ಉಡುಪಿ ಜಿಲ್ಲಾ ಭಾಗದ ಅಪರಾಧ ಸುದ್ದಿಗಳು


Team Udayavani, Jun 18, 2022, 1:15 AM IST

ಉಡುಪಿ ಜಿಲ್ಲಾ ಭಾಗದ ಅಪರಾಧ ಸುದ್ದಿಗಳು

ಗಾಂಜಾ ಸೇವನೆ: ಓರ್ವ ವಶಕ್ಕೆ
ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಕಿನ್ನಿಮೂಲ್ಕಿಯ ಮೊಹಮ್ಮದ್‌ ಪರ್ವೆಜ್‌ (23)ನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಸೆನ್‌ ಪೊಲೀಸ್‌ ಉಪನಿರೀಕ್ಷಕ ಲಕ್ಷ್ಮಣ ಅವರು ಕರ್ತವ್ಯದಲ್ಲಿದ್ದಾಗ ಈತನನ್ನು ವಶಕ್ಕೆ ಪಡೆದಿದ್ದಾರೆ. ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ ಢಿಕ್ಕಿ: ಮಹಿಳೆಗೆ ಗಾಯ
ಉಡುಪಿ: ಬೈಕ್‌ ಢಿಕ್ಕಿ ಹೊಡೆದು ಪಾದಚಾರಿ ಮಹಿಳೆ ಗಾಯಗೊಂಡ ಘಟನೆ ನಡೆದಿದೆ. ಮೂಲತಃ ಗದಗ ಜಿಲ್ಲೆಯ ರೇಣವ್ವ ಫ‌ಕಿರೇಶ್‌ ಗಾನಿಗೇರ್‌ ಅವರು ನಾದಿನಿ ನೇತ್ರಾವತಿ ಅವರೊಂದಿಗೆ ಕಲ್ಸಂಕದಲ್ಲಿ ನಿಂತ ವೇಳೆ ಅಂಬಾಗಿಲು ಕಡೆಯಿಂದ ಕಲ್ಸಂಕದ ಕಡೆ ಅತೀ ವೇಗದಿಂದ ಆಗಮಿಸಿದ ಬುಲೆಟ್‌ ಸವಾರ ನೇತ್ರಾವತಿಯವರಿಗೆ ಢಿಕ್ಕಿ ಹೊಡೆದ ಪರಿಣಾಮ ಘವರು ರಸ್ತೆಗೆ ಬಿದ್ದು, ಕೈ ಕಾಲುಗಳಿಗೆ ತರಿಚಿದ ಗಾಯವಾಗಿದೆ. ಸವಾರ ಬುಲೆಟ್‌ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅನಂತರ ನೇತ್ರಾವತಿಯವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು -ಬೈಕ್‌ ಢಿಕ್ಕಿ: ಸವಾರನಿಗೆ ಗಾಯ
ಉಡುಪಿ: ಬೈಕ್‌ಗೆ ಕಾರು ಢಿಕ್ಕಿ ಹೊಡೆದು ಬೈಕ್‌ ಸವಾರ ಗಾಯಗೊಂಡ ಘಟನೆ ನಡೆದಿದೆ. ಹಾವಂಜೆಯ ಜೋಯ್ಸನ್‌ ಕ್ಲೇರೆನ್ಸ್‌ ಡಿ’ಆಲ್ಮೇಡಾ ಅವರು ಬೈಕ್‌ನಲ್ಲಿ ಮಣಿಪಾಲ- ಕೊಳಲಗಿರಿ ಮಖ್ಯ ರಸ್ತೆಯಲ್ಲಿ ಹೋಗುತ್ತಿರುವಾಗ ಶಿಂಬ್ರಾದ ವ್ಯಾಲಿ ವ್ಯೂ ಕೌಂಟಿ ಕ್ಲಬ್‌ ಬಳಿ ಕೊಳಲಗಿರಿ ಕಡೆಯಿಂದ ಮಣಿಪಾಲ ಕಡೆಗೆ ಬರುತ್ತಿದ್ದ ಕಾರು ಬೈಕ್‌ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಜೋಯ್ಸನ್‌ ಬೈಕ್‌ ಸಹಿತ ರಸ್ತೆಗೆ ಬಿದ್ದಿದ್ದು ಅವರ ಬಲಗಾಲಿನ ಮೂಳೆ ಮುರಿತ ಹಾಗೂ ಎಡಗಾಲಿನ ಮೊಣಗಂಟಿಗೆ ತರಚಿದ ಗಾಯ ಉಂಟಾಗಿದೆ. ಅಪಘಾತದಲ್ಲಿ ಎರಡು ವಾಹನಗಳು ಜಖಂಗೊಂಡಿವೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೂಲಿ ಕಾರ್ಮಿಕಳಿಗೆ ಜೀವ ಬೆದರಿಕೆ
ಪಡುಬಿದ್ರಿ: ಕಂಚಿನಡ್ಕ ಪರಿಸರದ ಕೂಲಿ ಕಾರ್ಮಿಕ ಮಹಿಳೆಯೋರ್ವರೊಂದಿಗೆ ಸ್ಮಾರ್ಟ್‌ ಫೋನ್‌ನ ಸ್ಟೇಟಸ್‌ನಲ್ಲಿನ ಸಂಜ್ಞಾ ಸಂವಾದ ಕುರಿತಾಗಿ ಉಂಟಾದ ತಪ್ಪು ಕಲ್ಪನೆಯಿಂದ ಆಕೆಗೆ ಫೋನ್‌ ಕರೆ ಮಾಡಿ “ಬರ್ತಿಯಾ’ ಎಂದು ಕೇಳಿದ ಕಂಚಿನಡ್ಕದ ಆರೋಪಿ ನಿಕೇಶ (27) ಮಹಿಳೆಯ ನಕಾರಾತ್ಮಕ ಉತ್ತರಕ್ಕೆ ಕೋಪಗೊಂಡು ಆಕೆಗೆ ಬೈದು ಜೀವ ಬೆದರಿಕೆಯೊಡ್ಡಿದ ಬಗ್ಗೆೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.

