ವಿಧಾನ ಮಂಡಲ ಕಲಾಪ: ಉಡುಪಿ ಜಿಲ್ಲೆ ಶಾಸಕರ ರಿಪೋರ್ಟ್‌ ಕಾರ್ಡ್‌ 


Team Udayavani, Dec 28, 2018, 11:27 AM IST

suv.jpg

ನಮ್ಮ ಶಾಸಕರು ವಿಧಾನ ಮಂಡಲ ಕಲಾಪಗಳಲ್ಲಿ ಏನು ಮಾಡಿದ್ದಾರೆ? ಏನು ಪ್ರಶ್ನೆ ಕೇಳಿದ್ದಾರೆ? ಯಾವೆಲ್ಲ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಸ್ತಾವಿಸಿದ್ದಾರೆ ಎಂಬುದಲ್ಲದೆ ಕಲಾಪಗಳಲ್ಲಿ ಭಾಗೀದಾರಿಕೆ ಬಗ್ಗೆ ಜನರಿಗೆ ತಿಳಿಸುವ ಹೊಸ ಯತ್ನ  ಉದಯವಾಣಿಯದ್ದು.

ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸುವುದು ಮತ್ತು ಲಿಖೀತವಾಗಿ ಉತ್ತರ ಕಳುಹಿಸುವ ಎರಡೂ ಕ್ರಮಗಳಿರುತ್ತವೆ. ಅದರಂತೆ ಇತ್ತೀಚೆಗೆ ಬೆಳಗಾವಿಯಲ್ಲಿ 10 ದಿನ ನಡೆದ ವಿಧಾನಸಭೆ ಅಧಿವೇಶನದಲ್ಲಿ ಉಡುಪಿ ಜಿಲ್ಲೆಯ ಶಾಸಕರು ಕೇಳಿದ ಪ್ರಶ್ನೋತ್ತರದ ಮಾಹಿತಿ ಇಲ್ಲಿದೆ.

ಕೆ. ರಘುಪತಿ ಭಟ್‌ – ಉಡುಪಿ

ಉಡುಪಿ ಜಿಲ್ಲೆಗೆ ಪ್ರತ್ಯೇಕ ಜಿಲ್ಲಾ ಸಹಕಾರಿ ಬ್ಯಾಂಕ್‌ ಬೇಡಿಕೆ ಬಗ್ಗೆ ನ್ಯಾಯಾಲಯದ ತೀರ್ಪು ಬಂದ ಬಳಿಕ  ಅನುಷ್ಠಾನಗೊಳಿಸುವ ಭರವಸೆ ಸಚಿವರಿಂದ ದೊರೆತಿದೆ.  ಮರಳುಗಾರಿಕೆ, ಡೀಮ್ಡ್ ಅರಣ್ಯ ಸಮಸ್ಯೆ, ಉಡುಪಿ ನಗರಕ್ಕೆ ವಾರಾಹಿ ನೀರು, ಗ್ರಾಮೀಣ ನೀರು ಸರಬರಾಜು ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಮರಳುಗಾರಿಕೆ ಆರಂಭಿಸಲು ಕ್ರಮ, ಡೀಮ್ಡ್ ಅರಣ್ಯ ವಿರಹಿತಗೊಳಿಸುವ ವಿಷಯ ಪರಿಶೀಲನೆ ಹಾಗೂ ವಾರಾಹಿ ಕುಡಿಯುವ ನೀರಿನ ಯೋಜನೆ ಟೆಂಡರ್‌ ಹಂತದಲ್ಲಿದೆ ಎಂಬ ಉತ್ತರ ಲಭಿಸಿದೆ. ಗಮನ ಸೆಳೆಯುವ ಸೂಚನೆಯಡಿ ನಗರಸಭೆಗೆ ಆಯ್ಕೆಯಾದ ಸದಸ್ಯರು ಪ್ರಮಾಣವಚನ ಸ್ವೀಕರಿಸದೇ ಸಭೆಯನ್ನು ಕರೆಯುವ ಅವಕಾಶವಿದೆಯೇ? ಶಾಸಕರಿಗೆ ಈ ಅಧಿಕಾರ ಇದೆಯೋ ಎಂಬುದಕ್ಕೆ ಉತ್ತರ ಸಿಕ್ಕಿಲ್ಲ. ಮರಳುಗಾರಿಕೆ ಚರ್ಚೆಗೆ ಬಂದಿಲ್ಲ. ಜಿಲ್ಲೆಯ ಅತಿವೃಷ್ಟಿ ಸಮಸ್ಯೆ ಬಗ್ಗೆಯೂ ಪ್ರಸ್ತಾವಿಸಲಾಗಿದೆ.

