ಭೂ ಅಂತರ,ಸುರಕ್ಷೆ,ಸಾಮರ್ಥ್ಯ ವೃದ್ಧಿಗೆ “ಸ್ಪನ್ ಪೋಲ್’
Team Udayavani, Feb 2, 2019, 12:30 AM IST
ಮಣಿಪಾಲ: ಜಾಗತಿಕ ನಗರಿ ಮಣಿಪಾಲಕ್ಕೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಅಭಿವೃದ್ಧಿಯ ಸ್ಪರ್ಶ ದೊರೆಯುತ್ತಿರುವಂತೆ, ವಿದ್ಯುತ್ ಪೂರೈಸುವ ಮೆಸ್ಕಾಂ ಕೂಡ ಹಳೆಯ ಕಡಿಮೆ ಸಾಮರ್ಥ್ಯದ ಕಂಬ ಹಾಗೂ ವಿದ್ಯುತ್ ತಂತಿಗಳನ್ನು ಬದಲಿಸಲು ಆರಂಭಿಸಿದೆ. ಭೂಮಿಗೂ ವಿದ್ಯುತ್ ತಂತಿಗಳಿಗೂ ಇರುವ ಅಂತರವನ್ನು ಹೆಚ್ಚಿಸಲು ಮತ್ತು ಸುರಕ್ಷತೆ ದೃಷ್ಟಿಯಿಂದ ಅಧಿಕ ಸಾಮರ್ಥ್ಯದ ಸ್ಪನ್ ಪೋಲ್ (ಕಾಂಕ್ರೀಟ್) ಗಳನ್ನು ಉಡುಪಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಮೆಸ್ಕಾಂ ಪರಿಚಯಿಸಿದೆ. ಜತೆಗೆ ಅಧಿಕ ಸಾಮರ್ಥ್ಯದ ತಂತಿಗಳನ್ನೂ ಅಳವಡಿಸಲಾಗುತ್ತಿದೆ. ವೋಲ್ಟೆàಜ್ ಸ್ಥಿರತೆ ಕಾಪಾಡಲು ಸಹಕಾರಿಯಾಗುತ್ತದೆ.
3ರ ಬದಲು 6 ವಯರ್
ಮಣಿಪಾಲ-ಕುಂಜಿಬೆಟ್ಟು 33 ಕೆವಿ ಲೈನ್‌ಗೆ ಹೈಟೆಕ್ ಸ್ಪರ್ಶ ನೀಡುತ್ತಿರುವ ಮೆಸ್ಕಾಂ, ನೂತನ ಸ್ಪನ್ ಪೋಲ್‌ಗಳ ಅಧಿಕ ಸಾಮರ್ಥ್ಯವನ್ನು ಬಳಸಿಕೊಂಡು 3ರ ಬದಲು 6 ವಯರ್‌ಗಳನ್ನು ಹಾಕುತ್ತಿದೆ. ಕಂಡಕ್ಟರ್ ಸಾಮರ್ಥ್ಯ ಅಧಿಕಗೊಳಿಸಿ, ಕಯೋಟ್ ವಯರ್‌ಗಳನ್ನು ಅಳವಡಿಸಲಾಗಿದ್ದು ಹಿಂದಿದ್ದ ರ್ಯಾಬಿಟ್ ವಯರ್‌ಗಳು° ಕೈಬಿಡಲಾಗಿದೆ. ಇದರಿಂದ ಸುರಕ್ಷತೆಯ ಜತೆಗೆ ವಿದ್ಯುತ್ ನಷ್ಟವೂ ತಪ್ಪಲಿದೆ. ಈ ವಯರ್‌ಗಳು ಬಲಿಷ್ಠವಾಗಿದ್ದು ತಂತಿ ಕಡಿದು ಪ್ರಾಣಾಪಾಯ ಆಗುವುದು ತಪ್ಪಲಿದೆ.
ವಾಹನ ಗುದ್ದಿದರೆ ಹಾನಿ ಕಡಿಮೆ
ಸ್ಪನ್ ಪೋಲ್ ಅನ್ನು ಭೂಮಿಯ ಕೆಳಗೆ 5 ಅಡಿ ಆಳದಲ್ಲಿ ಹೂಳಲಾಗುತ್ತದೆ. ಇದರಿಂದ ಸಣ್ಣ ವಾಹನಗಳು ಗುದ್ದಿದಾಗ ಅಥವಾ ಗೆಲ್ಲುಗಳು ಬಿದ್ದಾಗ ಪಕ್ಕನೆ ಹಾನಿಯಾಗುವುದಿಲ್ಲ. ಅಧಿಕ ಸಾಮರ್ಥ್ಯ ಇರುವುದರಿಂದ ಅವುಗಳಿಗೆ ಪ್ರತ್ಯೇಕ ಸ್ಟೇ ನೀಡುವ ಅಗತ್ಯವಿಲ್ಲ.
