ಉಡುಪಿ: ಕುಡಿಯುವ ನೀರು ಚರಂಡಿ ಪಾಲು!

ಸಮೀಪದ ಕಟ್ಟಡ, ಪಾದಚಾರಿಗಳಿಗೆ ಅಪಾಯ

Team Udayavani, Jun 26, 2020, 5:39 AM IST

ಉಡುಪಿ: ಕುಡಿಯುವ ನೀರು ಚರಂಡಿ ಪಾಲು!

ಉಡುಪಿ: ಶಿರಿಬೀಡು ವಾರ್ಡ್‌ ಕುಡಿಯುವ ನೀರು ಪೂರೈಕೆಯ ಪೈಪ್‌ ಒಡೆದು ಒಂದು ತಿಂಗಳಿನಿಂದ ಭಾರೀ ಪ್ರಮಾಣದ ನೀರು ರಸ್ತೆ ಮೇಲೆ ಪೋಲಾಗುತ್ತಿರುವುದನ್ನು ತಪ್ಪಿಸಿ, ಚರಂಡಿಗೆ ಹರಿಯಬಿಟ್ಟಿರುವ ನಗರಸಭೆ ಎಂಜಿನಿ ಯರ್‌ಗಳ ಮಾಸ್ಟರ್‌ ಪ್ಲಾನ್‌ಗೆ ಸ್ಥಳೀ ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರಸಭೆ ವ್ಯಾಪ್ತಿಯ ಶಿರಿಬೀಡು ಟವರ್‌ ಮುಂಭಾಗದಲ್ಲಿ ಕುಡಿ ಯುವ ನೀರಿನ ಪೈಪ್‌ ಒಡೆದು ಹೋಗಿ ತಿಂಗಳು ಕಳೆದಿದೆ. ಸ್ಥಳೀಯರು ಸಾಕಷ್ಟು ದೂರು ನೀಡಿದ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ದುರಸ್ತಿಗೆ ಮುಂದಾದರು. ಕಾರ್ಮಿಕರು ರಸ್ತೆಯಲ್ಲಿ ಹರಿಯುತ್ತಿದ್ದ ನೀರನ್ನು ಮಳೆ ನೀರಿನ ಚರಂಡಿಗೆ ಬಿಟ್ಟಿದ್ದು, ಅಲ್ಲಿಂದ ಶಿರಿಬೀಡು ಟವರ್ ಒಳಗೆ ನುಗ್ಗುತ್ತಿದೆ. ನಗರಸಭೆಯ ಅಧಿಕಾರಿಗಳು ಮೇ 29ರಂದು ದುರಸ್ತಿಗಾಗಿ ಕಾರ್ಮಿಕರನ್ನು ಕಳುಹಿಸಿದ್ದಾರೆ. ಒಂದು ತಿಂಗಳಿನಲ್ಲಿ ನಾಲ್ಕು ಬಾರಿ ರಸ್ತೆಯನ್ನು ಕೊಂಚ ಕೊಂಚವಾಗಿ ಅಗೆದು ಮೂರು ಅಡಿ ಆಳ ಮಾಡಿದ್ದಾರೆ. ಇಲ್ಲಿ ತಡೆಗೋಡೆ ಇಲ್ಲದಿರುವ ಕಾರಣ ಪಾದಚಾರಿಗಳು ಕೊಂಚ ಎಚ್ಚರ ತಪ್ಪಿದರೂ ಅಪಾಯ ಖಚಿತ ಎಂಬಂತಿದೆ ಪರಿಸ್ಥಿತಿ.

ಪಾದಚಾರಿಗಳಿಗೆ ಅಪಾಯಕಾರಿ
ಕಳೆದೊಂದು ತಿಂಗಳಿನಿಂದ ಕುಡಿಯುವ ನೀರು ಭಾರೀ ಪ್ರಮಾಣದಲ್ಲಿ ಪೋಲಾಗುತ್ತಿದೆ. ಅಪರೂಪಕ್ಕೊಮ್ಮೆ ನಗರಸಭೆಯಿಂದ ಕೂಲಿ ಕಾರ್ಮಿಕರು ಬಂದು ಹಂತ ಹಂತವಾಗಿ ಅಗೆಯುತ್ತಿದ್ದಾರೆ. ನೀರು ತುಂಬಿ ರಸ್ತೆ ಹಾಗೂ ಮುಂಭಾಗದ ಶಿರಿಬೀಡು ಟವರ್ಗೆ ನುಗ್ಗುತ್ತಿದೆ. ಮಳೆಗಾಲದಲ್ಲಿ ಇದು ಪಾದಚಾರಿಗಳಿಗೆ ಅಪಾಯಕಾರಿಯಾಗಿದೆ. .
-ಎಂ.ಎನ್‌.ಹೆಗಡೆ, ನಿವೃತ್ತ ಪ್ರಾಂಶುಪಾಲರು.

