Udupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗ
Team Udayavani, Sep 10, 2024, 1:05 AM IST
ಮಹಾಭಾರತ ಯುದ್ಧ ಧರ್ಮಸಂಗ್ರಾಮ. ಇದರಲ್ಲಿ ಭಾಗವಹಿಸುವುದು ಅರ್ಜುನನಿಗೆ ಸ್ವಧರ್ಮಭೂತವಾದುದು. ಮನುಷ್ಯನಿಗೆ ಸ್ವಧರ್ಮಭೂಷಿತವಾದ ಅವಕಾಶ ಸಿಕ್ಕಿಯೇ ಸಿಗುತ್ತದೆ. ಏಕೆಂದರೆ ಸ್ವಧರ್ಮವಿಲ್ಲದ ವ್ಯಕ್ತಿಯೇ ಜಗತ್ತಿನಲ್ಲಿರುವುದಿಲ್ಲ. ಇಂತಹ ಅವಕಾಶ ಸಿಕ್ಕಿದಾಗ ಅದನ್ನು ಎಂದೆಂದಿಗೂ ಬಿಡಬಾರದು, ಬಿಟ್ಟರೆ ಕೇವಲ ಅವಕಾಶವಂಚಿತನಾಗುವುದು ಮಾತ್ರವಲ್ಲ, ಪಾಪಕರವೂ ಹೌದು. ಅರ್ಜುನನಿಗೂ ಅಧರ್ಮದ ವಿರುದ್ಧ ಹೋರಾಡುವ ಸ್ವಧರ್ಮ ಆಚರಿಸಲು ಅವಕಾಶ ಎದುರು ಬಂದಾಗ ಕೈಚೆಲ್ಲಿ ಕುಳಿತ. ಶತ್ರುಗಳಲ್ಲಿಯೂ ಅತಿ ಸೂಕ್ತ ಶತ್ರುಗಳೆಂಬ ವರ್ಗವಿದೆಯೋ ಎಂದರೆ ಆಶ್ಚರ್ಯವಾಗಬಹುದು.
ಅಂತಹ ಶತ್ರು ಅರ್ಜುನನಿಗೆ ದುರ್ಯೋಧನನ ಕಡೆಯವರು ಸಿಕ್ಕಿದ್ದರು, ಭಾರತಕ್ಕೆ ಪಾಕಿಸ್ಥಾನ ಸಿಕ್ಕಿದ ಹಾಗೆ. ಕೆಲವರು ಕೆಲವು ಸಮಯದಲ್ಲಿ ಕೆಟ್ಟವರಂತೆ ಪ್ರಭಾವಲಯದ ಕಾರಣದಿಂದ ವರ್ತಿಸಬಹುದು. ಆದರೆ ಪಾಕಿಸ್ಥಾನದವರು ಹಾಗಲ್ಲ, ದುರ್ಯೋಧನನಂತೆ ಸರ್ವಾತ್ಮನಾ ಕೆಟ್ಟವರು. ಅದೊಂದು ತರಹ ದಾಯಾದಿ ಕಲಹ, ಇದೊಂದು ತರಹ ದಾಯಾದಿ ಕಲಹ.
ಇಂತಹವರನ್ನು ಹೊಡೆದರೆ ಪುಣ್ಯವೇ ವಿನಾ, ಪಾಪದ ಸೋಂಕೇ ಇಲ್ಲ. ಗೀತೆಯನ್ನು ಮೂರೇ ಅಕ್ಷರಗಳಲ್ಲಿ ಸಂಗ್ರಹಿಸಿ ಹೇಳಿ ಅಂದರೆ “ಸ್ವಧರ್ಮ’ ಎಂದು ಹೇಳಬಹುದು. ಇದುವೇ ಗೀತೆಯ ಮೊದಲಕ್ಷರ “ಧರ್’+ ಕೊನೆಯಕ್ಷರ “ಮ’ ಜತೆ ಸೇರಿ ಧರ್ಮ ಉಂಟಾಗುವುದು. ಧರ್ಮವೆಂದರೆ ಸ್ವಧರ್ಮವೇ,eligion ಅಲ್ಲ, ಪ್ರತಿಯೊಬ್ಬನಿಗೂ ತನ್ನದೇ ಆದ ಧರ್ಮ ಇದ್ದೇ ಇರುತ್ತೆ.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.