ಕೇಳಲಾದ  ಪ್ರಶ್ನೆಗಳ ಸಂಖ್ಯೆ 40.    ಉತ್ತರ ಸಿಕ್ಕಿರುವುದು 40 
*ಭಾಗವಹಿಸಿದ ಪ್ರಮುಖ ಕಲಾಪ: ಪ್ರಶ್ನೋತ್ತರ ವೇಳೆ ಮತ್ತು ಬರದ ಕುರಿತಾದ ಚರ್ಚೆ
* ಪ್ರಸ್ತಾವಿಸಿದ ಕಾಮಗಾರಿ ಮತ್ತು ಸಿಕ್ಕಿದ ಭರವಸೆ: ಜಿಲ್ಲೆಗೆ ಪ್ರತ್ಯೇಕ ಸಹಕಾರಿ ಬ್ಯಾಂಕ್‌ ಬೇಡಿಕೆ ಕುರಿತು ನ್ಯಾಯಾಲಯ ತೀರ್ಪಿನ ಅನಂತರ ನಿರ್ಧಾರ. 
* ಫಾಲೋಅಪ್‌ ಮಾಡಬೇಕಾದ ಅವಧಿ: ನಿಗದಿತ ಅವಧಿ ಇಲ್ಲ.
* ಹಾಜರಾತಿ: ಶೇ. 100

ಶ್ರೀನಿವಾಸ ಶೆಟ್ಟಿ  - ಕುಂದಾಪುರ

ಪ್ರಮುಖವಾಗಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿ 2013-14ರ ಅನಂತರ ಹೆಚ್ಚಳವಾಗಿಲ್ಲ. ಪ್ರದೇಶಾಭಿವೃದ್ಧಿ ಅನುದಾನವನ್ನು 2 ಕೋ.ರೂ.ಗಳಿಂದ 5 ಕೋ.ರೂ.ಗೆ ಏರಿಸಬೇಕೆಂದು ಆಗ್ರಹಿಸಿದರು. ಇದಕ್ಕೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಯಿತು. ಮುಂದಿನ ಬಜೆಟ್‌ನಲ್ಲಿ ಈ ಬಗ್ಗೆ ಗಮನಹರಿಸುವ ಭರವಸೆ ಮುಖ್ಯಮಂತ್ರಿಯವರಿಂದ ದೊರೆಯಿತು. ಕಸ್ತೂರಿ ರಂಗನ್‌ ವರದಿ ಕುರಿತು ಕೇರಳ ಸರಕಾರ ಕೇಂದ್ರಕ್ಕೆ ಆಕ್ಷೇಪಣೆ ಸಲ್ಲಿಸಿದೆ. ನಮ್ಮಲ್ಲಿಂದ ಕಳುಹಿಸಿದೆಯೇ ಎಂದು ಕೇಳಿದಕ್ಕೆ, ಕಳುಹಿಸಲಾಗಿದೆ ಎಂಬ ಉತ್ತರವಷ್ಟೇ ಸಿಕ್ಕಿದೆ. ಇದಲ್ಲದೇ ಜಮೀನಿನ ಪೋಡಿ ಆಗದೇ ಜನರಿಗೆ ಆಗುತ್ತಿರುವ ತೊಂದರೆ, ಭೂ ಪರಿವರ್ತನೆ ಸಮಸ್ಯೆ ಕುರಿತು ಕಂದಾಯ ಇಲಾಖೆ ಗಮನಸೆಳೆದರು. ಕುಂದಾಪುರದಲ್ಲಿ ಉಪ ಸಾರಿಗೆ ಕಚೇರಿ, ಪಶು ಸಂಗೋಪನೆ ಇಲಾಖೆ, ಮೀನುಗಾರಿಕೆ ಇಲಾಖೆ, ಆರೋಗ್ಯ ಕರ್ನಾಟಕ ಯೋಜನೆ ಕುರಿತು ಪ್ರಸ್ತಾವಿಸಿದರು. 

