ಉಡುಪಿ ಅಪರಾಧಗಳು ಸುದ್ದಿ
Team Udayavani, Dec 10, 2017, 3:02 PM IST
ಹಾಲಾಡಿ: ವಾಹನ ಕಳವು
ಶಂಕರನಾರಾಯಣ:ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಕಚೇರಿಯ ಹಿಂದೆ ನಿಲ್ಲಿಸಿದ ಟಿವಿಎಸ್ ದ್ವಿಚಕ್ರ ವಾಹನವನ್ನು ಹಾಡಹಗಲೇ ಕಳವುಗೈದ ಘಟನೆ ಡಿ. 8ರ ಮಧ್ಯಾಹ್ನ ಸಂಭವಿಸಿದೆ. ನರಸಿಂಹ ನಾಯಕ್ ಅವರು ಶಾಸಕರ ಮನೆಯ ಹಿಂದೆ ದ್ವಿಚಕ್ರ ವಾಹನ ನಿಲ್ಲಿಸಿದ್ದು ಕಳವಾಗಿದೆ. ಕಳವಾದ ದ್ವಿಚಕ್ರ ವಾಹನದ ಮೌಲ್ಯ 10 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿನ್ನದ ಅಂಗಡಿ ಮಾಲಕರಿಗೆ ಬೆದರಿಕೆ ಕಿನ್ನಿಗೋಳಿ: ಕಿನ್ನಿಗೋಳಿ ಮುಖ್ಯರಸ್ತೆಯಲ್ಲಿನ ರಾಜಶ್ರೀ ಜುವೆಲರಿ ಮಾಲಕ ಬಿ.ಡಿ. ರಾಮಚಂದ್ರ ಆಚಾರ್ಯ ಅವರಿಗೆ ಅಪರಿಚಿತನೋರ್ವ ರಿವಾಲ್ವರ್ ತೋರಿಸಿ ಪರಾರಿಯಾದ ಘಟನೆ ಗುರುವಾರ ತ್ರಿಸಂಭವಿಸಿದೆ. ನಕಲಿ ಗುಂಡು ಒಂದನ್ನು ಹೊರಗಿನಿಂದ ಎಸೆದು ಹೋಗಿದ್ದಾನೆ. ಹಫ್ತಾ ವಸೂಲಿಗಾಗಿ ಈ ಯತ್ನ ನಡೆಸಿರಬಹುದು ಎಂದು ಪೊಲೀಸ್ ಮೂಲ ತಿಳಿಸಿದೆ. ಶುಕ್ರವಾರ ಬೆಳಗ್ಗೆ ಆಚಾರ್ಯ ಅವರ ಪುತ್ರ ರಾಜಶೇಖರ್ ಅವರ ಮೊಬೈಲ್‌ಗೆ ಇಂಟರ್‌ನೆಟ್ ಕರೆ ಬಂದಿದ್ದು ಆ ಕರೆಯನ್ನು ಸ್ವೀಕರಿಸಲಿಲ್ಲ. ತತ್‌ಕ್ಷಣ ಮೊಬೈಲ್‌ಗೆ ಕರೆ ಸ್ವೀಕರಿಸಿ ನಾನು ಕಲಿ ಯೋಗೀಶ್ ಎಂಬ ಸಂದೇಶ ಬಂದಿದೆ, ಅದೇ ದಿನ ರಾತ್ರಿ ಮೂಲ್ಕಿ ಪೊಲೀಸರಿಗೆ ರಾಮಚಂದ್ರಆಚಾರ್ಯ ಅವರು ಮಾಹಿತಿ ನೀಡಿದ್ದು , ಕೂಡಲೇ ಕಾರ್ಯಪ್ರವರ್ತರಾದ ಮೂಲ್ಕಿ ಪೊಲೀಸ್ ಠಾಣಾಧಿಕಾರಿ ಮಾಹಿತಿ ಸಂಗ್ರಹಿಸಿ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅಂಗಡಿಯ ಮುಂದುಗಡೆ ಎರಡು ಸಿ.ಸಿ ಕೆಮರಾ ಇದೆ, ಮೂಲ್ಕಿ ಪೊಲೀಸರು ಕಿನ್ನಿಗೋಳಿ ಅಂಗಡಿ ಮತ್ತಿತರ ಕಡೆಗಳಲ್ಲಿನ ಸಿ.ಸಿ ಕೆಮರಾ ಪರಿಶೀಲಿಸುತ್ತಿದ್ದು, ಮಾಹಿತಿ ಕಲೆಹಾಕುತ್ತಿದ್ದಾರೆ. 4 ವರ್ಷಗಳ ಹಿಂದೆ ಕಿನ್ನಿಗೋಳಿ ಉದ್ಯಮಿಯೋರ್ವರಿಗೆ ರವಿ ಪೂಜಾರಿ ಸಹಚರರು ರಿವಾಲ್ವರ್ ತೋರಿಸಿ ಬೆದರಿಕೆಯೊಡ್ಡಿದ ಘಟನೆ ಸಂಭವಿಸಿತ್ತು. ಘಟನೆ ನಡೆದ ಸ್ಥಳಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳಾದ ರಾಜೇಂದ್ರ, ಹನುಮಂತರಾಯ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಲಾರಿ ಢಿಕ್ಕಿ: ಸೈಕಲ್ ಸವಾರ ಸಾವು ಗಂಗೊಳ್ಳಿ : ತ್ರಾಸಿ ಜಂಕ್ಷನ್ ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಲಾರಿ ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸೈಕಲ್ ಸವಾರ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಸಾವನ್ನಪ್ಪಿದ ಘಟನೆ
