ವಾಹನಗಳಲ್ಲೂ ರಾಷ್ಟ್ರ ಧ್ವಜಕ್ಕೆ ಅವಕಾಶ : ಅವಮಾನ ಆಗದಂತೆ ಎಚ್ಚರ ವಹಿಸಿ : ಡಿಸಿ
Team Udayavani, Aug 11, 2022, 9:02 AM IST
ಉಡುಪಿ : ಹರ್ ಘರ್ ತಿರಂಗಾ ಕಾರ್ಯಕ್ರಮವು ಆ. 13ರಿಂದ 15ರ ವರೆಗೆ ನಡೆಯಲಿದೆ. ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವು ಆ. 15ರಂದು ಎಲ್ಲ ಕಡೆಯೂ ನಡೆಯಲಿದೆ. ಈ ಹಿಂದಿನ ವರ್ಷಗಳಲ್ಲಿ ಸ್ವಾತಂತ್ಯೋತ್ಸವದಂದು ನಡೆದಂತೆ ಈ ಬಾರಿಯೂ ರಿಕ್ಷಾ, ಬಸ್, ಟೆಂಪೋ, ಬೈಕ್ ಇತ್ಯಾದಿಗಳಿಗೆ ರಾಷ್ಟ್ರಧ್ವಜ ಕಟ್ಟಿಕೊಂಡು ರ್ಯಾಲಿ ಮಾಡಲು ಅವಕಾಶವಿದೆ. ಆದರೆ ರಾಷ್ಟ್ರಧ್ವಜಕ್ಕೆ ಸ್ವಲ್ಪವೂ ಅವಮಾನ ಆಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಮನವಿ ಮಾಡಿದ್ದಾರೆ.
ಉದಯವಾಣಿಯೊಂದಿಗೆ ಮಾತನಾಡಿದ ಅವರು, ಸರಕಾರಿ ಕಚೇರಿ, ಶಾಲೆ, ಆಸ್ಪತ್ರೆ ಸಹಿತ ವಿವಿಧ ಕಡೆಗಳಲ್ಲಿ ಸೂರ್ಯೋದಯದ ಅನಂತರ ಧ್ವಜಾರೋಹಣ ನಡೆದು, ಸೂರ್ಯಾಸ್ತದ ಮೊದಲು ಧ್ವಜವನ್ನು ಕೆಳಗೆ ಇಳಿಸಲಾಗುತ್ತದೆ. ಆದರೆ ಈ ವರ್ಷಕ್ಕೆ ಅನ್ವಯವಾಗುವಂತೆ ಮೂರು ದಿನ ಹರ್ ಘರ್ ತಿರಂಗಾ ನಡೆಯುತ್ತಿರುವುದರಿಂದ ಆ. 13ರಿಂದ 15ರ ವರೆಗೆ ಮನೆ, ಕಟ್ಟಡ ಮೊದಲಾದ ಸ್ಥಳಗಳಲ್ಲಿ ರಾತ್ರಿಯೂ ಧ್ವಜಾರೋಹಣ ಇರಲಿದೆ ಎಂದರು.
ಸ್ವಾತಂತ್ರ್ಯೋತ್ಸವನ್ನು ಎಲ್ಲರೂ ಸಂಭ್ರಮದಿಂದ ಆಚರಣೆ ಮಾಡುವುದರಿಂದ ಈ ಹಿಂದೆ ಯಾವ ರೀತಿ ಆಚರಣೆ ನಡೆಯುತ್ತಿತ್ತೋ ಅವೆಲ್ಲದಕ್ಕೂ ಅವಕಾಶ ಇದೆ. ವಾಹನಗಳ ರ್ಯಾಲಿ ಮಾಡುವ ಸಂದರ್ಭ ಕಟ್ಟಿರುವ ಧ್ವಜ ಕೆಳಕ್ಕೆ ಬೀಳದಂತೆ, ಕೆಳಮುಖವಾಗಿ ಹಾರದಂತೆ, ಅವಮಾನವಾಗುವ ಯಾವುದೇ ರೀತಿಯಲ್ಲೂ ಧ್ವಜ ಹಾರದಂತೆ ನೋಡಿಕೊಳ್ಳಬೇಕು. ಗಾಳಿಯ ರಭಸಕ್ಕೆ ಧ್ವಜ ತುಂಡಾಗುವುದು ಅಥವಾ ಹರಿದು ಹೋಗುವ ಸಾಧ್ಯತೆ ಇದ್ದಲ್ಲಿ, ಆ ಬಗ್ಗೆಯೂ ಎಚ್ಚರ ವಹಿಸಬೇಕು. ಧ್ವಜ ಸಂಹಿತೆಯನ್ನು ಅಚ್ಚುಕಟ್ಟಾಗಿ ಪಾಲಿಸಿಕೊಂಡು ಸ್ವಾತಂತ್ರ್ಯದ ಸಂಭ್ರಮಾಚರಣೆ ಮಾಡಬೇಕು ಎಂದರು.
ಇದನ್ನೂ ಓದಿ : ಜಿಲ್ಲಾದ್ಯಂತ ಕಾಲುಸಂಕ ಅಭಿಯಾನ : ಕಾಲ್ತೊಡಿಗೆ 8 ತಿಂಗಳ ಹಿಂದೆಯೇ ಸಂಕ ಮಂಜೂರಾಗಿತ್ತು
ಎಲ್ಲಿಯೂ ಪ್ಲಾಸ್ಟಿಕ್ ಧ್ವಜ ಬಳಸಬಾರದು. ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮ ಮುಗಿದ ಅನಂತರ ಧ್ವಜವನ್ನು ಗೌರವಯುತವಾಗಿ ಒಂದೆಡೆ ಇಡಬೇಕು. ಈ ಬಾರಿ ಅಮೃತ ಸರೋವರವಾಗಿ ಅಭಿವೃದ್ಧಿಪಡಿಸಿರುವ ಕೆರೆಯ ಆವರಣಗಳಲ್ಲೂ ಧ್ವಜಾರೋಹಣ ನಡೆಯಲಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.