ಉಡುಪಿ ಜಿಲ್ಲೆ: ಶೇ. 98.15ರಷ್ಟು ಪಠ್ಯಪುಸ್ತಕ ಸರಬರಾಜು
Team Udayavani, Jul 13, 2018, 6:00 AM IST
ಉಡುಪಿ: ಸರಕಾರದ ವತಿಯಿಂದ ಪ್ರಸ್ತುತ ಶೈಕ್ಷಣಿಕ ಸಾಲಿನ ಜಿಲ್ಲೆಯಾದ್ಯಂತದ ಸರಕಾರಿ ಪ್ರಾ./ಪ್ರೌಢಶಾಲೆಗಳಿಗೆ ಶೇ. 98.15ರಷ್ಟು ಪಠ್ಯಪುಸ್ತಕ ಸರಬರಾಜು ಆಗಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಪಠ್ಯಪುಸ್ತಕ ವಿತರಣೆಯಾಗಿಲ್ಲ.
ಬುಕ್ ಬ್ಯಾಂಕ್ ಮೂಲಕ ವಿತರಣೆ ಕಳೆದ ವರ್ಷದ ಸ್ಯಾಟ್ಸ್ (ಸ್ಟೂಡೆಂಟ್ ಎಚೀವ್‌ಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್) ಆಧಾರದ ಮೂಲಕ ವಿದ್ಯಾರ್ಥಿಗಳ ಸಂಖ್ಯೆ ಗಳಿಗೆ ಅನುಗುಣವಾಗಿ ಇಂಡೆಂಟನ್ನು ಸರಕಾರವೇ ನೀಡಿ ಪಠ್ಯಪುಸ್ತಕ ಸರಬರಾಜಾಗಿದೆ. ಎಸೆಸೆಲ್ಸಿ ಬದಲಾದ ಪಠ್ಯಪುಸ್ತಕಗಳಲ್ಲಿ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಪಠ್ಯಪುಸ್ತಕಗಳು ಸ್ವಲ್ಪ ಕೊರತೆಯಾಗಿದೆ. ಇದೂ ಹಿಂದಿನ ಸ್ಯಾಟ್ಸ್ ಆಧಾರದಲ್ಲಿ ಸರಬರಾಜಾಗಿದೆ.
ಉಳಿದ ತರಗತಿಗಳಿಗೆ ಹಿಂದಿನ ವರ್ಷದ ಪುಸ್ತಕಗಳನ್ನು “ಬುಕ್ ಬ್ಯಾಂಕ್’ ಮಾಡಿ ವಿತರಿಸಲಾಗಿದೆ. ಮುದ್ರಣ ಸಂಸ್ಥೆಗಳಿಂದ ಇನ್ನೂ ಸರಬರಾಜು ಆಗದ್ದರಿಂದ ಪುಸ್ತಕ ಹಂಚಿಕೆಯಾಗಿಲ್ಲ.
ಯಾವುದೆಲ್ಲ ಬರಲು ಬಾಕಿ?
3ನೇ ತರಗತಿಯ ಇಂಗ್ಲಿಷ್, 2 ಮತ್ತು 4ನೇ ತರಗತಿಯ ಕಲಿಕಾ ಕನ್ನಡ, ಪ್ರಥಮ ಭಾಷಾ ಪಠ್ಯಪುಸ್ತಕ (ಸಂಸ್ಕೃತ, ಉರ್ದು ಇತ್ಯಾದಿ) ಬಾಕಿ ಇವೆ. ಭಾಷಾ ವಿಷಯದಲ್ಲಿ ಕೆಲವೇ ಪುಸ್ತಕಗಳು ಬರಲು ಬಾಕಿ ಇವೆ.
ಶೂ/ಸಾಕ್ಸ್ ವಿತರಣೆಗೆ ಚಾಲನೆ
ವಿದ್ಯಾರ್ಥಿಗಳಿಗೆ ಗುಣಮಟ್ಟದ ಪಾದರಕ್ಷೆಗಳನ್ನು ಸ್ಥಳೀಯ ಮಟ್ಟದಲ್ಲಿ ಖರೀದಿಸಿ ವಿತರಿಸುವ ಜವಾಬ್ದಾರಿಯನ್ನು ಆಯಾಯಾ ಶಾಲಾಭಿವೃದ್ಧಿ/ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ)ಗಳಿಗೆ ವಹಿಸಲಾಗಿದೆ. ಎಸ್‌ಡಿಎಂಸಿ ಖರೀದಿ ಸಮಿತಿ ರಚಿಸಿ, ಅದರ ಮೂಲಕವೇ ಖರೀದಿ ಪ್ರಕ್ರಿಯೆ ನಡೆಸಿ ವಿತರಿಸುವಂತೆ ಇಲಾಖೆ ಸೂಚಿಸಿದೆ. 1 ಜೊತೆ ಕಪ್ಪು ಬಣ್ಣದ ಶೂ, 2 ಜೊತೆ ಬಿಳಿ ಬಣ್ಣದ ಕಾಲು ಚೀಲ ಖರೀದಿಸುವಾಗ ಉತ್ತಮ ಗುಣಮಟ್ಟದವುಗಳನ್ನೇ ಖರೀದಿಸಿ ವಿತರಿಸುವ ನಿಟ್ಟಿನಲ್ಲಿ ಉತ್ತಮ ಗುಣಮಟ್ಟ ಕಾಯ್ದಿರಿಸಲು ಎಫ್ಡಿಡಿಐ (ನೋಯಿಡಾ)ರವರು ನೀಡಿರುವ ತಾಂತ್ರಿಕ ಗುಣಮಟ್ಟವನ್ನು ಅನುಸರಿಸುವಂತೆ ಇಲಾಖೆಯಿಂದ ಸೂಚನೆಯಿದೆ. ಹಿಂದಿನ ವರ್ಷದ ಸ್ಯಾಟ್ಸ್ ಆಧಾರದಲ್ಲಿ ಎಸ್‌ಡಿಎಂಸಿ ಖಾತೆಗೆ ಸರಕಾರವೇ ನೇರವಾಗಿ ಹಣ ಜಮಾ ಮಾಡಿದೆ.
ಜು. 31ರೊಳಗೆ ಸೂಚನೆ
ಭಾಷಾ ವಿಷಯದಲ್ಲಿ ಕೆಲವೇ ಪಠ್ಯಪುಸ್ತಗಳ ಮಾತ್ರ ಬರಲು ಬಾಕಿಯಿದ್ದು, ಈ ವಾರವೇ ಕೈ ಸೇರಲಿದೆ ಎನ್ನುವ ನಿರೀಕ್ಷೆಯಲ್ಲಿದ್ದೇವೆ. ಶೂ/ಸಾಕ್ಸ್ ವಿತರಣೆಗೆ ಸಂಬಂಧಿಸಿದಂತೆ ಎಸ್‌ಡಿಎಂಸಿಗೆ ಪೂರ್ಣ ಜವಾಬ್ದಾರಿ ವಹಿಸಲಾಗಿದ್ದು, ಜು. 31ರೊಳಗೆ ಉತ್ತಮ ಗುಣಮಟ್ಟದ ಶೂ/ಸಾಕ್ಸ್ ಖರೀದಿಸಿ ವಿತರಿಸುವಂತೆ ಸೂಚಿಸಲಾಗಿದೆ. – ಶೇಷಶಯನ ಕಾರಿಂಜ, ಡಿಡಿಪಿಐ
– ಎಸ್.ಜಿ. ನಾಯ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.