ಉಡುಪಿ ಜಿಲ್ಲೆ : ಬಂದ್‌ಗೆ ಮಿಶ್ರ ಪ್ರತಿಕ್ರಿಯೆ; ಜನ ಸಂಚಾರ ವಿರಳ
Team Udayavani, Sep 11, 2018, 12:01 PM IST
ಉಡುಪಿ: ಸೋಮವಾರ ನಡೆದ ಬಂದ್‌ಗೆ ಜಿಲ್ಲೆಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧೆಡೆ ಬಂದ್ ಪರ ಮತ್ತು ವಿರೋಧದ ಘೋಷಣೆಗಳು ಕೇಳಿಬಂದವು. ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದ ಕಾರಣ ಗೊಂದಲ ಇರಲಿಲ್ಲ. ಸರಕಾರಿ ಮತ್ತು ಬ್ಯಾಂಕ್ ಇತ್ಯಾದಿ ಕಚೇರಿಗಳು ಬಿಕೋ ಎನ್ನುತ್ತಿದ್ದವು. ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರು ಬಂದ್ ನಡೆಸಲು ಮನವಿ ಮಾಡಿದರು, ಬಿಜೆಪಿಯವರು ಬಲಾತ್ಕಾರದ ಬಂದ್ ಆಚರಿಸಬಾರದು ಎಂದು ಆಗ್ರಹಿಸಿದರು.
ಉಡುಪಿ ತಾಲೂಕು
ಉಡುಪಿ ನಗರದಲ್ಲಿ ಬಂದ್‌ಗೆ ಪರ – ವಿರೋಧ ಬಹಿರಂಗವಾಗಿ ವ್ಯಕ್ತವಾಯಿತು. ಬಹುತೇಕ ಅಂಗಡಿ, ಹೊಟೇಲ್‌ಗಳು ಬಂದ್ ಆಗಿದ್ದವು. ಬಸ್ ಸಂಚಾರ ವಿರದ ಕಾರಣ ಜನಸಂಚಾರ ವಿರಳವಿತ್ತು. ಆಟೋ ರಿಕ್ಷಾಗಳು ಕೆಲವೆಡೆ ಬಂದ್ ಆಚರಿಸಲಿಲ್ಲ. ಬಂದ್ ಘರ್ಷಣೆ ವೇಳೆ ಕಾರ್ಯಕರ್ತರು ಗಾಯಗೊಂಡದ್ದು, ಎಸ್‌ಪಿ ಕಚೇರಿ ಎದುರು ಎಸ್‌ಪಿಯವರೇ ಸ್ವತಃ ಲಾಠಿ ಬೀಸಬೇಕಾಗಿ ಬಂದದ್ದು ಸೋಮವಾರದ ಕಪ್ಪುಚುಕ್ಕೆ.
ಕುಂದಾಪುರ, ಬೈಂದೂರು
ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಕುಂದಾಪುರ ನಗರದ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ಆದರೆ ತಾಲೂಕಿನ ಇತರೆಡೆ ಭಾಗಶಃ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಖಾಸಗಿ ಹಾಗೂ ಸರಕಾರಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ರಿಕ್ಷಾ ಓಡಾಟ ಸೀಮಿತವಾಗಿತ್ತು. ಜನರ ಓಡಾಟ ವಿರಳ ವಾಗಿತ್ತು. ಕಾಂಗ್ರೆಸ್‌ನವರು ಬಂದ್ ಮಾಡಿಸುವಾಗ, ಬಿಜೆಪಿಯವರು ಅಂಗಡಿ ಪುನಃ ತೆರೆಸುವಾಗ ಪೊಲೀಸರ ಜತೆ ಮಾತಿನ ಚಕಮಕಿ ನಡೆದುದು ಬಿಟ್ಟರೆ ಎಲ್ಲೂ ಅಹಿತಕರ ಘಟನೆ ನಡೆದಿಲ್ಲ. ಎರಡೂ ಪಕ್ಷದವರು ರೋಡ್‌ಶೋ ನಡೆಸಿದರು. ಸಿಪಿಐಎಂ ಕೂಡ ಪ್ರತಿಭಟನೆ ನಡೆಸಿತು.
