Udupi: ಗೀತಾರ್ಥ ಚಿಂತನೆ-121: ನಿದ್ರೆಗೂ, ಮೂರ್ಛೆಗೂ ವ್ಯತ್ಯಾಸ
Team Udayavani, Dec 12, 2024, 12:15 AM IST
ಅರ್ಜುನನಿಗೆ ಆದದ್ದು ದುಃಖ, ಕೃಷ್ಣ ಉತ್ತರ ಕೊಡುವಾಗ ಮೋಹದ ಉತ್ತರ ಕೊಡುತ್ತಾನಲ್ಲವೆ? ಪ್ರಶ್ನೆಯೊಂದು, ಉತ್ತರವೊಂದು ಆಯಿತಲ್ಲ? ಹಾಗಲ್ಲ, ಮೋಹವೇ ದುಃಖ. ಮೋಹವೆಂದರೆ ಮೂರ್ಛೆ ಹೋಗುವುದೆಂದು. ನಿದ್ರೆಗೂ ಮೂರ್ಛೆಗೂ ವ್ಯತ್ಯಾಸವಿದೆ. ನಿದ್ರೆ = ಸುಖ, ಮೂರ್ಛೆ=ದುಃಖಾನುಭವ. “ನೀನು ಬರೇ ದುಃಖಾನುಭವದಲ್ಲಿದ್ದಿ. ಅಲ್ಲಿ ಯಾವ ಜ್ಞಾನವಿಲ್ಲ’ ಎನ್ನುತ್ತಾನೆ ಕೃಷ್ಣ. ಜ್ಞಾನವಿದ್ದು ದುಃಖವಿರುವುದು ಬೇರೆ. ಶೇ.100 ದುಃಖವೆಂದರೆ ಮೂರ್ಛೆಗೆ ಜಾರಿದರೆಂದರ್ಥ. ಮೂರ್ಛಾವಸ್ಥೆ ಅಂದರೆ ಕೇವಲ ದುಃಖದ ಅವಸ್ಥೆ. ತಿಳಿದುಕೊಂಡವರು ಮೂರ್ಛೆಗೆ ಹೋಗುವುದಿಲ್ಲ. ತಿಳಿದುಕೊಂಡವರಿಗೆ ಸ್ವಲ್ಪ ದುಃಖವಾಗುತ್ತದೆ ನಿಜ. ಪಂಡಿತರಿಗೆ ದುಃಖವಾಗುವುದಿಲ್ಲವೆಂದರ್ಥವೆ? ಮೋಹವಾಗುವುದಿಲ್ಲವೆಂದರ್ಥ. ಕೇವಲ ದುಃಖಾತ್ಮಕವಾಗುವುದು ಪಂಡಿತರಿಗೆ ಆಗುವುದಿಲ್ಲ.
ಪಂಡಿತರಿಗೆ ದುಃಖವಾದರೂ ಕರ್ತವ್ಯ ಬಿಡುವುದಿಲ್ಲ. ಬರೇ ಯಂತ್ರದಂತಲ್ಲ, ಅವರಿಗೂ ಸಂವೇದನೆಗಳಿವೆ. ಭಾವನೆಗಳು ಕೈಮೀರಿ ಹೋಗುವ ಸ್ಥಿತಿಯಲ್ಲಿರುವುದಿಲ್ಲ. ವಾರ್ಧಕ್ಯದಲ್ಲಿ ಪಂಡಿತರಿಗೂ ದುಃಖ ಆಗುವುದಿಲ್ಲವೆನ್ನಲಾಗದು. ಪಂಡಿತರಿಗೆ ಸಾಧನೆ ಮಾಡಲಿಕ್ಕಾಗಲಿಲ್ಲವಲ್ಲ ಎಂಬ ದುಃಖವಿದ್ದರೆ, ತಾಮಸಿಕರಿಗೆ ತಿನ್ನಲಿಕ್ಕಾಗುವುದಿಲ್ಲ ಎಂಬ ದುಃಖವಾಗುತ್ತದೆ. ಪಂಡಿತರಾರಿಗೂ ಮೋಹ ಹಂತದ ದುಃಖವಾಗುವುದಿಲ್ಲ. ಜೀವರಿಗೂ ಬಂಧುಮೋಹಪ್ರಯುಕ್ತವಾದ ದುಃಖವಾಗಬಾರದು.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,ಉಡುಪಿ
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ
JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್
Chandan Shetty: ಕಾಟನ್ ಕ್ಯಾಂಡಿ ಹಾಡು; ಚಂದನ್ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು
Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ
Sullia: ಅಸ್ವಸ್ಥ ಮಹಿಳೆ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.