Udupi ಡೆಂಗ್ಯೂ: ತಡೆಗೆ ಹತ್ತು ಹಲವು ಸೂತ್ರ
Team Udayavani, Sep 17, 2023, 12:42 AM IST
ಉಡುಪಿ: ಡೆಂಗ್ಯೂ ಬಂದ ಮೇಲೆ ಜಾಗೃತರಾಗುವುದಕ್ಕಿಂತ ಮುನ್ನ ಅದು ಅಂಟಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಸೊಳ್ಳೆ ಪರದೆಗಳನ್ನು ಉಪಯೋಗಿಸಬೇಕು.
ಸೊಳ್ಳೆ ಬತ್ತಿ, ಬೇವಿನ ಹೊಗೆ, ಚರ್ಮಲೇಪನಗಳು, ಸೊಳ್ಳೆ ನಿರೋಧಕಗಳನ್ನು ಉಪಯೋಗಿಸಬೇಕು. ವಯೋವೃದ್ಧರು ಹಾಗೂ ಮಕ್ಕಳು ಮಲಗುವಾಗ ತಪ್ಪದೇ ಸೊಳ್ಳೆ ಪರದೆ ಉಪಯೋಗಿಸಬೇಕು. ಸಿಮೆಂಟ್ ತೊಟ್ಟಿ, ಹಲವಾರು ದಿನಗಳಿಂದ ನೀರಿನಿಂದ ತುಂಬಿರುವ ಹೂ ಕುಂಡಗಳು, ಪ್ಲಾಸ್ಟಿಕ್ ಸೇರಿದಂತೆ ನೀರು ನಿಲ್ಲುವ ವಸ್ತುಗಳನ್ನು ಸಂಪೂರ್ಣ ಖಾಲಿ ಮಾಡಬೇಕು. ಇದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಗಟ್ಟಲು ಸಾಧ್ಯವಾಗಲಿದೆ.
ಆಹಾರ ಸೇವೆನೆ ಹೇಗಿದ್ದರೆ ಉತ್ತಮ?
ಡೆಂಗ್ಯೂ ಜ್ವರ ಲಕ್ಷಣ ಇರುವವರು ಸರಿಯಾದ ಸಮಯಕ್ಕೆ ನೀರು ಸೇವನೆ ಮಾಡಬೇಕು. ವೈದ್ಯರ ಸಲಹೆ ಮೇರೆಗೆ ಪಪ್ಪಾಯ ಎಲೆಯ ರಸ, ತುಳಸಿ ಎಲೆಯ ರಸ, ಕಿವಿ ಹಣ್ಣುಗಳ ಸೇವನೆ, ಬೇವಿನ ಎಲೆಗಳಿಂದ ಮಾಡಿದ ಕಷಾಯ, ದಾಳಿಂಬೆ ಹಣ್ಣು, ಎಳನೀರು, ಅರಿಶಿನ ಬೆರೆಸಿದ ಹಾಲು, ಪಾಲಕ್ ಸೊಪ್ಪು ಸಹಿತ ವಿಟಮಿನ್ ಸಿ ಅಂಶಗಳಿರುವ ವಸ್ತುಗಳನ್ನು ನಿಯಮಿತವಾಗಿ ಸೇವಿಸಬೇಕು. ಸಿಟ್ರಿಸ್ ಅಂಶಗಳು ಹೆಚ್ಚಿರುವ ಆಹಾರಗಳಾದ ಬಾದಾಮಿ, ಬೆಳ್ಳುಳ್ಳಿಗಳೂ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಹೊಂದಿದೆ. ರೋಗಲಕ್ಷಣಗಳು ಕಂಡುಬಂದಾಗ ಕೂಡಲೇ ವೈದ್ಯರಲ್ಲಿಗೆ ತೆರಳಿ ರಕ್ತ ಪರೀಕ್ಷೆ ಮಾಡುವುದು ಉತ್ತಮ ಎಂಬುವುದು
ತಜ್ಞ ವೈದ್ಯರ ಅಭಿಪ್ರಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.