Udupi ಗೀತಾರ್ಥ ಚಿಂತನೆ-155: ಶೀತೋಷ್ಣಕ್ಕೂ ಸುಖದುಃಖಕ್ಕೂ ಸಂಬಂಧ
Team Udayavani, Jan 14, 2025, 12:16 AM IST
ಮಾತ್ರಾ ಸ್ಪರ್ಶಾಸ್ತು ಕೌಂತೇಯ ಶೀತೋಷ್ಣಸುಖದುಃಖದಾಃ| (2-14 ಗೀತೆ). ಬಂಧುಗಳ ನಾಶವಾಗುತ್ತದೆ ಎಂಬ ಚರ್ಚೆ ನಡೆಯುವಾಗ ಶೀತೋಷ್ಣ ವಿಷಯವೇಕೆ ಬಂತು? ಅರ್ಜುನನಿಗಾದ ದುಃಖ ಸಹಜವಲ್ಲ ಎಂದು ಹೇಳಬೇಕಾಗಿದೆ. ಸುಖ ಶೀತಜನ್ಯ, ದುಃಖ ಉಷ್ಣಜನ್ಯ. ಆದ್ದರಿಂದ ವಿಯೋಗಜನ್ಯವಲ್ಲ. ಬಂಧುಗಳ ನಾಶವಾಗುವುದರಿಂದ ದುಃಖವಾಗುತ್ತದೆ. ಬಂಧುಗಳ ವಿಯೋಗದಿಂದ ದುಃಖವಲ್ಲ. ಎಲ್ಲ ಸುಖದುಃಖಗಳು ಶೀತೋಷ್ಣದಿಂದ ಆಗುವುದು.
ರಾಗವಿದ್ದರೆ ಶೀತ, ದ್ವೇಷವಿದ್ದರೆ ಉಷ್ಣ. ಇದು ದುಃಖಕ್ಕೆ ಕಾರಣ. ಕಚೇರಿಯಲ್ಲಿ ಏನೋ ಕಿರಿಕಿರಿಯಾಗಿ ಮಕ್ಕಳ ಮೇಲೆ ಸಿಟ್ಟುಕೊಂಡು ತಂದೆ ಹೊಡೆಯುತ್ತಾನೆ. ಇದರರ್ಥ ಮಕ್ಕಳನ್ನು ದ್ವೇಷಿಸುತ್ತಾನೆಂದೆ? ಅಲ್ಲ. ಬಂಧುಗಳು ಸತ್ತದ್ದರಿಂದ ಅರ್ಜುನನಿಗೆ ದುಃಖವಲ್ಲ. ರಾಗದ್ವೇಷದಿಂದ, ಅಭಿಮಾನದಿಂದ ದುಃಖವಾದದ್ದು. ಜಗತ್ತಿನಲ್ಲಿ ದಿನವೂ ಅದೆಷ್ಟೋ ಜನ ಸಾಯಬಹುದು, ಅದೆಷ್ಟೋ ಜನ ಹುಟ್ಟಬಹುದು. ಸತ್ತದ್ದಕ್ಕೆ ದುಃಖ ವ್ಯಕ್ತವಾಗುತ್ತದೋ? ಹುಟ್ಟಿದವರಿಗೆ ಹುಟ್ಟುಹಬ್ಬ ಆಚರಿಸುತ್ತಾರಾ? ನಮ್ಮ ಸಂಬಂಧಿಕರಾದರೆ ದುಃಖ, ಸುಖವಾಗುತ್ತದೆ. ಅಲ್ಲಿ ಅಟ್ಯಾಚ್ಮೆಂಟ್ ಇರುವುದರಿಂದ ಹೀಗಾಗುತ್ತದೆ. ವಾಸ್ತವದಲ್ಲಿ ಯಾರು ಯಾರಿಗೂ ಸಂಬಂಧವೇ ಇಲ್ಲ. ಇವರನ್ನು ಬಂಧುಗಳೆಂದು ತಿಳಿದುಕೊಂಡದ್ದೇ ತಪ್ಪು. ವಾಸ್ತವದ ಮೇಲೆ ನಿರ್ಧಾರ ಮಾಡಬೇಕು. ಹುಟ್ಟುವಾಗ ನಾವೇನಾದರೂ ತಂದಿದ್ದೇವಾ? ಆಮೇಲೆ ನನ್ನದೆನ್ನಲೇನರ್ಥ?
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.