ಇದರಿಂದ ಮೆಸ್ಕಾಂಗೆ ಅನಗತ್ಯ ಖರ್ಚು ತಪ್ಪಲಿದೆ. ಜತೆಗೆ 11 ಮೀಟರ್ ಎತ್ತರದಲ್ಲಿರುವುದರಿಂದ ಭೂ ಅಂತರ ಹೆಚ್ಚಿದ್ದು ಯಾವುದೇ ಅಡೆ ತಡೆ ಉಂಟಾಗುವುದಿಲ್ಲ. ಬೆಳೆಯುತ್ತಿರುವ ನಗರಕ್ಕೆ ಇದು ಪೂರಕವಾಗಿದೆ. ಮಂಗಳೂರಿನಲ್ಲಿ ಈ ಕಂಬಗಳನ್ನು ಅಳವಡಿಸಲಾಗಿದೆ. ಉಡುಪಿಯಲ್ಲಿ ಖಾಸಗಿಯವರು ಇಂತಹ 2 ಕಂಬಗಳನ್ನು ಅಳವಡಿಸಿದ್ದಾರೆ.
ಏನಿದು ಸ್ಪನ್ ಪೋಲ್?
ಹಿಂದಿದ್ದ 9 ಮೀಟರ್ ಕಬ್ಬಿಣ ಮತ್ತು ಕಾಂಕ್ರೀಟ್ ಕಂಬಗಳ ಬದಲಿಗೆ 11 ಮೀಟರ್ ಎತ್ತರದ ಹಲವು ವೈಶಿಷ್ಟéಗಳಿರುವ ಕೊಳವೆಯಾಕಾರದ ಕಾಂಕ್ರೀಟ್ ಕಂಬಗಳೇ ಈ ಸ್ಪನ್ ಪೋಲ್‌ಗಳು. ಸುಮಾರು 20ರಿಂದ 22 ಸಾವಿರ ರೂ. ಪ್ರತಿ ಕಂಬಕ್ಕೆ ವೆಚ್ಚವಾಗಲಿದ್ದು, ಇವು ಹೆಚ್ಚಿನ ಲೋಡ್ ಹೊರುವ ಸಾಮರ್ಥ್ಯ ಹೊಂದಿವೆ. ಇದರ ತುದಿಯ ವ್ಯಾಸ ಕಿರಿದಾಗಿದ್ದು, ಕೆಳಭಾಗ ಟೊಳ್ಳಾಗಿರುತ್ತದೆ. ಮೇಲರ್ಧ ಭಾಗ ಕಾಂಕ್ರೀಟ್ ಪೂರ್ಣ ತುಂಬಿರುತ್ತವೆ. ಸೆಂಟ್ರಿಫ್ಯೂಗಲ್ ಕಾಸ್ಟಿಂಗ್ ಮತ್ತು ಸ್ಪಿನ್ನಿಂಗ್ ತಂತ್ರಜ್ಞಾನ ಬಳಸಿ ಈ ಪೋಲ್‌ಗಳನ್ನು ತಯಾರಿಸಲಾಗುತ್ತದೆ.
ಶೇ. 90ರಷ್ಟು ಕಾಮಗಾರಿ ಪೂರ್ಣ
ನೂತನ ಸ್ಪನ್ ಪೋಲ್‌ಗಳನ್ನು ಮತ್ತು ಕಯೋಟ್ ವಯರ್‌ಗಳನ್ನು ಅಳವಡಿಸುವ ಕಾಮಗಾರಿ ಶೇ. 90 ಪೂರ್ಣಗೊಂಡಿದ್ದು ಇಂದ್ರಾಳಿ ರೈಲ್ವೇ ಸೇತುವೆ ಬಳಿಕದ ಸ್ವಲ್ಪ ಕಾಮಗಾರಿ ಬಾಕಿ ಇದೆ. 50-60 ಸ್ಪನ್ ಪೋಲ್‌ಗಳನ್ನು ಅಳವಡಿಸಲಾಗಿದೆ. ಕ್ರಾಸಿಂಗ್ ಇರುವಲ್ಲಿ ಎತ್ತರದಲ್ಲಿ ತಂತಿಗಳು ಹಾದುಹೋಗಲು ಸ್ಪನ್ ಪೋಲ್‌ಗಳು ಸಹಕಾರಿಯಾಗಲಿವೆ. ಮುಂದಿನ ವಿದ್ಯುತ್ ನಿಲುಗಡೆಯ ದಿನಗಳಲ್ಲಿ ಕಾಮಗಾರಿ ಪೂರ್ಣವಾಗಲಿದೆ ಎಂದು ಮಣಿಪಾಲ ಎಇಇ ಮಾರ್ತಾಂಡಪ್ಪ ತಿಳಿಸಿದ್ದಾರೆ.
– ಅಶ್ವಿನ್ ಲಾರೆನ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.