ಕೇಳಲಾದ ಪ್ರಶ್ನೆಗಳ ಸಂಖ್ಯೆ; 15   ಉತ್ತರ ಸಿಕ್ಕಿರುವುದು: ಬಹುತೇಕ

*ಭಾಗವಹಿಸಿದ ಪ್ರಮುಖ ಕಲಾಪ : ಪ್ರಶ್ನೋತ್ತರ ವೇಳೆ ಕಸ್ತೂರಿ ರಂಗನ್‌ ವರದಿ ಅನುಷ್ಠಾನ ವಿಷಯ
* ಪ್ರಸ್ತಾವಿಸಿದ ಕಾಮಗಾರಿ ಮತ್ತು ಸಿಕ್ಕಿದ ಭರವಸೆ: ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ಸಿಕ್ಕಿದೆ. 
* ಫಾಲೋಅಪ್‌ ಮಾಡಬೇಕಾದ ಅವಧಿ: ಮೂರು ತಿಂಗಳು
* ಹಾಜರಾತಿ: ಶೇ. 80 (2 ದಿನ ಗೈರು – ಅನಾರೋಗ್ಯ)

ಸುಕುಮಾರ ಶೆಟ್ಟಿ – ಬೈಂದೂರು

ಹಿಂದುಳಿದ ವರ್ಗದವರಿಗೆ ಹಾಸ್ಟೆಲ್‌ ಕಡಿಮೆಯಿರುವುದರಿಂದ ಆಗುತ್ತಿರುವ ಸಮಸ್ಯೆ ಹಾಗೂ ಭೋವಿ ಜನಾಂಗದವರಿಗೆ ಕುಂದಾಪುರದಲ್ಲಿ ಎಸ್‌ಸಿ ಪ್ರಮಾಣಪತ್ರ ನೀಡದಿರುವ ಬಗ್ಗೆ ಗಮನಸೆಳೆಯಲಾಯಿತು. ಸಮಾಜ ಕಲ್ಯಾಣ ಇಲಾಖೆ ಸಚಿವರು ಭೋವಿ ಜನಾಂಗವನ್ನು ಎಸ್‌ಸಿ ವರ್ಗಕ್ಕೆ ಸೇರಿಸಿದೆ ಎಂದು ಉತ್ತರಿಸಿದರು. ಕೇಳಲಾದ ಪ್ರಶ್ನೆಗಳಲ್ಲಿ 5ಕ್ಕೆ ಕಲಾಪದಲ್ಲೇ ಉತ್ತರ ಸಿಕ್ಕಿದ್ದರೆ, ಉಳಿದವುಗಳಿಗೆ ಅಂಚೆ ಮೂಲಕ ಉತ್ತರ ಕಳುಹಿಸುವ ಭರವಸೆ ಸಿಕ್ಕಿದೆ. ಜಲಸಂಪನ್ಮೂಲ ಇಲಾಖೆ ಸಂಬಂಧ ಪಶ್ಚಿಮ ವಾಹಿನಿಯಡಿ ಅನುದಾನ ಹೆಚ್ಚಳ, 3 ವರ್ಷಗಳಲ್ಲಿ ಕ್ಷೇತ್ರದಲ್ಲಿ ವಸತಿ ಯೋಜನೆಯಡಿ ಕೈಗೊಂಡ ಮನೆ ನಿರ್ಮಾಣ, ಡೀಮ್ಡ್ ಫಾರೆಸ್ಟ್‌ ಸಮಸ್ಯೆ ನಿವಾರಣೆಗೆ ಕೈಗೊಂಡ ಕ್ರಮ, 94 ಸಿ ಜಾಗ ಮಂಜೂರಿಗೆ ಕ್ರಮ, ಕೃಷಿಗೆ ಪ್ರಾಣಿ ಉಪಟಳ ನಿವಾರಣೆ ಕ್ರಮ, ಅತಿವೃಷ್ಟಿ ನಷ್ಟ ಪರಿಹಾರ ಹೆಚ್ಚಳ, ಅಂಗನವಾಡಿ ನೌಕರರ ವೇತನ ಹೆಚ್ಚಳಕ್ಕೆ ಆಗ್ರಹಿಸಲಾಯಿತು. 

ಕೇಳಲಾದ ಪ್ರಶ್ನೆಗಳ ಸಂಖ್ಯೆ: 17   ಉತ್ತರ ಸಿಕ್ಕಿರುವುದು: 5
* ಭಾಗವಹಿಸಿದ ಪ್ರಮುಖ ಕಲಾಪ; ಪ್ರಶ್ನೋತ್ತರ ವೇಳೆ ಮತ್ತು ಬರದ ಕುರಿತಾದ ಚರ್ಚೆ
* ಪ್ರಸ್ತಾವಿಸಿದ ಕಾಮಗಾರಿ ಮತ್ತು ಸಿಕ್ಕಿದ ಭರವಸೆ: ಪಶ್ಚಿಮ ವಾಹಿನಿಯಡಿ ನೀರಾವರಿ ಯೋಜನೆಗೆ ಅನುದಾನ ಹೆಚ್ಚಳ.
* ಫಾಲೋಅಪ್‌ ಮಾಡಬೇಕಾದ ಅವಧಿ: 6 ತಿಂಗಳು ಮತ್ತು 4 ತಿಂಗಳು.
* ಹಾಜರಾತಿ: ಶೇ. 100