ಡಿ. 9ರ ಬೆಳಗ್ಗೆ 9.30 ಸುಮಾರಿಗೆ ಸಂಭವಿಸಿದೆ. ಹಡವು ಗ್ರಾಮದ ಪಡುಕೋಣೆ ನಿವಾಸಿ ಆನಂದ ಹೆಬ್ಟಾರ್ (69) ಮೃತಪಟ್ಟವರು. ಮರವಂತೆ ಕಡೆಯಿಂದ ತ್ರಾಸಿ ಜಂಕ್ಷನ್ ಕಡೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತನ್ನ ಸೈಕಲ್‌ನಲ್ಲಿ ತೆರಳುತ್ತಿದ್ದ ಅವರಿಗೆ ಕುಂದಾಪುರ ಕಡೆಯಿಂದ ಬಂದ ಲಾರಿ ಢಿಕ್ಕಿಯಾಗಿದೆ.
ಅಪಘಾತದ ಗಾಯಾಳು ಸಾವು ಪುತ್ತೂರು: ಶುಕ್ರವಾರ ಸಂಜೆ ಕೆಮ್ಮಾಯಿ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ, ಶನಿವಾರ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬೆಳ್ತಂಗಡಿಯ ಲಾೖಲ ಹೊಸಕುಮೇರು ನಿವಾಸಿ ಪುಷ್ಪಾಕರ (40) ಮೃತಪಟ್ಟವರು. ಶುಕ್ರವಾರ ಸಂಜೆ ಉಪ್ಪಿನಂಗಡಿಯಿಂದ ಪುತ್ತೂರು ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಎದುರಿನಿಂದ ಬಂದ ಕಾರು ಢಿಕ್ಕಿಯಾಗಿತ್ತು. ಕೆಮ್ಮಾಯಿ ಬಳಿ ಘಟನೆ ಸಂಭವಿಸಿದ್ದು, ಸವಾರ ಪುಷ್ಪಾಕರ ಗಂಭೀರ ಗಾಯಗೊಂಡಿದ್ದರು. ತತ್‌ಕ್ಷಣ ಪುತ್ತೂರು ಆಸ್ಪತ್ರೆಗೆ ಸಾಗಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮೃತಪಟ್ಟಿದ್ದಾರೆ. ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅನುಮಾನಾಸ್ಪದ ವರ್ತನೆ: ಬಂಧನ ಉಡುಪಿ: ಇಂದ್ರಾಳಿ ರೈಲ್ವೇ ಗೋಡೌನ್‌ನ ಸಮೀಪದಲ್ಲಿ ಶನಿವಾರ ಮುಂಜಾನೆ ಅನುಮಾ ನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಹೊಯ್ಸಳ ವಾಹನದಲ್ಲಿದ್ದ ಎಎಸ್‌ಐ ದಿವಾಕರ
ಶರ್ಮ ಅವರು ಬಂಧಿಸಿದ್ದಾರೆ. ಕುಳ್ಳ ಹೊಸಬೆಟ್ಟುವಿನ ಆನಂದ ಬಂಧಿತ ವ್ಯಕ್ತಿ. ಅವರು ಪೊಲೀಸರನ್ನು ಕಂಡು
ಕತ್ತಲೆಯಲ್ಲಿ ಅವಿತುಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಪೊಲೀಸರ ಕಣ್ಣಿಗೆ ಬಿದ್ದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe: ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ
Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ
Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್ ಶೆಟ್ಟಿ
Ajekar Case: ನ್ಯಾಯಾಂಗ ಬಂಧನ ವಿಸ್ತರಣೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.