ಉಡುಪಿ: ಜೀವಬೆದರಿಕೆ ದೂರು ದಾಖಲು
Team Udayavani, Dec 18, 2022, 12:29 AM IST
ಉಡುಪಿ: ವ್ಯಕ್ತಿಯೊಬ್ಬರನ್ನು ಬಲವಂತವಾಗಿ ಕಾರಿನಲ್ಲಿ ಕುಳ್ಳಿರಿಸಿ ಕೊಂಡು ಕರೆದುಕೊಂಡು ಹೋಗಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಶಿರಿಬೀಡುವಿನ ಮಹಮ್ಮದ್ ರಿಯಾಜ್ ಅವರನ್ನು ಆರೋಪಿ ರಶೀದ್ ಮೂಡನಿಡಂಬೂರು ಗ್ರಾಮದ ಮಾಂಡವಿ ಗ್ರೀನ್ಸ್ ಸರಸ್ವತಿ ಸ್ಕೂಲ್ನ ಹಿಂಭಾಗದ ತನ್ನ ಮನೆಗೆ ಬರುವಂತೆ ತಿಳಿಸಿದ್ದರು. ಅಲ್ಲಿಗೆ ಹೋದಾಗ ಮಹಮ್ಮದ್ ರಿಯಾಜ್ ಅಡ್ಡಗಟ್ಟಿ ತನ್ನ ಬಿಳಿ ಬಣ್ಣದ ಫಾರ್ಚೂನರ್ ಕಾರಿನಲ್ಲಿ ಕುಳ್ಳಿರಿಸಿಕೊಂಡು ಹಣ ನೀಡುವಂತೆ ಕೇಳಿದ್ದರು.
ಮಹಮ್ಮದ್ ರಿಯಾಜ್ ಅವರು ಎಲ್ಲ ಹಣ ಈಗಾಗಲೇ ಕೊಟ್ಟಿರು ವುದಾಗಿ ಹೇಳಿದಾಗ, ಮಹಮ್ಮದ್ ರಿಯಾಜ್ ಅವರ ತಲೆ ಹಾಗೂ ಮುಖಕ್ಕೆ ಕೈಯಿಂದ ಹೊಡೆದು ಕಾರಿನಲ್ಲಿ ಮಲ್ಪೆಗೆ ಕರೆದುಕೊಂಡು ಹೋಗಿ ಒತ್ತಾಯಪೂರ್ವಕವಾಗಿ ದಾಖಲಾತಿಗಳಿಗೆ ಸಹಿ ಹಾಕಿಸಿಕೊಂಡು ಚೆಕ್ಗಳನ್ನು ಪಡೆದುಕೊಂಡಿದ್ದರು.
ಬಳಿಕ ಹಲ್ಲೆ ನಡೆಸಿ ಅಂಬಾಗಿಲಿನ ಸೆಕೆಂಡ್ ಹ್ಯಾಂಡ್ ಬಝಾರ್ ಬಳಿ ತನ್ನ ಮೊಬೈಲ್ನಿಂದ ಸ್ತೆಫ್ ಮತ್ತು ಅಕ್ರಂಗೆ ಕರೆ ಮಾಡಿದ್ದ. ಆತ ಕೂಡ ಇವರಿಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.