ಕಟಪಾಡಿ: ಉಡುಪಿ ಜಿಲ್ಲಾ ಬಿಲ್ಲವ ಸಮುದಾಯ ಭವನ ಉದ್ಘಾಟಿಸಿದ ಸಿಎಂ
Team Udayavani, Jan 10, 2018, 12:33 PM IST
ಕಾಪು/ಕಟಪಾಡಿ: ಕಟಪಾಡಿ ಶ್ರೀ ವಿಶ್ವ ನಾಥ ಕ್ಷೇತ್ರದಲ್ಲಿ ರಾಜ್ಯ ಸರಕಾರದ 1 ಕೋ. ರೂ. ಅನುದಾನದ ಸಹಿತ ಸುಮಾರು 3 ಕೋ. ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಹವಾನಿಯಂತ್ರಿತ ಉಡುಪಿ ಜಿಲ್ಲಾ ಬಿಲ್ಲವ ಸಮುದಾಯ ಭವನವನ್ನು ಸಿಎಂ ಸಿದ್ದರಾಮಯ್ಯ ಜ.8ರಂದು ಉದ್ಘಾಟಿಸಿದರು.
ಪ್ರಥಮ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಅವರು ಶ್ರೀ ವಿಶ್ವನಾಥ ದೇವರ ದರ್ಶನ ಪಡೆದರು. ಅನಂತರ ಕ್ಷೇತ್ರದ ಅರ್ಚಕರು ಮತ್ತು ಕ್ಷೇತ್ರಾಡಳಿತ ಮಂಡಳಿಯ ಪದಾಧಿಕಾರಿಗಳ ಬಳಿ ನಾರಾಯಣ ಗುರುಗಳ ತತ್ವ, ಆದರ್ಶ ಮತ್ತು ಸಂದೇಶಗಳ ಅನುಷ್ಠಾನ ಸಮರ್ಪಕವಾಗಿ ನಡೆಯುತ್ತಿದೆಯೇ ಎಂಬ ಮಾಹಿತಿ ಪಡೆದು, ನಾರಾಯಣ ಗುರುಗಳ ದರ್ಶನ ಕೈಗೊಂಡು, ಪೂಜೆಯಲ್ಲಿ ಪಾಲ್ಗೊಂಡರು. ಕ್ಷೇತ್ರ ನವೀಕರಣ ಸಮಿತಿಯ ಗೌರವಾಧ್ಯಕ್ಷ, ಶಾಸಕ ವಿನಯಕುಮಾರ್ ಸೊರಕೆ ಮುಖ್ಯಮಂತ್ರಿಗಳಿಗೆ ಕ್ಷೇತ್ರ ನವೀಕರಣ ಮತ್ತು ಕ್ಷೇತ್ರದ ವತಿಯಿಂದ ನಡೆಸಿಕೊಂಡು ಬರಲಾಗುತ್ತಿರುವ ಅಭಿವೃದ್ಧಿಯ ಸೇವೆಗಳ ಕುರಿತು ಮಾಹಿತಿ ನೀಡಿದರು.
ಸಚಿವ ಪ್ರಮೋದ್ ಮಧ್ವರಾಜ್, ಕೆಪಿಸಿಸಿ ಕಾದರ್ಶಿ ರಾಜಶೇಖರ್ ಕೋಟ್ಯಾನ್, ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಅಶೋಕ್ ಎಂ. ಸುವರ್ಣ, ಗೌ. ಪ್ರ. ಕಾರ್ಯದರ್ಶಿ ಹರಿಶ್ಚಂದ್ರ ಅಮೀನ್, ಕೋಶಾಧಿಕಾರಿ ಮಾಧವ ಅಂಚನ್, ಪದಾಧಿ ಕಾರಿಗಳಾದ ರತ್ನಾಕರ ಅಂಚನ್, ರಾಘು ಪೂಜಾರಿ ಕಲ್ಮಂಜೆ, ಇಂದುಶೇಖರ ಸುವರ್ಣ, ದಿವಾಕರ ಬಿ. ಸನಿಲ್, ಸದಾನಂದ ಅಮೀನ್, ರಮೇಶ್ ಕೋಟ್ಯಾನ್, ಮಾಜಿ ಅಧ್ಯಕ್ಷ ದಯಾನಂದ ವಿ. ಬಂಗೇರ, ಮಾಜಿ ಕಾರ್ಯದರ್ಶಿ ದೇವಪ್ಪ ಪೂಜಾರಿ, ಗಂಗಾಧರ ಸುವರ್ಣ, ಮಾಜಿ ಜಿ.ಪಂ. ಅಧ್ಯಕ್ಷರಾದ ಸರಸು ಡಿ. ಬಂಗೇರ, ಶಂಕರ ಪೂಜಾರಿ, ಜಿ.