ಲಾಲಾಜಿ ಮೆಂಡನ್‌ – ಕಾಪು

ಕಾಪು ಸಹಿತ ಕರಾವಳಿಯ ಸಮಸ್ಯೆಗಳ ಬಗ್ಗೆ ಚರ್ಚೆಗೆ ಕೋರಿದ್ದರೂ ಅವಕಾಶ ಸಿಗಲಿಲ್ಲ. ಮರಳುಗಾರಿಕೆ ಸಮಸ್ಯೆ, ಅರಣ್ಯ ಯೋಜನೆ  ಸುಜ್ಲಾನ್‌ ಕಂಪೆನಿ ಕಾರ್ಮಿಕರ ವರ್ಗಾವಣೆ ಸಮಸ್ಯೆ, ಹೆಜಮಾಡಿ ಬಂದರು ಕಾಮಗಾರಿ ವಿಳಂಬ, ಯುಪಿಸಿಎಲ್‌ 2ನೇ ಮತ್ತು 3ನೇ ಹಂತದ ವಿಸ್ತರಣೆ ಪ್ರಸ್ತಾವನೆಗೆ ಉದ್ದೇಶಿಸಲಾಗಿತ್ತು. ಕಾಪು ಮಿನಿವಿಧಾನ ಸೌಧ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪುರಸಭೆ ಮತ್ತು ಯೋಜನಾ ಪ್ರಾಧಿಕಾರದ ಬಗ್ಗೆಯೂ ಚರ್ಚೆಗೆ ಕೋರಿದ್ದು, ಕಂದಾಯ ಇಲಾಖೆ ಮೂಲಕ ಸಮಸ್ಯೆ ಬಗೆಹರಿಸಲು ಸಭೆ ಕರೆಯುವ ಭರವಸೆ ದೊರೆತಿದೆ. ಬೆಳಪುವಿನ ಕಾಲೇಜಿನಲ್ಲಿ ಸಂಶೋಧನ ಕೇಂದ್ರ ಪ್ರಾರಂಭಕ್ಕೆ ಆಗುತ್ತಿರುವ ವಿಳಂಬ, ಉದ್ಯಾವರ ಜಾರುಕುದ್ರು, ಕೋಟೆ ಮಟ್ಟು ಸಹಿತ ವಿವಿಧ ಸೇತುವೆ ಕಾಮಗಾರಿ ಕುಂಠಿತಗೊಂಡ ಬಗ್ಗೆ ಕೇಳಲಾದ ಪ್ರಶ್ನೆಗೆ ಲಿಖೀತ ಉತ್ತದ ಭರವಸೆ ದೊರಕಿದೆ. 

ಕೇಳಲಾದ ಪ್ರಶ್ನೆಗಳ ಸಂಖ್ಯೆ: 7  ಉತ್ತರ ಸಿಕ್ಕಿರುವುದು: 3
* ಭಾಗವಹಿಸಿದ ಪ್ರಮುಖ ಕಲಾಪ; ಪ್ರಶ್ನೋತ್ತರ ವೇಳೆ ಮತ್ತು ಬರದ ಕುರಿತಾದ ಚರ್ಚೆ
* ಪ್ರಸ್ತಾವಿಸಿದ ಕಾಮಗಾರಿ ಮತ್ತು ಸಿಕ್ಕಿದ ಭರವಸೆ: ಮಿನಿ ವಿಧಾನಸೌಧ ನಿರ್ಮಾಣ ಸಂಬಂಧ ಕಂದಾಯ ಇಲಾಖೆ ಸಭೆ ಕರೆಯುವ ಭರವಸೆ. 
*ಫಾಲೋಅಪ್‌ ಮಾಡಬೇಕಾದ ಅವಧಿ: ನಿಗದಿತ ಅವಧಿ ಇಲ್ಲ
*ಹಾಜರಾತಿ: ಶೇ. 100

