ಎನ್ಆರ್ಎಚ್ಎಂನಿಂದ 1.5 ಕೋ.ರೂ. ವೆಚ್ಚದ ಯೋಜನೆ
Team Udayavani, Jun 17, 2018, 6:00 AM IST
ಉಡುಪಿ: ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಅತ್ಯಾಧುನಿಕವಾದ ಕಣ್ಣಿನ ಶಸ್ತ್ರಚಿಕಿತ್ಸಾ ಕೇಂದ್ರ ಮಂಜೂರಾಗಿದೆ. ಸುಮಾರು 1.5 ಕೋ.ರೂ. ವೆಚ್ಚದಲ್ಲಿ ಹೊಸ ಕಟ್ಟಡ ಸಮೇತವಾಗಿ ಕೇಂದ್ರ ನಿರ್ಮಾಣಗೊಳ್ಳಲಿದೆ. ಪ್ರಸ್ತುತ ಜಿಲ್ಲಾಸ್ಪತ್ರೆಯಲ್ಲಿ ಆಥೊì ಪೆಡಿಕ್, ಸರ್ಜರಿ ಒಟಿ ಮತ್ತು ಐ ಒಟಿಗಳಿವೆ. ಇವುಗಳ ಮೂಲಕ ಸಾವಿರಾರು ಮಂದಿಗೆ ಸೇವೆ ಒದಗಿಸಲಾಗು ತ್ತಿದೆ. ಆದರೆ ಪ್ರತ್ಯೇಕ, ಸಂಪೂರ್ಣ ಸುಸಜ್ಜಿತ ಕೇಂದ್ರಗಳಿಲ್ಲ. ಹೊಸ “ಮಾಡ್ಯುಲರ್ ಒಟಿ ಸೆಂಟರ್’ ಪ್ರತ್ಯೇಕವಾದ ಮತ್ತು ಆಧುನಿಕ ಶಸ್ತ್ರಚಿಕಿತ್ಸಾ ಕೇಂದ್ರವಾಗಿರುತ್ತದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
1 ಕೋ.ರೂ. ಬಿಡುಗಡೆ
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್ಆರ್ಎಚ್ಎಂ) ಮೂಲಕವಾಗಿ ಯೋಜನೆ ಕಾರ್ಯ ಗತಗೊಳ್ಳಲಿದೆ. ಈಗಾಗಲೇ ಒಂದು ಕೋ.ರೂ. ಬಿಡುಗಡೆಯಾಗಿದೆ. ಇನ್ನೂ ಕನಿಷ್ಠ 50 ಲ.ರೂ.ಗಳ ಅಗತ್ಯ ಇರುವ ಬಗ್ಗೆ ಅಧಿಕಾರಿಗಳು ಎನ್ಆರ್ಎಚ್ಎಂಗೆ ತಿಳಿಸಿದ್ದಾರೆ. ಆ ಮೊತ್ತ ಕೂಡ ಹಂತ ಹಂತವಾಗಿ ಬಿಡುಗಡೆಗೊಳಿಸುವ ಕುರಿತು ಎನ್ಆರ್ಎಚ್ಎಂ ಭರವಸೆ ನೀಡಿದೆ.
ವರ್ಷಕ್ಕೆ 500-600 ಸರ್ಜರಿ
ಪ್ರಸ್ತುತ ಜಿಲ್ಲಾಸ್ಪತ್ರೆಯಲ್ಲಿ ಇಬ್ಬರು ನೇತ್ರ ತಜ್ಞರಿದ್ದು, ವರ್ಷಕ್ಕೆ 500-600 ಮಂದಿಗೆ ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ದಿನಕ್ಕೆ ನೂರರಷ್ಟು ಮಂದಿ ಕಣ್ಣಿನ ತಪಾಸಣೆ, ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವವರಲ್ಲಿ ನೇತ್ರ ತಪಾಸಣಾ ಶಿಬಿರಗಳ ಮೂಲಕವಾಗಿ ಬರುವ ಶೇ.50ರಷ್ಟು ಮಂದಿ ಹಾಗೂ ನೇರ ವಾಗಿ ಬರುವ ಶೇ.50ರಷ್ಟು ಮಂದಿ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಕೇಂದ್ರ ಶೀಘ್ರವಾಗಿ ಕಾರ್ಯಗತಗೊಂಡು ಜನರಿಗೆ ಸೇವೆ ಒದಗಿಸಬೇಕಾಗಿದೆ. ಜತೆಗೆ ಅಗತ್ಯ ಸಿಬಂದಿ ಹಾಗೂ ಮತ್ತಷ್ಟು ತಜ್ಞ ವೈದ್ಯರ ನೇಮಕವಾಗಬೇಕೆಂಬ ಬೇಡಿಕೆ ಸಾರ್ವಜನಿಕರದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್ಅಪ್
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.