ಉಡುಪಿ ಜಿಲ್ಲೆ: 100 ಮನೆಗಳಿಗೆ ಹಾನಿ
Team Udayavani, Aug 8, 2019, 6:25 AM IST
ಉಡುಪಿ/ಹೆಬ್ರಿ: ಜಿಲ್ಲೆಯಲ್ಲಿ ಬುಧವಾರ ದಿನವಿಡೀ ಉತ್ತಮ ಮಳೆಯಾಗಿದೆ. ಸಂಜೆಯ ಬಳಿಕ ಗಾಳಿಯಿಂದ ಕೂಡಿದ ಭಾರೀ ಮಳೆ ಸುರಿದಿದೆ. ಆಗುಂಬೆ ಘಾಟಿಯಲ್ಲಿ ಸಂಜೆ ವೇಳೆಗೆ ಮರ ಬಿದ್ದು ತಾಸುಗಳ ಕಾಲ ಸಂಚಾರ ಸ್ಥಗಿತವಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಬುಧವಾರ ಬಿಡುಗಡೆ ಮಾಡಿದ ವರದಿ ಪ್ರಕಾರ ಸುಮಾರು 100 ಮನೆಗಳಿಗೆ ಹಾನಿಯಾಗಿದೆ.
ಸಂಜೆ ಅನಂತರ ತೆಕ್ಕಟ್ಟೆ, ಕೊಲ್ಲೂರು, ಕೋಟೇಶ್ವರ, ಬ್ರಹ್ಮಾವರ, ಕುಂದಾಪುರ, ಬೈಂದೂರು ಸೇರಿದಂತೆ ವಿವಿಧ ಕಡೆಯಲ್ಲಿ ಭಾರೀ ಗಾಳಿ ಮಳೆಯಾಗಿದೆ.
ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮೆಸ್ಕಾಂಗೆ ಒಟ್ಟು 17.93 ಲ.ರೂ. ನಷ್ಟ ಉಂಟಾಗಿದೆ.
ಮುಟ್ಲುಪಾಡಿ: ಗಾಳಿಯಿಂದ ಹಾನಿ
ಅಜೆಕಾರು: ಬುಧವಾರ ಸಂಜೆ ಭಾರೀ ಗಾಳಿಗೆ ಮುಟ್ಲುಪಾಡಿ ಪರಿಸರದ ಬಹುತೇಕ ಅಂಗಡಿ ಮತ್ತು ಮನೆಗಳು ಹಾನಿಗೀಡಾಗಿವೆ. 20 ಮನೆಗಳ ಮೇಲ್ಛಾವಣಿಗೆೆ ಸಂಪೂರ್ಣ ಹಾನಿಯಾಗಿದ್ದು, 100ಕ್ಕೂ ಅಧಿಕ ಮನೆಗಳ ಮೇಲ್ಛಾವಣಿಗೆ ಭಾಗಶಃ ಹಾನಿಯಾಗಿದೆ. ರಸ್ತೆ, ಮನೆಗಳ ಮೇಲೆ 100ಕ್ಕೂ ಅಧಿಕ ಮರಗಳು ಉರುಳಿವೆ. 25 ವಿದ್ಯುತ್ ಕಂಬಗಳು ಹಾನಿಗೀಡಾಗಿವೆ. ಸಂತ್ರಸ್ತ ರಿಗೆ ಮುಟ್ಲುಪಾಡಿ ಸರಕಾರಿ ಶಾಲೆ ಯಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದೆ.
ಕುಂದಾಪುರ: ಮನೆ ಹಾನಿ
ಕುಂದಾಪುರ: ತಾಲೂಕಿನೆಲ್ಲೆಡೆ ಬುಧವಾರ ಮಳೆ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಿತ್ತು. ಮಂಗಳವಾರ ರಾತ್ರಿ ಸುರಿದ ಮಳೆಗೆ ಹಲವೆಡೆಗಳಲ್ಲಿ ಮನೆಗಳಿಗೆ ಹಾನಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Friendship: ಸ್ನೇಹವೇ ಸಂಪತ್ತು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.