ದುರಸ್ತಿ ಶೀಘ್ರ ಪೂರ್ಣ
ಶಿರಿಬೀಡು ಟವರ್‌ ಮುಂಭಾಗದ ಕುಡಿಯುವ ನೀರಿನ ಪೈಪ್‌ ಒಡೆದು ಹೋಗಿದೆ. ಅದರ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರದಲ್ಲಿ ದುರಸ್ತಿ ಕೆಲಸ ಮುಗಿಸಿ, ಪಾದಚಾರಿಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ.
-ಮೋಹನ್‌ ರಾಜ್‌, ಎಇಇ ನಗರಸಭೆ ಉಡುಪಿ

ಟಾಪ್ ನ್ಯೂಸ್

Rajya Sabha: ಕಾಂಗ್ರೆಸ್‌ನ 1 ದೇಶ-2 ಸಂವಿಧಾನ ನೀತಿಗೆ ಅಂತ್ಯ ಹಾಡಿದ್ದೇ ಬಿಜೆಪಿ: ನಡ್ಡಾ

Rajya Sabha: ಕಾಂಗ್ರೆಸ್‌ನ 1 ದೇಶ-2 ಸಂವಿಧಾನ ನೀತಿಗೆ ಅಂತ್ಯ ಹಾಡಿದ್ದೇ ಬಿಜೆಪಿ: ನಡ್ಡಾ

1971 ಯುದ್ಧದ ಚಿತ್ರ ಮಾಣಿಕ್‌ ಷಾ ಕೇಂದ್ರದಲ್ಲಿ ಅಳವಡಿಕೆ: ಸೇನೆ ಹೇಳಿಕೆ

1971 ಯುದ್ಧದ ಚಿತ್ರ ಮಾಣಿಕ್‌ ಷಾ ಕೇಂದ್ರದಲ್ಲಿ ಅಳವಡಿಕೆ: ಸೇನೆ ಹೇಳಿಕೆ

Supreme Court: ಆಡಳಿತ ವಿಳಂಬದಿಂದ ಅಕ್ರಮ ನಿರ್ಮಾಣ ಸಕ್ರಮ ಆಗುವುದಿಲ್ಲ

Supreme Court: ಆಡಳಿತ ವಿಳಂಬದಿಂದ ಅಕ್ರಮ ನಿರ್ಮಾಣ ಸಕ್ರಮ ಆಗುವುದಿಲ್ಲ

Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!

Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!

Election Commission: ಮುಂದಿನ ವಾರವೇ ದಿಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ?

Election Commission: ಮುಂದಿನ ವಾರವೇ ದಿಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ?

ಅಮೆರಿಕದಲ್ಲಿ ಶೂಟೌಟ್‌: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ

New York: ಅಮೆರಿಕದಲ್ಲಿ ಶೂಟೌಟ್‌: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ

ಪ್ರಿಯಾಂಕಾ ವಾದ್ರಾಗೆ ಪ್ರೀತಿ ಜಿಂಟಾ ಟಾಂಗ್‌?: ನೆಟ್ಟಿಗರ ಚರ್ಚೆ

Congress ಪ್ರಿಯಾಂಕಾ ವಾದ್ರಾಗೆ ಪ್ರೀತಿ ಜಿಂಟಾ ಟಾಂಗ್‌?: ನೆಟ್ಟಿಗರ ಚರ್ಚೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Udupi: ಹಾವು ಕಡಿದು ಕೃಷಿಕ ಸಾವು

7-udupi

Request: ಕರಕುಶಲ ಕರ್ಮಿಗಳಿಗೆ ಸಕಾಲದಲ್ಲಿ ಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸೂಚಿಸಿ

1

Malpe: ತಂತಿಯಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌; ಹೊತ್ತಿ ಉರಿದ ಗೂಡ್ಸ್‌ ವಾಹನ

missing

Udupi: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

8

Udupi: ಅಂಬಲಪಾಡಿ ಓವರ್‌ಪಾಸ್‌ ಕಾಮಗಾರಿ ಆರಂಭ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Darren-Sammy

Head Coach: ವೆಸ್ಟ್‌ ಇಂಡೀಸ್‌ ಎಲ್ಲ ಮಾದರಿಗೂ ಡ್ಯಾರನ್‌ ಸಮ್ಮಿ ಕೋಚ್‌

Rajya Sabha: ಕಾಂಗ್ರೆಸ್‌ನ 1 ದೇಶ-2 ಸಂವಿಧಾನ ನೀತಿಗೆ ಅಂತ್ಯ ಹಾಡಿದ್ದೇ ಬಿಜೆಪಿ: ನಡ್ಡಾ

Rajya Sabha: ಕಾಂಗ್ರೆಸ್‌ನ 1 ದೇಶ-2 ಸಂವಿಧಾನ ನೀತಿಗೆ ಅಂತ್ಯ ಹಾಡಿದ್ದೇ ಬಿಜೆಪಿ: ನಡ್ಡಾ

1971 ಯುದ್ಧದ ಚಿತ್ರ ಮಾಣಿಕ್‌ ಷಾ ಕೇಂದ್ರದಲ್ಲಿ ಅಳವಡಿಕೆ: ಸೇನೆ ಹೇಳಿಕೆ

1971 ಯುದ್ಧದ ಚಿತ್ರ ಮಾಣಿಕ್‌ ಷಾ ಕೇಂದ್ರದಲ್ಲಿ ಅಳವಡಿಕೆ: ಸೇನೆ ಹೇಳಿಕೆ

Supreme Court: ಆಡಳಿತ ವಿಳಂಬದಿಂದ ಅಕ್ರಮ ನಿರ್ಮಾಣ ಸಕ್ರಮ ಆಗುವುದಿಲ್ಲ

Supreme Court: ಆಡಳಿತ ವಿಳಂಬದಿಂದ ಅಕ್ರಮ ನಿರ್ಮಾಣ ಸಕ್ರಮ ಆಗುವುದಿಲ್ಲ

Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!

Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.