Udupi: ಗೀತಾರ್ಥ ಚಿಂತನೆ-157: ಸೂಕ್ಷ್ಮ ಜಗತ್ತೂ, ಸ್ಥೂಲ ಜಗತ್ತೂ ಅನಂತ
Team Udayavani, Jan 16, 2025, 12:22 AM IST
ಇಲ್ಲದೆ ಇದ್ದದ್ದು ಹಿಂದೆಂದೂ ಇಲ್ಲವೆಂದಲ್ಲ ಬದಲಾದದ್ದಷ್ಟೆ. ಇಲ್ಲದೆ ಇದ್ದ ಭೇದವು ಆಗುವುದಿಲ್ಲ, ಇದ್ದ ಐಕ್ಯವು ನಾಶವಿಲ್ಲ. ಯಾವುದೇ ವಸ್ತು ಇದೆ ಎಂದರೆ ಅದರ ಪೂರ್ವರೂಪ ಯಾವುದೋ ರೂಪದಲ್ಲಿತ್ತು ಎಂದೇ ಅರ್ಥ. ಮ್ಯಾಕ್ರೋ ವರ್ಲ್ಡ್, ಮೈಕ್ರೋ ವರ್ಲ್ಡ್ ಎರಡೂ ಅನಂತ ಎನ್ನುವುದು ಇದರಿಂದ ಗೊತ್ತಾಗುತ್ತದೆ. ಯಾವುದೇ ಪಾರ್ಟಿಕಲ್‌ಗಳನ್ನು ಪೂರ್ಣ ನಾಶ ಮಾಡಲು ಆಗುವುದಿಲ್ಲ. ಚಿಕ್ಕದು, ಚಿಕ್ಕದು ಆಗಬಹುದು. ಯಾವುದೋ ಒಂದು ಕಣವೇ ಆಗಲಿ ಅದಕ್ಕೆ ದಶದಿಕ್ ಸಂಬಂಧವಿರುತ್ತದೆ. ಹತ್ತು ಪಾರ್ಟ್‌ಗಳಲ್ಲಿ ಒಂದು ಪಾರ್ಟ್ ತೆಗೆದರೆ ಅದಕ್ಕೆ ಸಂಬಂಧವಿಲ್ಲ. ಆ ಭಾಗವನ್ನು ಪ್ರತ್ಯೇಕ ಮಾಡಿದರೂ ಎಷ್ಟು ಹೋದರೂ ಮತ್ತೆ ಇದ್ದೇ ಇದೆ. ನಮಗೆ ಕಣ್ಣಿಗೆ ಕಾಣದೆ ಹೋಗಬಹುದಾದ ಅತಿಸೂಕ್ಷ್ಮವಾಗಿರಬಹುದು.
ಮ್ಯಾಕ್ರೋ ವರ್ಲ್ಡ್ ಕೂಡ ಹಾಗೆಯೇ. ಅದಕ್ಕೂ ಆಚೆ ಆಕಾಶ. ಅದರ ಆಚೆ ಏನುಂಟು? ಮತ್ತೂ ಆಕಾಶವಿದ್ದೇ ಇದೆ. ಹೀಗೆ ಸೂಕ್ಷ್ಮ ಜಗತ್ತೂ, ಸ್ಥೂಲ ಜಗತ್ತೂ ಅನಂತ. ಕಾಲವೂ ಹೀಗೆ. ದಶ ಲಕ್ಷ ವರ್ಷ, ದಶ ಕೋಟಿ ವರ್ಷ, ಶತ ಕೋಟಿ ವರ್ಷಗಳ ಆಮೇಲೆ ಎಂದರೇನು? ಕಾಲವೂ, ದೇಶವೂ, ಇರುವ ವಸ್ತುಗಳೂ ಅನಂತ. ಆದ್ದರಿಂದ ಇದ್ದಂತಹ ವಸ್ತುಗಳು ಅವಿನಾಶಿ. ಬ್ರಹ್ಮಾಂಡ (ಗ್ಯಾಲೆಕ್ಸಿ) ಅಂದರೆ ಒಂದು ಯುನಿಟ್. ಅಂತಹ ನೂರಾರು ಯುನಿಟ್‌ಗಳಿವೆ. ಕ್ಷೀರಪಥ/ಆಕಾಶಕಾಯಗಳು ನೂರಾರು ಇವೆ. ಬ್ರಹ್ಮಾಂಡ, ವಿಶ್ವಗಳ ಅಗಾಧತೆ ಬಹಳ, ಅದ್ಭುತ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ
Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ
Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ
Chamarajpete: ಕೆಚ್ಚಲು ಕೊಯ್ದ ಕೇಸ್; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.