ಸುನಿಲ್‌ ಕುಮಾರ್‌  - ಕಾರ್ಕಳ


ಜಿಲ್ಲೆಯ ಪಶುಸಂಗೋಪನಾ ಇಲಾಖೆಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಹಾಗೂ ಶೂನ್ಯ ಬಂಡವಾಳದಲ್ಲಿ ಕೃಷಿ ಮಾಡುವ ಹೊಸ ಪರಿಕಲ್ಪನೆಯ ಬಗ್ಗೆ ಪ್ರಸ್ತಾವಿಸಿದ್ದು ಈ ಬಗ್ಗೆ ಇಲಾಖೆಯಿಂದ ಯಾವುದೇ ನಿರ್ದಿಷ್ಟ ಭರವಸೆ ದೊರೆತಿಲ್ಲ.  ಇದಲ್ಲದೇ, ಗಮನ ಸೆಳೆಯುವ ಸೂಚನೆಯಡಿ ಕಾರ್ಕಳ ತಾಲೂಕಿನಲ್ಲಿ ಮಾದರಿ ವಿದ್ಯುತ್‌ ಗ್ರಾಮಗಳನ್ನು ಅನುಷ್ಠಾನ ಮಾಡದಿರುವುದನ್ನು ಶಾಸಕರು ಪ್ರಸ್ತಾವಿಸಿದ್ದಾರೆ. ಜತೆಗೆ ಸದನದ ಶೂನ್ಯ ವೇಳೆಯಲ್ಲಿ ಪಡುಬಿದ್ರಿ ಟೋಲ್‌ ವಿಷಯ ಸಂಬಂಧ ಪ್ರಶ್ನೆ ಕೇಳಲಾಗಿದೆ. ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಮರಳು ಸಮಸ್ಯೆ,  ನಾಲ್ಕು ಜಿಲ್ಲೆಗಳಲ್ಲಿ ಅರಣ್ಯ ಇಲಾಖೆಯಿಂದ ಆಗುತ್ತಿರುವ ವಿವಿಧ ಸಮಸ್ಯೆ, ರಾಜ್ಯದಲ್ಲಿ ಆದಂತಹ ತಾಲೂಕು ಜಾತಿಗಣತಿಯ ಬಗ್ಗೆ ಪ್ರಸ್ತಾವ ಮಾಡಿದ್ದಾರೆ. ಈ ಬಗ್ಗೆ ಸರಕಾರದಿಂದ ನಿರ್ದಿಷ್ಟ ಉತ್ತರ ಸಿಕ್ಕಿಲ್ಲ. ಅತಿವೃಷ್ಟಿ ಬಗ್ಗೆ ಮಾತನಾಡಲು ಸಮಯ ನೀಡಲಿಲ್ಲ. 

ಕೇಳಲಾದ ಪ್ರಶ್ನೆಗಳ ಸಂಖ್ಯೆ: 54. ಉತ್ತರ ಸಿಕ್ಕಿರುವುದು: ಬಹುತೇಕ

*ಭಾಗವಹಿಸಿದ ಪ್ರಮುಖ ಕಲಾಪ : ಪ್ರಶ್ನೋತ್ತರ ವೇಳೆ ಮತ್ತು ಬರದ ಕುರಿತಾದ ಚರ್ಚೆ
* ಪ್ರಸ್ತಾವಿಸಿದ ಕಾಮಗಾರಿ ಮತ್ತು ಸಿಕ್ಕಿದ ಭರವಸೆ: ತಾಲೂಕಿನಲ್ಲಿ ಮಾದರಿ ವಿದ್ಯುತ್‌ ಗ್ರಾಮಗಳ ಯೋಜನೆ ಅನುಷ್ಠಾನ ಮಾಡದಿರುವ ಬಗ್ಗೆ- ನಿರ್ದಿಷ್ಟ ಭರವಸೆ ಇಲ್ಲ
* ಫಾಲೋಅಪ್‌ ಮಾಡಬೇಕಾದ ಅವಧಿ: ಯಾವುದೇ ಸ್ಪಷ್ಟ ಉತ್ತರ ನೀಡಿಲ್ಲ
*  ಹಾಜರಾತಿ: ಶೇ. 100

ಟಾಪ್ ನ್ಯೂಸ್

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Manipal: ಡಂಪಿಂಗ್‌ ಯಾರ್ಡ್‌ ಆದ ಮಣ್ಣಪಳ್ಳ!

10

Udupi: ಒಂದೇ ವೃತ್ತ; ಪೊಲೀಸ್‌ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ

7

Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್‌; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!

12-protest

Trasi: ಸಾಂಪ್ರದಾಯಿಕ ‌ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ,‌ ಗೋಪಾಲ ಪೂಜಾರಿ ಭಾಗಿ

6-kaup-3

Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

17-uv-fusion

Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.