ಕಾರ್ಕಳ
ಕಾರ್ಕಳ: ತಾಲೂಕಿನಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರದಲ್ಲಿ ಕೆಲವಷ್ಟೇ ಅಂಗಡಿಗಳು ಬಂದ್ ಆಗಿದ್ದು ಹೊರತುಪಡಿಸಿದರೆ ಎಂದಿನಂತೆ ಅಂಗಡಿಗಳು ತೆರೆದಿದ್ದವು. ಬೆಳ್ಮಣ್‌ನಲ್ಲಿ ಹೆಚ್ಚಿನ ಅಂಗಡಿಗಳು ಮುಚ್ಚಿದ್ದವು. ಬಜಗೋಳಿ, ಅಜೆಕಾರು ಭಾಗದಲ್ಲಿ ಕೆಲವಷ್ಟೇ ಅಂಗಡಿಗಳನ್ನು ಮುಚ್ಚಲಾಗಿತ್ತು. ಜನಸಂಖ್ಯೆ ವಿರಳವಾಗಿತ್ತು. ಬಸ್ ನಿಲ್ದಾಣದಲ್ಲಿ ಬಿಕೋ ಅನ್ನುತ್ತಿತ್ತು. ತಾಲೂಕು ಕಚೇರಿ ಸಮೀಪ ಕಾಂಗ್ರೆಸಿಗರು ಪ್ರತಿಭಟಿಸಿ ಧಿಕ್ಕಾರ ಕೂಗಿದರು.
ಕಾಪು
ಕಾಪು: ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಪೊಲಿಪು ಜಂಕ್ಷನ್‌ನಲ್ಲಿ ವಿನಯ ಕುಮಾರ ಸೊರಕೆ ನೇತೃತ್ವದಲ್ಲಿ ಕಾರ್ಯ ಕರ್ತರು ರಾ.ಹೆ. ತಡೆದು ಪ್ರತಿಭಟಿಸಿದರು.
ಬ್ರಹ್ಮಾವರ, ಹೆಬ್ರಿ
ಬ್ರಹ್ಮಾವರ: ಬ್ರಹ್ಮಾವರದ ಬಹುತೇಕ ಅಂಗಡಿಗಳು ಮುಚ್ಚಿದ್ದವು. ಬಂದ್ ಶಾಂತಿಯುತವಾಗಿತ್ತು. ಹೆಬ್ರಿ ಯಲ್ಲಿ ಬಂದ್ ಆಂಶಿಕವಾಗಿತ್ತು. ಕೆಲವು ಅಂಗಡಿ, ಹೊಟೇಲ್‌ಗಳು ಬಂದ್ ಆಗಿದ್ದವು.
ಪತ್ರಿಕೆಗೂ ರಿಯಾಯಿತಿ ನೀಡಿಲ್ಲ
ಮಂಗಳೂರು/ಉಡುಪಿ: ಸಾಮಾನ್ಯವಾಗಿ ಬಂದ್ ಸಂದರ್ಭ ಪತ್ರಿಕೆಗಳ ಮಾರಾಟಕ್ಕೆ ಅಡ್ಡಿ ಮಾಡುವುದಿಲ್ಲ. ಆದರೆ ಸೋಮವಾರ ಭಾರತ ಬಂದ್ ವೇಳೆ ದಕ್ಷಿಣ ಕನ್ನಡ, ಉಡುಪಿಯಲ್ಲಿ ಹಲವೆಡೆ ಪತ್ರಿಕೆ ಅಂಗಡಿಗಳನ್ನು ಕೂಡ ಬಂದ್ ಮಾಡಿಸಲಾಯಿತು. ಒಮ್ಮೆ ತೆರೆದ ಅಂಗಡಿಗಳನ್ನು ಮುಚ್ಚಿಸಲಾಯಿತು. ಮತ್ತೆ ಕೆಲವರು ಅಂಗಡಿ ತೆರೆದು ಪತ್ರಿಕೆ ಮಾರಾಟ ಮಾಡಲು ಮುಂದಾ ದರು. ಆದರೆ ಮತ್ತೂಮ್ಮೆ ಬಂದ್ ಮಾಡಿಸ ಲಾ ಯಿತು. ಅಂತಿಮವಾಗಿ ಸಂಜೆ ವೇಳೆ ಕೆಲವರು ಪತ್ರಿಕೆ ಮಾರಾಟ ಮಾಡಬೇಕಾಯಿತು.
