Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ
Team Udayavani, Jan 11, 2025, 1:16 AM IST
ವೇದ ಪ್ರಾಮಾಣ್ಯವನ್ನು ಆಚಾರ್ಯತ್ರಯರೂ ಪ್ರತಿಪಾದಿಸಿದ್ದಾರೆ. ಪ್ರಾಮಾಣ್ಯ ಒಪ್ಪಿದ ಅನಂತರ ಚರ್ಚೆ ಬೇರೆ. ಶಾಸ್ತ್ರಮೂಲವೆಂದರೆ ವೇದ. ಕಟ್ಟಡದ ಪಂಚಾಂಗವಿದ್ದಂತೆ. ಅನಾದಿಕಾಲದಿಂದ ಒಪ್ಪಿಕೊಂಡ ವಾಕ್ಯ ವೇದಪ್ರಮಾಣ್ಯವನ್ನು ಜೀವನಾದವನು ಒಪ್ಪಬೇಕು. ವೇದಪ್ರಾಮಾಣ್ಯ ಒಪ್ಪಿದರೆ, ಪುಣ್ಯಪಾಪ ಒಪ್ಪಬೇಕಾಗುತ್ತದೆ. ಆಗ ಧಾರಣೆಯಾಗುತ್ತದೆ. ತನ್ನ ಬುದ್ಧಿಯಲ್ಲಿ ವಿಮರ್ಶೆ ಮಾಡಿ ತಣ್ತೀವನ್ನು ದೃಢನಿಶ್ಚಯ ಮಾಡುವನೋ, ಯಾರಿಗೆ ಸತ್ಯ ನಿಶ್ಚಯವಾಗಿದೆಯೋ ಆತ ಧೀರ. ಆತನಿಗೆ ಮೋಹ ಎಂಬುದಿಲ್ಲ. ಪೌರುಷೇಯವನ್ನು ಒಪ್ಪುವುದರಲ್ಲಿ ದೋಷವಿರುವುದಿಲ್ಲ.
ಇಂತಹವರಿಗೆ ಎಷ್ಟು ದೃಢತೆ ಇರುತ್ತದೆ ಎಂದರೆ ನಮ್ಮ ವಿದ್ಯಾಗುರು ಶ್ರೀವಿದ್ಯಾಮಾನ್ಯತೀರ್ಥರನ್ನು ನೋಡಬೇಕು. “ನನಗೆ ತೊಂದರೆ ಮಾಡಿದ, ಹಾಗಾಯಿತು, ಹೀಗಾಯಿತು’ ಎಂದು ಹೇಳಿದರೆ “ನಿನಗೇಕೆ ಚಿಂತೆ? ಅವರ ಪುಣ್ಯ ನಿನಗೆ ಬಂತಲ್ಲ? ನಿನ್ನ ಪಾಪ ಅವನಿಗೆ ಹೋಯಿತು’ ಎನ್ನುತ್ತಿದ್ದರು. ಗಾಬರಿಯಾಗುವ ಪ್ರಶ್ನೆ ಇಲ್ಲ. ತೊಂದರೆ ಮಾಡಿದವ ಚೆನ್ನಾಗಿದ್ದಾನಲ್ಲ ಎಂದರೆ ಕರ್ಮ ಸಿದ್ಧಾಂತ ಒಪ್ಪಿದರಾಯಿತು. ಅದಕ್ಕಾಗಿಯೇ ದಾಸರು “ನಿಂದಕರಿರಬೇಕು…’ ಎಂದು ಹೇಳಿದರು. “ಧೀರಸ್ತತ್ರ ನ ಮುಹ್ಯತಿ’ ಎನ್ನುವುದು ಅರ್ಥಗರ್ಭಿತ. ಇದನ್ನು ಶ್ರೀಮದಾಚಾರ್ಯರು ಚೆನ್ನಾಗಿ ವಿವರಿಸಿದ್ದಾರೆ. “ನಿನಗೆ ಪರಲೋಕದ ಬಗ್ಗೆ ಸಂಶಯವಿದೆ, ದೇಹಾಭಿಮಾನವೂ ಇದೆ. ಇವೆರಡನ್ನು ಬಿಟ್ಟುಬಿಡು’ ಎಂದು ಕೃಷ್ಣ ಅರ್ಜುನನಿಗೆ ಹೇಳುತ್ತಾನೆ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.