ಕಳೆದ ಮಂಗಳವಾರ ಮೊಬೈಲ್‌ನಲ್ಲಿ 500 ರೂ. ನೋಟಿನ ಚಿತ್ರವನ್ನೂ ಮಹಿಳೆಗೆ ರವಾನಿಸಿದ್ದ ಆರೋಪಿಯ ಸಂಜ್ಞಾ ಸಂದೇಶದ ಅರ್ಥವನ್ನು ಅರಿಯದೇ ಹಾನಗಲ್‌ ತಾ| ಕೂಲಿ ಕಾರ್ಮಿಕ ಮಹಿಳೆ “ಏನಿದು’ ಎಂಬಂತೆ ಥಮ್ಸ್‌ ಅಪ್‌ ನೀಡಿದ್ದರು. ಆರೋಪಿಯು ಇದಕ್ಕೆ “ಓಕೆ’ ಎಂದು ಉತ್ತರಿಸಿ ಮಹಿಳೆಗೆ ಕರೆ ಮಾಡಿದ್ದನು. ಆ ಕರೆಯ ಅರ್ಧದಲ್ಲೇ ಸಮೀಪದಲ್ಲಿದ್ದ ಇನ್ನೋರ್ವ ವ್ಯಕ್ತಿ ಆರೋಪಿ ನಿಕೇಶನಿಗೆ ಉತ್ತರಿಸಿದ್ದರು. ಇದಕ್ಕೆ ಕೋಪಗೊಂಡಿದ್ದ ಆರೋಪಿಯು ಮಹಿಳೆಯನ್ನು ಅಡ್ಡಗಟ್ಟಿ ಬೈದು ಪೊಲೀಸರಿಗೆ ತಿಳಿಸಿದ್ದಲ್ಲಿ ಪರಿಣಾಮ ನೆಟ್ಟಗಿರದು ಎಂದು ಜೀವ ಬೆದರಿಕೆಯನ್ನೂ ಒಡ್ಡಿರುವುದಾಗಿ ಪೊಲೀಸರಿಗಿತ್ತ ದೂರಲ್ಲಿ ತಿಳಿಸಲಾಗಿದೆ.

ಬೈಕ್‌ ಕಳ್ಳರಿಗೆ ಜಾಮೀನು
ಕುಂದಾಪುರ: ಕೋಟ ಪೊಲೀಸ್‌ ಠಾಣೆ ವ್ಯಾಪ್ತಿ ಸೇರಿದಂತೆ ಬ್ರಹ್ಮಾವರ, ಉಡುಪಿ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ವ್ಯಾಪ್ತಿಯಲ್ಲಿ 15 ಕ್ಕೂ ಹೆಚ್ಚು ಬೈಕ್‌ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಾದ ಶಂಕರ್‌ ಗೌಡ ಹಾಗೂ ಸೋಮಶೇಖರ್‌ಗೆ ಕುಂದಾಪುರ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ಆರೋಪಿಗಳು ರಾಯಚೂರು ಹಾಗೂ ಬಾಗಲಕೋಟೆ ಮೂಲದವ ರಾಗಿದ್ದು ಸುಲಭವಾಗಿ ಹಣ ಸಂಪಾದಿಸಲು ಬೈಕ್‌ ಕಳವಿಗೆ ಇಳಿದಿದ್ದರು ಎನ್ನಲಾಗಿತ್ತು. ಆರೋಪಿ ಗಳ ಪರವಾಗಿ ಕುಂದಾಪುರದ ನ್ಯಾಯವಾದಿಗಳಾದ ಶ್ಯಾಮಸುಂದರ್‌ ನಾಯರಿ ಹಾಗೂ ನೀಲ್‌ ಬ್ರಿಯಾನ್‌ ಪಿರೇರಾ ವಾದಿಸಿದ್ದರು.

ಟಾಪ್ ನ್ಯೂಸ್

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-udupi

Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್‌.ಆರ್‌.

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Shirva: ಮಲಗಿದಲ್ಲೇ ವ್ಯಕ್ತಿ ಸಾವು; ಪ್ರಕರಣ ದಾಖಲು

Shirva: ಮಲಗಿದಲ್ಲೇ ವ್ಯಕ್ತಿ ಸಾ*ವು; ಪ್ರಕರಣ ದಾಖಲು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.