’ಯ ಹೆಸರು ಮತ್ತು ಟ್ರೇಡ್ ಮಾರ್ಕ್ ಅನ್ನು (Udayavani.com) ಯಾವುದೇ ವ್ಯಕ್ತಿಗಳು ಮತ್ತು ಸಂಸ್ಥೆಗಳು ಬಳಸಿಕೊಳ್ಳದಂತೆ ನಿರ್ಬಂಧ ವಿಧಿಸಿ ಉಡುಪಿ ಜಿಲ್ಲಾ ನ್ಯಾಯಾಲಯ ಶುಕ್ರವಾರ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ಇತ್ತೀಚೆಗೆ ಅಮರೇಶ್ ಕಮನಕೇರಿ ಎಂಬವರು “ಉದಯವಾಣಿ ಕನ್ನಡ ಮತ್ತು ಇಂಗ್ಲಿಷ್ ನ್ಯೂಸ್ ಮೀಡಿಯಾ’ ಹೆಸರನ್ನೇ ತಮ್ಮ ಡಿಜಿಟಲ್ ಮತ್ತು ಮಾಧ್ಯಮ ಸಂಸ್ಥೆಗೆ ಬಳಸುತ್ತಿರುವುದು ಗಮನಕ್ಕೆ ಬಂದಿದೆ. ಇದು ಸಾರ್ವಜನಿಕರಲ್ಲಿ “ಉದಯವಾಣಿ’ ದೈನಿಕದ ಕುರಿತು ಗೊಂದಲ ಸೃಷ್ಟಿಸುವುದಲ್ಲದೇ, ತಪ್ಪು ಅಭಿಪ್ರಾಯವನ್ನೂ ಮೂಡಿಸಲಿದೆ. ಈ ಹಿನ್ನೆಲೆಯಲ್ಲಿ ಉದಯವಾಣಿ ಹೆಸರನ್ನು ಅನ್ಯರು ಅಕ್ರಮವಾಗಿಬಳಸುತ್ತಿರುವುದರ ವಿರುದ್ಧ ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿ. ಉಡುಪಿಯ ಪ್ರಧಾನ ಜಿಲ್ಲಾ ನ್ಯಾಯಾಲಯದಲ್ಲಿ ಮೊಕದ್ದಮೆ (ಒ.ಎಸ್. 2/2022) ದಾಖಲಿಸಿತ್ತು.
ಡಿ. 16 ರಂದು ನ್ಯಾಯಾಧೀಶರು ಅಮರೇಶ್ ಕಮನಕೇರಿ ಸಹಿತ ಇನ್ನಾವುದೇ ವ್ಯಕ್ತಿಗಳು ಮುಂದಿನ ತಾರೀಕಿನವರೆಗೆ”ಉದಯವಾಣಿ’ ಹೆಸರು ಮತ್ತು ಟ್ರೇಡ್‌ಮಾರ್ಕ್ ಬಳಕೆ ಮಾಡದಂತೆ ನಿರ್ಬಂಧಿಸಿ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದಾರೆ.
ಮುದ್ರಣ ಮತ್ತು ಪ್ರಕಾಶನ ಸಂಸ್ಥೆಯಾದ ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್(ಎಂಎಂಎನ್‌ಎಲ್) 1970ರಿಂದ ಹೆಸರಾಂತಕನ್ನಡ ದೈನಿಕ “ಉದಯವಾಣಿ’ಯನ್ನು ಪ್ರಕಟಿಸುತ್ತಿದೆ. ಜತೆಗೆ ಮಣಿ ಪಾಲ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ದಾವಣಗೆರೆ, ಮುಂಬಯಿಯಲ್ಲಿ ಉದಯವಾಣಿಯ ಆವೃತ್ತಿಗಳು ಏಕಕಾಲದಲ್ಲಿ ನಿತ್ಯವೂ ಪ್ರಕಟವಾಗುತ್ತಿವೆ.
ಇದರ ಜತೆ “ತರಂಗ’, “ತುಷಾರ’, “ತುಂತುರು’ ನಿಯತಕಾಲಿಕೆಗಳನ್ನು ಎಂಎಂಎನ್‌ಎಲ್ ಮುದ್ರಿಸಿ ಪ್ರಕಟಿಸುತ್ತಿದೆ. ಎಂಎಂಎನ್ ಎಲ್ ಸಂಸ್ಥೆಯು ಟ್ರೇಡ್‌ಮಾರ್ಕ್‌ನ ಮಾಲಕತ್ವವನ್ನು ಹೊಂದಿದೆ. ಈ ಟ್ರೇಡ್‌ಮಾರ್ಕ್ ಅನ್ನು ದೇಶ-ವಿದೇಶಗಳಲ್ಲಿ ಸಂಸ್ಥೆಯು ತನ್ನ ಎಲ್ಲಕಾರ್ಯಚಟುವಟಿಕೆಗಳಲ್ಲಿ ಬಳಸುತ್ತಿದ್ದು, ಇನ್ನು ಮುಂದೆಯೂ ಇದೇ ಸಂಸ್ಥೆಯ ಭಾಗವಾಗಿರಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.