Udupi District ನಾನ್ ಸಿಆರ್‌ಝಡ್ ಮರಳು ಆಸರೆ; 2.45 ಲಕ್ಷ ಮೆ. ಟನ್ ಮರಳು ತೆರವು
ಜೂನ್‌ನಿಂದ ಮರಳುಗಾರಿಕೆ ನಿಷೇಧ
Team Udayavani, May 19, 2024, 1:58 AM IST
ಉಡುಪಿ: ಜಿಲ್ಲೆಯಲ್ಲಿ ಮಳೆಗಾಲ ಅವಧಿ ಮೀನು ಮರಿ ಉತ್ಪಾದನೆ ಕಾರಣಕ್ಕೆ ನಾನ್ ಸಿಆರ್‌ಝಡ್ ಮರಳುಗಾರಿಕೆಗೆ ಜೂನ್‌ನಿಂದ ಅಕ್ಟೋಬರ್ ವರೆಗೆ ನಿಷೇಧ ಇರಲಿದ್ದು, 2023-24ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ನಾನ್ ಸಿಆರ್‌ಝಡ್ ಮತ್ತು ಗ್ರಾ.ಪಂ. ವ್ಯಾಪ್ತಿಯಲ್ಲಿ 2.45 ಲಕ್ಷ ಮೆಟ್ರಿಕ್ ಟನ್ ಮರಳು ತೆರವುಗಳಿಸಲಾಗಿದೆ.
ಜೂನ್, ಜುಲೈ ಎರಡು ತಿಂಗಳು ಮರಳುಗಾರಿಕೆಗೆ ನಿರ್ಬಂಧ ಇರಲಿದೆ. ಅಲ್ಲದೇ ಈಗಾಗಲೇ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಮರಳು ತೆಗೆಯಲು ಎನ್‌ಜಿಟಿ ನಿರ್ಬಂಧ ಮತ್ತು ಕೇಂದ್ರ ಪರಿಸರ ಸಚಿವಾಲಯದ ಸ್ಪಷ್ಟ ನಿರ್ದೇಶನ ಇಲ್ಲದೇ ಇರುವುದರಿಂದ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವಿಗೆ ಅವಕಾಶ ಸಿಗಲಿಲ್ಲ.
ಮಳೆಗಾಲದ ಅನಂತರ ಸರಕಾರದ ಸುತ್ತೋಲೆ, ಕೋರ್ಟ್ ತೀರ್ಪು ಆಧಾರದ ಮೇಲೆ ಸಿಆರ್‌ಝಡ್ ವ್ಯಾಪ್ತಿ ಸಾಂಪ್ರದಾಯಿಕ ಮರಳು ತೆರವು ಬಗ್ಗೆ ಸರ ಕಾರ ಪ್ರಕ್ರಿಯೆ ಆರಂಭಿಸಬಹುದು. ಮಳೆ ಗಾಲ ಮುಗಿದ ಅನಂತರ ಸರಕಾರ, ಕೋರ್ಟ್ ಅನುಮತಿಸಿದಲ್ಲಿ ಪ್ರಕ್ರಿಯೆ ಈ ರೀತಿ ನಡೆಯಲಿದೆ.
ಮೀನುಗಾರರು ದೋಣಿಗಳ ಸರಾಗ ಸಂಚಾರಕ್ಕೆ ಅಡಚಣೆಯಾಗುವ ಮರಳು ದಿಬ್ಬ ತೆರವಿಗೆ ಮೀನುಗಾರಿಕೆ ಇಲಾಖೆಗೆ ಮನವಿ ನೀಡಿದ ಬಳಿಕ ಸಿಆರ್‌ಝಡ್ ಇಲಾಖೆಗೆ ವರದಿ ಸಲ್ಲಿಸಬೇಕು. ಅನಂತರ ಮರಳು ದಿಬ್ಬಗಳನ್ನು ಗುರುತಿಸಿ ಜಿಲ್ಲಾಧಿಕಾರಿ ನೇತೃತ್ವದ ಏಳು ಸದಸ್ಯರ ಸಮಿತಿಯು ಪ್ರಸ್ತಾವನೆಯನ್ನು ಕರ್ನಾಟಕ ಕರಾವಳಿ ವಲಯ ನಿಯಂತ್ರಣ ಪ್ರಾಧಿಕಾರಕ್ಕೆ (ಕೆಸಿಎಂಝಡ್) ಸಲ್ಲಿಸಬೇಕು. ಇಲ್ಲಿ ಅನುಮೋದನೆ ಸಿಕ್ಕ ಅನಂತರ ಡಿಸಿ ನೇತೃತ್ವದ 7 ಸದಸ್ಯರ ಸಮಿತಿ ಪರವಾನಿಗೆ ನೀಡುವ ಮೂಲಕ ಮರಳು ದಿಬ್ಬ ತೆರವಿಗೆ ಚಾಲನೆ ನೀಡಲಾಗುತ್ತದೆ.