ಬಂದ್ ವೇಳೆ ದೌರ್ಜನ್ಯ: ಮಹಿಳೆ ದೂರು
ಉಡುಪಿ: “ಕಡಿಯಾಳಿಯ ಹೊಟೇಲ್‌ನಲ್ಲಿ ತಿಂಡಿ ತಿನ್ನುತ್ತಿದ್ದಾಗ ಬಲವಂತವಾಗಿ ಬಂದ್ ಮಾಡಲು ಬಂದ ಕಾಂಗ್ರೆಸ್ ಕಾರ್ಯಕರ್ತರು ನನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ’ ಎಂದು ಚೈತ್ರಾ ಕುಂದಾಪುರ ಅವರು ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
“ಬೆಳಗ್ಗೆ 9ಕ್ಕೆ ಹೊಟೇಲ್‌ನಲ್ಲಿ ತಿಂಡಿ ತಿನ್ನುತ್ತಿದ್ದಾಗ ಕಾಂಗ್ರೆಸ್ ಕಾರ್ಯಕರ್ತರಾದ ರಮೇಶ್ ಕಾಂಚನ್, ಶೇಖರ್ ಜಿ.ಕೋಟ್ಯಾನ್, ಜನಾರ್ದನ ಭಂಡಾರ್‌ಕರ್, ಜ್ಯೋತಿ ಹೆಬ್ಟಾರ್, ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರಾ, ಪ್ರಶಾಂತ್ ಪೂಜಾರಿ ಮತ್ತು ಇತರರು ಹೊಟೇಲ್‌ಗೆ ಬಂದರು. ನಾನು ಮೋದಿಗೆ ಜೈಕಾರ ಹಾಕಿದಾಗ ಯತೀಶ್ ಕರ್ಕೆರ ನನ್ನ ಕೈ ಹಿಡಿದು ಎಳೆದರು. ಜ್ಯೋತಿ ಹೆಬ್ಟಾರ್ ಅಸಭ್ಯವಾಗಿ ಹೇಳಿ ನಿಂದಿಸಿದ್ದಾರೆ. ಇತರರು ತಳ್ಳಿ ಮುಂದಕ್ಕೆ ನೋಡಿ ಕೊಳ್ಳುತ್ತೇವೆ ಎಂದು ಜೀವಬೆದರಿಕೆ ಹಾಕಿದ್ದಾರೆ’ ಎಂದು ದೂರು ನೀಡಿದ್ದಾರೆ.
ಬಲವಂತದ ಬಂದ್: ದೂರು
“ಸೋಮವಾರ ಬೆಳಗ್ಗೆ 8.30ಕ್ಕೆ ಅಂಗಡಿ ಬಾಗಿಲು ತೆರೆದು ವ್ಯವಹಾರ ಮಾಡುತ್ತಿದ್ದಾಗ 9.15ರ ವೇಳೆಗೆ ಬಂದ ರಮೇಶ್ ಕಾಂಚನ್ ಮತ್ತು ಇತರ 25ರಿಂದ 30 ಮಂದಿ ಅಂಗಡಿಯ ಶಟರ್‌ನ್ನು ಬಲಾತ್ಕಾರದಿಂದ ಅರ್ಧಕ್ಕೆ ಮುಚ್ಚಿ ಅಂಗಡಿ ಮುಚ್ಚಬೇಕು ಎಂದು ಹೇಳಿ ವ್ಯಾಪಾರ ಮಾಡದಂತೆ ತಡೆಯೊಡ್ಡಿದರು’ ಎಂದು ಕಲ್ಸಂಕ ಜಂಕ್ಷನ್ ಬಳಿ ಇರುವ ಪೈಂಟ್ ಹೌಸ್ ಅಂಗಡಿ ಮಾಲಕ ಜಯಾನಂದ ಅವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಕೆ.ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.