ಪಂ. ಸದಸ್ಯರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ಕಾಂಗ್ರೆಸ್ ಮುಖಂಡರಾದ ದೀಪಕ್ ಕುಮಾರ್ ಎರ್ಮಾಳ್, ಶಿವಾಜಿ ಎಸ್. ಸುವರ್ಣ, ಕಾಪು ದಿವಾಕರ ಶೆಟ್ಟಿ, ವಿಶ್ವಾಸ್ ಅಮೀನ್, ಕ್ಷೇತ್ರಾಡಳಿತ ಮಂಡಳಿ, ನವೀಕರಣ ಸಮಿತಿ, ನಾರಾಯಣ ಗುರು ಸೇವಾದಳ, ಮಹಿಳಾ ಬಳಗದ ಪದಾಧಿಕಾರಿಗಳು, ಕೂಡುಕಟ್ಟಿನ ಗುರಿಕಾರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮ ರದ್ದು ; ಕ್ಷೇತ್ರಾಡಳಿತ ಮಂಡಳಿ ಸ್ಪಷ್ಟನೆ
ಶಾಸಕ ವಿನಯ ಕುಮಾರ್ ಸೊರಕೆ ಮತ್ತು ಸಚಿವ ಪ್ರಮೋದ್ ಅವರು ವಿಶೇಷ ಆಸಕ್ತಿ ವಹಿಸಿ ಜಿಲ್ಲಾ ಸಮುದಾಯ ಭವನ ಉದ್ಘಾಟನೆಗೆ ಮುಖ್ಯಮಂತ್ರಿ ಅವರನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದರು. ಮುಖ್ಯಮಂತ್ರಿಗಳು ಸಮುದಾಯ ಭವನವನ್ನು ಉದ್ಘಾಟಿಸಿದ ಬಳಿಕ ಅವರ ಮಾತು ಕೇಳಲೆಂದು ಅನೇಕರು ಸಮುದಾಯ ಭವನದ ಒಳಗೆ ಕಾದು ಕುಳಿತಿದ್ದರಾದರೂ ಭದ್ರತೆಯ ದೃಷ್ಟಿಯಿಂದ ಸಭಾ ಕಾರ್ಯಕ್ರಮ ನಡೆಸಲು ಅನನುಕೂಲ ಉಂಟಾಯಿತು. ಹೀಗಾಗಿ ಸಭಾ ಕಾರ್ಯಕ್ರಮವನ್ನು ಕೊನೆಯ ಕ್ಷಣದಲ್ಲಿ ರದ್ದುಪಡಿಸಬೇಕಾಯಿತು ಎಂದು ಕ್ಷೇತ್ರಾಡಳಿತ ಮಂಡಳಿ ಸ್ಪಷ್ಟೀಕರಣ ನೀಡಿದೆ.
ಹೂಗುಚ್ಛ ನೀಡಿದ ಮುಸ್ಲಿಂ ಮಹಿಳೆ; ಸಿಎಂ ಮೆಚ್ಚುಗೆ
ಪ್ರಥಮ ಬಾರಿಗೆ ಕಟಪಾಡಿ ವಿಶ್ವನಾಥ ಕ್ಷೇತ್ರಕ್ಕೆ ಆಗಮಿಸಿ, ಹಿಂದಿರುಗುವ ವೇಳೆ ಸಿದ್ದರಾಮಯ್ಯ ಅವರಿಗೆ ಮೈಮುನಾ ಹೂಗುತ್ಛ ನೀಡಿ ಸ್ವಾಗತ
ಕೋರಿದ್ದು, ಆ ಬಗ್ಗೆ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿ ದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶದಂತೆ ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿ ಇದೇ
ಮಾದರಿಯಲ್ಲಿ ಜಾತ್ಯತೀತ ತತ್ವ ಹಾಗೂ ಸೌಹಾರ್ದ ಮನೋಭಾವವನ್ನು ಮುಂದುವರಿಸಿ ಕೊಂಡು ಹೋಗುವಂತೆ ಕ್ಷೇತ್ರಾಡಳಿತ ಮಂಡ ಳಿಯ ಪದಾಧಿಕಾರಿಗಳಿಗೆ ಕರೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.