ನಾನ್ ಸಿಆರ್‌ಝಡ್ ಮರಳು
ಕುಂದಾಪುರದ ಗುಲ್ವಾಡಿ ಕಾವ್ರಾಡಿ, ಬಳ್ಕೂರು, ಹಳ್ನಾಡು, ಜಪ್ತಿ, ಕುಕ್ಕೆಹಳ್ಳಿ, ಅಂಪಾರು, ಚೇರ್ಕಾಡಿ, ಮೊಳಹಳ್ಳಿ ಮರಳು ದಿಬ್ಬದಲ್ಲಿ ಪ್ರಸಕ್ತ ಸಾಲಿನಲ್ಲಿ ಈವರೆಗೆ 1,10,151 ಮೆಟ್ರಿಕ್ ಟನ್ ಮರಳು ತೆರವುಗೊಳಿಸಲಾಗಿದೆ. ಇನ್ನೂ 1,20,747 ಮರಳು ಉಳಿಕೆಯಲ್ಲಿದೆ. ಜಿಲ್ಲೆಯ ಐದು ತಾಲೂಕಿನ ಗ್ರಾ. ಪಂ. ವ್ಯಾಪ್ತಿಯಲ್ಲಿ ಹೊಳೆ, ತೊರೆ, ತೋಡುಗಳಲ್ಲಿ ಮರಳು ತೆರವಿಗೆ ಅವಕಾಶ ಕಲ್ಪಿಸಲಾಗಿದ್ದು 16,414 ಮೆಟ್ರಿಕ್ ಟನ್ ಮರಳು ತೆರವುಗೊಳಿಸಲಾಗಿದೆ.
ಸರಕಾರಿ ಕಾಮಗಾರಿಗೆ ಮೀಸಲು
ಸಣ್ಣ ನೀರಾವರಿ ಇಲಾಖೆ, ಲೋಕೋಪಯೋಗಿ, ಕೆಆರ್‌ಐಡಿಎಲ್ ಕಾಮಗಾರಿಗಳಿಗೆ ಮರಳು ದಿಬ್ಬಗಳು ಮೀಸಲು ಇರಿಸಿದ್ದು, ಅಂಪಾರು, ಹಳ್ನಾಡಿ, ಕಾರ್ಕಡ, ಬಳ್ಕೂರು ಭಾಗದ ಮರಳು ದಿಬ್ಬಗಳಿಂದ 1,18,822 ಮೆಟ್ರಿಕ್ ಟನ್ ಮರಳು ತೆರವುಗೊಳಿಸಿದ್ದು, 1,00,112 ಮೆಟ್ರಿಕ್ ಟನ್ ಉಳಿಕೆಯಾಗಿದೆ.
ಜಿಲ್ಲೆಯಲ್ಲಿ ನಾನ್ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಬೇಡಿಕೆಯಂತೆ ಮರಳು ಪೂರೈಕೆ ಯಾಗುತ್ತಿದ್ದು, ಸದ್ಯಕ್ಕೆ ಎಲ್ಲ ಬ್ಲಾಕ್‌ಗಳಲ್ಲಿ ಮರಳು ತೆರವು ಕಾರ್ಯ ನಡೆಯುತ್ತಿದೆ. ಸರಕಾರಿ ಕಾಮಗಾರಿಗಳಿಗೆ ಪ್ರತ್ಯೇಕ ಸೇರಿದಂತೆ ಗ್ರಾ. ಪಂ. ವ್ಯಾಪ್ತಿಯಲ್ಲಿಯೂ ಮರಳು ತೆರವಿಗೆ ಅವಕಾಶ ಮಾಡಿಕೊಟ್ಟಿರು ವುದರಿಂದ ಸಾರ್ವಜನಿಕರಿಗೆ ಮರಳು ಕೊರತೆ ಯಾಗದಂತೆ ಕ್ರಮಗಳನ್ನು ಕೈಗೊಂಡಿ ದ್ದೇವೆ. ಜೂನ್‌ನಿಂದ ಅಕ್ಟೋಬರ್ ವರೆಗೆ ಮರಳು ತೆರವಿಗೆ ನಿರ್ಬಂಧವಿರಲಿದೆ.
– ಕೃಷ್ಣವೇಣಿ, ಹಿರಿಯ ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.