Udupi: ಗೀತಾರ್ಥ ಚಿಂತನೆ 156: ಇಲ್ಲದಿದ್ದದ್ದರ ಸೃಷ್ಟಿ ಇಲ್ಲ,ಇದ್ದದ್ದರ ನಾಶವೂ ಇಲ್ಲ
Team Udayavani, Jan 15, 2025, 2:05 AM IST
ನಾಸತೋ ವಿದ್ಯತೇ ಭಾವೋ ನಾಭಾವೋ ವಿದ್ಯತೇ ಸತಃ|
ಉಭಯೋರಪಿ ದೃಷ್ಟೋದ್ಯಂತಸ್ತ್ವನಯೋಸ್ತಣ್ತೀ ದರ್ಶಿಭಿಃ|| (ಗೀತೆ 2-16)
ಈ ಶ್ಲೋಕದಲ್ಲಿ ಕೃಷ್ಣ ತನ್ನನ್ನೇ ದೃಷ್ಟಾಂತವಾಗಿ ತೋರಿಸುತ್ತಾನೆ. “ನಾನು ಹೇಗೆ ನಿತ್ಯವೋ ಹಾಗೆ ನೀವೂ ನಿತ್ಯರೇ’ ಎನ್ನುತ್ತಾನೆ ಕೃಷ್ಣ. “ನೀನೇ ಅನಿತ್ಯ’ ಎಂದು ಹೇಳುತ್ತಿ ಎಂಬ ಪ್ರಶ್ನೆಗೆ ಪದಾರ್ಥಗಳು ನಿತ್ಯವಾಗಿವೆ. ಇಲ್ಲದೆ ಇದ್ದದ್ದು ಸೃಷ್ಟಿ ಆಗುವುದಿಲ್ಲ, ಇದ್ದ ಪದಾರ್ಥದ ನಾಶವೂ ಇಲ್ಲ, ಇಡೀ ಕಾಲದಲ್ಲಿದ್ದವರಿಗೆ ಮಾತ್ರ ಇದು ಗೊತ್ತಾಗುತ್ತದೆ. ಪರಿಮಿತ ಕಾಲದಲ್ಲಿದ್ದವರಿಗೆ ಹೇಗೆ ಗೊತ್ತಾಗುತ್ತದೆ? ಈ ನಿರ್ಣಯವನ್ನು ತಣ್ತೀದರ್ಶಿಗಳು ಮಾಡಿದ್ದಾರೆ. ತಣ್ತೀದರ್ಶಿ =ಯಥಾರ್ಥ ದರ್ಶಿಗಳು. ತ್ರಿಕಾಲ ಜ್ಞಾನಿಗಳು ನಿರ್ಣಯ ಮಾಡಿದ್ದನ್ನು ಹೇಳುತ್ತಿದ್ದೇನೆ ವಿನಾ ನಾನಾಗಿಯೇ ಹೇಳುತ್ತಿಲ್ಲ.
ಬ್ರಹ್ಮಸಾಕ್ಷಾತ್ಕಾರ ಆದವರು, ಅಪರೋಕ್ಷಜ್ಞಾನಿಗಳು ಹೇಳಿದ್ದು ಎಂದು ಕೃಷ್ಣ ಸ್ಪಷ್ಟಪಡಿಸುತ್ತಾನೆ. ಭೌತ ವಿಜ್ಞಾನದ ಅರ್ಥದಲ್ಲಿ ಹೇಳುವುದಾದರೆ ಯಾವುದೇ ಒಂದು ಪಾರ್ಟಿಕಲ್ ನಾಶವಾಗುವುದಿಲ್ಲ. ಎನರ್ಜಿ ಮತ್ತು ಮ್ಯಾಟರ್ ಎರಡು ಬದಲಾಗುತ್ತವೆ ಅಷ್ಟೆ.. ಮ್ಯಾಟರ್ ಎನರ್ಜಿ ಆಗುತ್ತದೆ, ಎನರ್ಜಿ ಮ್ಯಾಟರ್ ಆಗುತ್ತದೆ. ಪ್ರಳಯ ಅಂದರೆ ಮ್ಯಾಟರ್ ಎನರ್ಜಿ ಆಗುವುದು. ಸೃಷ್ಟಿ ಅಂದರೆ ಎನರ್ಜಿ ಮ್ಯಾಟರ್ ಆಗುವುದು. Energy can neither be created, nor destroyed ಎಂಬ ಹೇಳಿಕೆ ಇದೆ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.